newsfirstkannada.com

ನೀವು ಸೈಟ್​​​ ಖಾತಾ ಮಾಡಿಸಲು ಸರ್ಕಾರಿ ಕಚೇರಿ ಹೋಗ್ತೀರಾ..? ಹಾಗಾದ್ರೆ ಇದು ಓದಲೇಬೇಕಾದ ಸ್ಟೋರಿ!

Share :

Published September 2, 2023 at 7:54pm

    ಖಾತಾ ಮಾಡಿಕೊಡಲು ಆನ್ ಲೈನ್​​ನಲ್ಲಿ ಹರಿಕಿಶನ್ ಅರ್ಜಿ

    ಕಚೇರಿಗೆ ಬರಲು ಹೇಳಿದ ಟಾಕ್ಸ್ ಇನ್ಸ್​ಪೆಕ್ಟರ್ ಹೇಮರಾಜ್

    ಫ್ಲ್ಯಾಟ್ ಖಾತಾ ಬದಲಾವಣೆಗೆ ಎಲ್ಲಾ ದಾಖಲೆ ಸಲ್ಲಿಸಲಾಗಿತ್ತು

ಬೆಂಗಳೂರು: 12 ಸಾವಿರ ಕೊಟ್ರೆ ಡೀಲ್​ ಅಂತೆ ಇಲ್ಲಾಂದ್ರೆ ನೋ ಡೀಲ್​. ಇದು ಬಿಬಿಎಂಪಿ ಕರ್ಮಕಾಂಡ, ಲೋಕಾಯುಕ್ತ ದಾಳಿ ನಡೆದ್ರೂ ನಿಲ್ಲದ ಲಂಚಾವತಾರ. ರಾಜರೋಷವಾಗಿಯೇ ನಡೀತಿದೆ ಲಕ್ಷ ಲಕ್ಷ ವಸೂಲಿ. ನ್ಯೂಸ್​ ಫಸ್ಟ್​​ ಸುದ್ದಿ ಬಿತ್ತರಿಸುತ್ತಿದ್ದಂತೆ ಬಿಗ್​ ಇಂಪ್ಯಾಕ್ಟ್​​.

ಹೌದು, ಬರೋಬ್ಬರಿ 30 ವರ್ಷಗಳಿಂದ ಮಹದೇವಪುರ ವಲಯದ ಬಿಬಿಎಂಪಿ ಕಚೇರಿಯಲ್ಲಿ ನಡೆದುಕೊಂಡು ಬರ್ತಿದ್ದ ಲಂಚಾವತಾರದ ಕಥೆಯನ್ನ ನ್ಯೂಸ್​ ಫಸ್ಟ್​​ ಸಾಕ್ಷಿ ಸಮೇತ ಪ್ರಸಾರ ಮಾಡಿತ್ತು. ಒಂದು ನಿವೇಶನಾ ಖಾತಾಗಾಗಿ ಲಂಚ ಸ್ವೀಕರಿಸ್ತಿದ್ದ ಟಾಕ್ಸ್ ಇನ್ಸ್ ಪೆಕ್ಟರ್ ಹೇಮರಾಜ್ ಕರ್ಮಕಾಂಡ ಬಯಲು ಮಾಡಿತ್ತು. ಈ ಬಗ್ಗೆ ನ್ಯೂಸ್​ಫಸ್ಟ್​​ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಬಿಗ್​ ಇಂಫ್ಯಾಕ್ಟ್​​ ಆಗಿದೆ. ಟಾಕ್ಸ್ ಇನ್ಸ್ ಪೆಕ್ಟರ್ ಹೇಮರಾಜ್ ಅವರನ್ನ ಮಹದೇವಪುರ ವಲಯದ ಜಂಟಿ ಆಯುಕ್ತ ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಧಿಕಾರಿ ಲಂಚದ ಮೂಟೆ ಬಯಲಾಗಿದ್ದು ಹೇಗೆ..?

