newsfirstkannada.com

ಬಿಬಿಎಂಪಿ ಅಗ್ನಿ ಅವಘಡ ಕೇಸ್​ಗೆ ಟ್ವಿಸ್ಟ್​​; ಚೀಫ್​​ ಇಂಜಿನಿಯರ್​​​ ಶಿವಕುಮಾರ್​ ಸಾವು

Share :

30-08-2023

    ಬಿಬಿಎಂಪಿ ಅಗ್ನಿ ಅವಘಡ ಕೇಸ್​ಗೆ ಬಿಗ್​ ಟ್ವಿಸ್ಟ್​​

    ಚೀಫ್​​ ಇಂಜಿನಿಯರ್​​​ ಶಿವಕುಮಾರ್​ ನಿಧನ..!

    ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ್​​

ಬೆಂಗಳೂರು: ಅಮ್ಮ ಉರಿ.. ಅಪ್ಪ ಮೈ ತುಂಬಾ ಉರಿ. ಆಗ್ತಾಯಿಲ್ಲ.. ಮೈ ಚರ್ಮಗಳೆಲ್ಲಾ ಕಿತ್ತು ಬರ್ತಾಯಿದೆ. ಏನಾದ್ರು ಮಾಡಿ ಕಾಪಾಡಿ.. ನೋವು ತಡಿಯೋಕಾಗ್ತಾಯಿಲ್ಲ ಅಂತ ಅಂದು ಇವ್ರೆಲ್ಲಾ ಗೋಗರೆದಿದ್ರು. ಕಣ್ಣೀರು ಹಾಕಿದ್ರು. ಅದ್ರಲ್ಲೂ ಬಿಬಿಎಂಪಿ ಕ್ವಾಲಿಟಿ ಕಂಟ್ರೋಲ್ ರೂಂಗೆ ಬಿದ್ದ ಬೆಂಕಿಯಲ್ಲಿ ಗುಣ ನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್ ಸಿ.ಎಂ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ರು. ಇವತ್ತು ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್​ ಇಹಲೋಕ ತ್ಯಜಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಆಗಸ್ಟ್ 11ರಂದು ನಡೆದ ಅವಘಡದಲ್ಲಿ ಮುಖ್ಯ ಇಂಜಿನಿಯರ್ ಶಿವಕುಮಾರ್​ಗೆ 25 ಪರ್ಸೆಂಟ್ ಸುಟ್ಟ ಗಾಯವಾಗಿತ್ತು. ಪ್ರಾರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಶಿವಕುಮಾರ್​ ಅವ್ರನ್ನ ಶಿಫ್ಟ್ ಮಾಡಲಾಗಿತ್ತು.

ಆದ್ರೆ ವೈದ್ಯರ ಪ್ರಯತ್ನ, ಕುಟುಂಬಸ್ಥರ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ಕಳೆದ 16 ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ಮಾಡ್ತಿದ್ದ 45 ವರ್ಷ ವಯಸ್ಸಿನ ಸಿ.ಎಂ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ.

ಅಪ್ಪನ ಬರುವಿಕೆಗಾಗಿ ಕಾದುಕುಳಿತಿದ್ದ ಮಕ್ಕಳಿಗೆ ಆಘಾತ

ಬಿಬಿಎಂಪಿ ಅಗ್ನಿ ಅವಘಡ ಗುಣ ನಿಯಂತ್ರಣ ವಿಭಾಗದ ಮುಖ್ಯ ಇಂಜಿನಿಯರ್ ಶಿವಕುಮಾರ್ ಪ್ರಾಣವನ್ನಷ್ಟೇ ಕಸಿದುಕೊಂಡಿಲ್ಲ. ತಂದೆಯ ಮೇಲೆ ಅಗಾಧವಾದ ನಂಬಿಕೆ, ಪ್ರೀತಿ ಇಟ್ಟಿದ್ದ.. ಅಪ್ಪ ಇವತ್ತು ಬರ್ತಾರೆ ನಾಳೆ ಬರ್ತಾರೆ ಅಂತ ಕಾದು ಕುಳಿತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ತಬ್ಬಲಿ ಮಾಡಿದೆ.

ಅದೇನೇ ಇರಲಿ. ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ಯಾರದ್ದೋ ತಪ್ಪಿಗೆ ಶಿವಕುಮಾರ್ ಇನ್ನಿಲ್ಲವಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದವರನ್ನು ಕಳೆದುಕೊಂಡ ಮನೆ ಮಂದಿ ಬದುಕು ಕತ್ತಲಲ್ಲಿ ಮುಳುಗಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಬಿಎಂಪಿ ಅಗ್ನಿ ಅವಘಡ ಕೇಸ್​ಗೆ ಟ್ವಿಸ್ಟ್​​; ಚೀಫ್​​ ಇಂಜಿನಿಯರ್​​​ ಶಿವಕುಮಾರ್​ ಸಾವು

https://newsfirstlive.com/wp-content/uploads/2023/08/Shivkumar.jpg

Load More