ರಾಜರಾಜೇಶ್ವರಿ ನಗರದಲ್ಲಿ ನಡೆದ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ
ಕಾಮಗಾರಿ ಮಾಡದಿದ್ರೂ ಅಕ್ರಮವಾಗಿ ಕೋಟಿ, ಕೋಟಿ ಬಿಲ್ ಆರೋಪ
ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ದೂರಿನ ಮೇಲೆ ಲೋಕಾಯುಕ್ತ ತನಿಖೆ
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ನಡೆದ ಕಾಮಗಾರಿಗಳಲ್ಲಿ ಭಾರೀ ಅಕ್ರಮ ಬಹಿರಂಗವಾಗಿದೆ. ಭ್ರಷ್ಟ ಅಧಿಕಾರಿಗಳು ನಕಲಿ ಬಿಲ್ ಮಾಡಿ ಬರೋಬ್ಬರಿ 118 ಕೋಟಿ ರೂಪಾಯಿ ನುಂಗಿರೋ ಆರೋಪ ಕೇಳಿ ಬಂದಿದೆ.
KRIDL ಕಾಮಗಾರಿಯಲ್ಲಿ ಭಾರೀ ಅಕ್ರಮ ಬಹಿರಂಗವಾಗಿದ್ದು, ಲೋಕಾಯುಕ್ತ ಪ್ರಾಥಮಿಕ ತನಿಖೆಯಲ್ಲಿ ಭ್ರಷ್ಟ ಎಂಜಿನಿಯರ್ ಬಣ್ಣ ಬಯಲಾಗಿದೆ. ನಕಲಿ ಬಿಲ್ ಸೃಷ್ಟಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಅಕ್ರಮ ಬಯಲಾಗುತ್ತಿದ್ದಂತೆ ಬೆಂಗಳೂರು ಪಾಲಿಕೆಯ 10ಕ್ಕೂ ಹೆಚ್ಚು ಎಂಜಿನಿಯರ್ಸ್‌ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ನಕಲಿ ಬಿಲ್ ಸೃಷ್ಟಿಸಿದ್ದ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ದೂರು ಕೊಟ್ಟಿದ್ದರು. ಡಿ.ಕೆ ಸುರೇಶ್ ದೂರಿನ ಮೇಲೆ ಲೋಕಾಯುಕ್ತ ತಂಡದಿಂದ ತನಿಖೆ ನಡೆದಿದೆ. ಲೋಕಾಯುಕ್ತ ತನಿಖೆಯಲ್ಲಿ 118 ಕೋಟಿ ನುಂಗಿರೋದು ಸಾಬೀತಾಗಿದೆ. ಲೋಕಾಯುಕ್ತ ತಂಡ ಭ್ರಷ್ಟರ ಅಮಾನತಿಗೆ ವರದಿ ನೀಡಿದ್ದು, ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಂಟು ಎಂಜಿನಿಯರ್ಗಳ ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಏನಿದು 118 ಕೋಟಿ ಗುಳುಂ ಪ್ರಕರಣ
2019-20ರ ಸಾಲಿನಲ್ಲಿ KRIDLನಿಂದ ಕಾಮಗಾರಿ ಹಂಚಿಕೆಯಾಗಿದೆ. ಕಾಮಗಾರಿ ಮಾಡದಿದ್ರು ಅಕ್ರಮವಾಗಿ ₹250 ಕೋಟಿ ಕಾಮಗಾರಿ ಬಿಲ್ ಮಾಡಲಾಗಿದೆ. ಕಾಮಗಾರಿ ಬಗ್ಗೆ ನಕಲಿ ಬಿಲ್ ಬರೆದಿರುವ ಬಗ್ಗೆ ಸಂಸದ ಡಿ.ಕೆ ಸುರೇಶ್ ದೂರು ದಾಖಲಿಸಿದ್ದರು. ಡಿ.ಕೆ ಸುರೇಶ್ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಅಧಿಕಾರಿಗಳು 118 ಕೋಟಿ ನುಂಗಿರೋದು ಸಾಬೀತಾಗಿದೆ. ಬಿಬಿಎಂಪಿಗೆ ₹118 ಕೋಟಿಗೂ ಹೆಚ್ಚಿನ ಮೊತ್ತ ನಷ್ಟವಾಗಿರೋದು ರುಜುವಾತಾಗಿದೆ. ಬಿಬಿಎಂಪಿಯಿಂದ KRIDLಗೆ ವಹಿಸಿರುವ ಎಲ್ಲಾ ಕಾಮಗಾರಿಗಳಲ್ಲಿ ಸಾಕ್ಷಿ ನಾಶ, ದಾಖಲೆಗಳ ನಾಶ, ಕಡತಗಳ ತಿದ್ದುಪಡಿ, ತಿರುಚುವಿಕೆ ಪತ್ತೆಯಾಗಿದೆ.
ಸಸ್ಪೆಂಡ್ ಆದ ಭ್ರಷ್ಟ ಅಧಿಕಾರಿಗಳು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