ಕೆಲವು ತಿಂಗಳ ಹಿಂದೆ ನಿವೇಶನ ಖಾತಾ ಮಾಡಿಕೊಳ್ಳಲು ಹರಿಕಿಶನ್​ ಎಂಬ ವ್ಯಕ್ತಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ್ರು. ಇದನ್ನ ಗಮನಿಸಿದ ಲಂಚಬಾಕ ಟಾಕ್ಸ್ ಇನ್ಸ್ ಪೆಕ್ಟರ್ ಹೇಮರಾಜ್​, ಕಚೇರಿಗೆ ಬರಲು ಹೇಳಿದ್ದ. ಈ ವೇಳೆ ಆತನಿಗೆ ಹರಿಕಿಶನ್​​ ಫ್ಲ್ಯಾಟ್ ಖಾತಾ ಬದಲಾವಣೆಗೆ ಬೇಕಾದ ಎಲ್ಲಾ ದಾಖಲೆಯನ್ನ ನೀಡಿದ್ದ. ಇದನ್ನ ಗಮನಿಸಿದ ಬಿಬಿಎಂಪಿ ಅಧಿಕಾರಿ, ತನ್ನ ಹಳೆ ಚಾಲಿಯನ್ನ ಮುಂದುವರಿಸಿದ್ದ ಒಂದು ಖಾತಾ ಬದಲಾವಣೆಗೆ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ವೆಚ್ಚ ತಗಲುತ್ತೆ ಅಂತ ಡಿಮ್ಯಾಂಡ್​ ಇಟ್ಟಿದ್ದ. ಈ ಕೆಲಸ ಆಗಬೇಕಂದ್ರೆ, ಗುಮಾಸ್ತರಿಂದ ಹಿಡಿದು ಮೇಲಾಧಿಕಾರಿವರೆಗೆ ಲಂಚ ಕೊಡಬೇಕು. 8 ವಿಭಾಗದ ಅಧಿಕಾರಿಗಳಿಗೆ ಲಂಚ ಕೊಡಬೇಕಾಗುತ್ತೆ. ಸಹ ಕಂದಾಯ ಅಧಿಕಾರಿ ಅವ್ರ ಸಹಾಯಕರಿಗೆ ಲಂಚ ನೀಡ್ಬೇಕು. ಜಂಟಿ ಆಯುಕ್ತರು ಹಾಗೂ ಅವ್ರ ಸಹಾಯಕರಿಗೆ ಹಣ ನೀಡ್ಬೇಕು. ಉಪ ಆಯುಕ್ತರು ಮತ್ತು ಅವ್ರ ಸಹಾಯಕರಿಗೆ ಲಂಚ ನೀಡ್ಬೇಕು. ಇದಿಷ್ಟು ಮಾತ್ರವಲ್ಲದೆ ರೆವಿನ್ಯೂ ಇನ್ಸ್ ಪೆಕ್ಟರ್ ಮತ್ತೆ ಅವ್ರ ಸಹಾಯಕರಿಗೆ ಹಣ ನೀಡ್ಬೇಕು ಅಂತ ಟಾಕ್ಸ್ ಇನ್ಸ್ ಪೆಕ್ಟರ್ ಹೇಮರಾಜ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಅರ್ಜಿದಾರ ಹರಿಕಿಶನ್ ಕಂದಾಯ ಇಲಾಖೆ ಉಪ ಆಯುಕ್ತರು, ಎಆರ್​​ಓಗೆ ದೂರು ಸಲ್ಲಿಸಿದ್ದ.

ಈಗಾಗಲೇ ಹಲವು ಬಾರಿ ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ರೂ ಲಂಚಾವತಾರ ಮಾತ್ರ ನಿಂತಿಲ್ಲ. ಈ ಬಗ್ಗೆ ನ್ಯೂಸ್​ಫಸ್ಟ್​ ಲಂಚ ಕೇಳಿದ ವಿಡಿಯೋ ಮತ್ತು ಆಡಿಯೋ ಸಮೇತ ವಿವಿರವಾಗಿ ಸುದ್ದಿ ಪ್ರಸಾರ ಮಾಡಿತ್ತು. ಅದರ ಪರಿಣಾಮ ಈಗ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವು ಸೈಟ್​​​ ಖಾತಾ ಮಾಡಿಸಲು ಸರ್ಕಾರಿ ಕಚೇರಿ ಹೋಗ್ತೀರಾ..? ಹಾಗಾದ್ರೆ ಇದು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/09/BBMP_1.jpg

Load More