newsfirstkannada.com

ಬಿಬಿಎಂಪಿ ನಿರ್ಲಕ್ಷ್ಯದಿಂದ ಗರ್ಭಿಣಿಯರ ಬದುಕಲ್ಲಿ ಕತ್ತಲು.. ನೀವು ಓದಲೇಬೇಕಾದ ಸ್ಟೋರಿ!

Share :

31-10-2023

    ಗರ್ಭಿಣಿಯರ ಜೀವದ ಜೊತೆ ಚೆಲ್ಲಾಟವಾಡ್ತಿದ್ಯಾ ಪಾಲಿಕೆ?

    ಬಿಬಿಎಂಪಿ ನಿರ್ಲಕ್ಷ್ಯದಿಂದ ಗರ್ಭಿಣಿಯರ ಬದುಕಲ್ಲಿ ಕತ್ತಲು

    ರಸ್ತೆ ದಾಟಲು ಹೋಗಿ ಅಪಘಾತಕ್ಕೀಡಾಗ್ತಿರುವ ಗರ್ಭಿಣಿಯರು

ಬೆಂಗಳೂರು: ಗರ್ಭಿಣಿಯರ ಜೀವದ ಜೊತೆ ಬಿಬಿಎಂಪಿ ಚೆಲ್ಲಾಟವಾಡ್ತಿದ್ಯಾ? ಇಂತಹದೊಂದು ಪ್ರಶ್ನೆ ಮೂಡಲು ಕಾರಣವಾಗಿದ್ದು, ಎನ್​.ಆರ್ ಕಾಲೋನಿಯಲ್ಲಿರುವ ಬಿಬಿಎಂಪಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದ ಘಟನೆ.

ಎಸ್​. ಇದು ಎನ್.ಆರ್ ಕಾಲೋನಿಯಲ್ಲಿ ನಡೆದ ಘಟನೆ. ಇದೇ ಬಿಬಿಎಂಪಿ ಆಸ್ಪತ್ರೆಯ ಮುಂಭಾಗದಲ್ಲಿ 2 ಕೋಟಿ ವೆಚ್ಚದಲ್ಲಿ ವರ್ಷಗಳ ಹಿಂದೆ ಸ್ಕೈವಾಕ್ ನಿರ್ಮಾಣ ಮಾಡಲಾಗಿತ್ತು. ಒಂದು ಕಡೆಯಲ್ಲಿ ಆಸ್ಪತ್ರೆಯ ಮುಂಭಾಗ ನೋ ಸಿಗ್ನಲ್ ವಾತಾವರಣ ಇದ್ರೆ, ಮತ್ತೊಂದು ಕಡೆಯಲ್ಲಿ ಎರಡೂ ಕಡೆಯಿಂದ ವಾಹನ ವೇಗವಾಗಿ ಬರೋದ್ರಿಂದ, ಹೆರಿಗೆ ಆಸ್ಪತ್ರೆಗೆ ಬರುವ ಗರ್ಭಿಣಿಯರು ರೋಡ್ ಕ್ರಾಸ್ ಮಾಡಲು ಹೆಣಗಾಡ್ತಿದ್ರು. ಇದೇ ಕಾರಣಕ್ಕೆ ಗರ್ಭಿಣಿಯರಿಗೆ ಸಹಾಯ ಆಗಲೆಂದೇ ಇಲ್ಲಿ ಸ್ಕೈವಾಕ್ ನಿರ್ಮಾಣ ಮಾಡ್ಲಾಗಿತ್ತು. ಬಟ್ ದುರಂತ ಏನಂದ್ರೆ, ಸ್ಕೈವಾಕ್​ ನಿರ್ಮಾಣವಾಗಿ ವರ್ಷನೇ ಕಳೆದ್ರೂ ಕೂಡ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲದಂತ್ತಾಗಿದೆ. ಯಾಕಂದ್ರೆ ಸ್ಕೈವಾಕ್​ಗೆ ಲಿಫ್ಟ್​ ವ್ಯವಸ್ಥೆ ಇಲ್ಲದಂತ್ತಾಗಿದ್ದು, ಇದರಿಂದ ಒಟ್ಟು 80 ಮೆಟ್ಟಿಲುಗಳನ್ನ ಹತ್ತಿಳಿಯಲು ಗರ್ಭಿಣಿಯರು, ವೃದ್ಧರಿಗೆ ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಅನಿವಾರ್ಯವಾಗಿ ರೋಡ್ ಕ್ರಾಸ್ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಲುಕ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ, ಇತ್ತೀಚಿಗಷ್ಟೇ ಗರ್ಭಿಣಿಯೊಬ್ಬರು ರೋಡ್​ ಕ್ರಾಸ್ ಮಾಡಲು ಹೋದಾಗ ವಾಹನ ಗುದ್ದಿರುವ ಘಟನೆ ಕೂಡ ನಡೆದಿದೆ.

ಆಸ್ಪತ್ರೆಯ ಮುಂಭಾಗ ಸಿಗ್ನಲ್ ಕೂಡ ಇಲ್ಲದಿರೋದ್ರಿಂದ, ಮಕ್ಕಳು, ವೃದ್ಧರು ಪ್ರಾಣವನ್ನ ಕೈಯಲ್ಲಿ ಹಿಡಿದೇ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ. ಎರಡು ಕಡೆಯಿಂದ ವಾಹನ ವೇಗದಲ್ಲಿ ಬರ್ತಿದ್ದು, ರಸ್ತೆ ದಾಟುವಾಗ ಆ್ಯಕ್ಸಿಡೆಂಟ್ ಆಗುತ್ತಿರೋದ್ರಿಂದ ಜನರು ಭಯ ಭೀತರಾಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ, ಸ್ಥಳೀಯ ಶಾಸಕರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲವೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಸ್ಕೈವಾಕ್ ನಿಂದ ಉಪಯೋಗ ಆಗದಿರೋದ್ರಿಂದ, ಜನರು ಅನಿವಾರ್ಯವಾಗಿ ರಸ್ತೆ ದಾಟಲು ಹೋಗಿ ತೊಂದ್ರೆ ಗೀಡಾಗ್ತಿದ್ದಾರೆ. ಇನ್ನಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು ಎಚ್ಚೆತ್ತುಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಬಿಎಂಪಿ ನಿರ್ಲಕ್ಷ್ಯದಿಂದ ಗರ್ಭಿಣಿಯರ ಬದುಕಲ್ಲಿ ಕತ್ತಲು.. ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/10/NR-Colony.jpg

Load More