newsfirstkannada.com

ಮಳೆ ನಿಂತು ಹೋದ ಮೇಲೆ ಗಿಡಗಳಿಗೆ ನೀರು ಹಾಕಬೇಕಾ? ಬಿಬಿಎಂಪಿ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರ ಮಂಗಳಾರತಿ

Share :

Published June 20, 2023 at 7:59pm

Update June 20, 2023 at 8:00pm

    ಜೋರಾಗಿ ಮಳೆ ಬಿದ್ದ ಮೇಲೆ ಗಿಡಗಳಿಗೆ ನೀರು ಹಾಕಬೇಕಾ

    ಇದು ಮಹಾನಗರ ಪಾಲಿಕೆಯ ನಿಜವಾದ ಪರಿಸರ ಕಾಳಜಿನಾ?

    ಮಳೆ ಬಿದ್ದ ಮೇಲೂ ಟ್ಯಾಂಕರ್ ನೀರು ತಂದು ಸುರಿದ ಸಿಬ್ಬಂದಿ

ಬೆಂಗಳೂರು: ಮಳೆ‌ ನಿಂತ ಮೇಲೆ‌ ಕೊಡೆ ಹಿಡಿದ ಬಿಬಿಎಂಪಿ. ಜೋರಾಗಿ ಮಳೆ ಬಿದ್ದ ಮೇಲೆ ಗಿಡಗಳಿಗೆ ನೀರು ಹಾಕಬೇಕಾ? ಆಹಾ.. ಎಂತಹ ಪರಿಸರ ಪ್ರೇಮ. ಇದಪ್ಪಾ ಸರ್ವೀಸ್ ಅಂದ್ರೆ. ಹೀಗೆ BBMPಯ ಇದೊಂದು ಮಹಾನ್ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗ್ತಿದೆ. ಜೋರಾಗಿ ಮಳೆ ಬಿದ್ದ ಮೇಲೂ ಬಿಬಿಎಂಪಿ ಸಿಬ್ಬಂದಿ ಟ್ಯಾಂಕರ್ ನೀರು ತಂದು ಸುರಿದ ಈ ಫೋಟೋ ಸಖತ್ ವೈರಲ್ ಆಗಿದೆ.

ಇವತ್ತು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಳಗ್ಗೆಯೇ ಧಾರಾಕಾರ ಮಳೆ ಸುರಿದಿತ್ತು. ಮಳೆರಾಯನ ಆರ್ಭಟಕ್ಕೆ ಸಿಲಿಕಾನ್ ಸಿಟಿಯ ವಾಹನ ಸವಾರರು ಹೈರಾಣಾಗಿದ್ದರು. ಇದಾದ ಮೇಲೂ ಮೋಡ ಕವಿದ ವಾತಾವರಣವಿದ್ದು, ಸೂರ್ಯನ ಬಿಸಿಲೇ ಮಾಯವಾಗಿದೆ. ಹೀಗಿರುವಾಗ ಮಳೆ‌ ನಿಂತ ಮೇಲೆ‌ ಕೊಡೆ ಹಿಡಿದ ಬಿಬಿಎಂಪಿ ಅನ್ನೋ ಹಾಗೆ ಮಳೆಯ ನಡುವೆ ಟ್ಯಾಂಕರ್‌ನಲ್ಲಿ ರಸ್ತೆ ಬದಿಯ ಹೂವಿನ ಗಿಡಗಳಿಗೆ ನೀರು ಹಾಕಲಾಗಿದೆ.

ಇದನ್ನೂ ಓದಿ: ಕೊನೆಗೂ ಸಿದ್ಧಗೊಂಡ ಇಂದಿರಾ ಕ್ಯಾಂಟೀನ್ ನೂತನ ಮೆನೂ.. ಯಾವುದಕ್ಕೆ ಎಷ್ಟು ರೂಪಾಯಿ..?

ರಸ್ತೆ ಡಿವೈಡರ್‌ನಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಹಾಕುತ್ತಿದ್ದ ಟ್ಯಾಂಕರ್ ಸಿಬ್ಬಂದಿಯ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಬಿಬಿಎಂಪಿಯ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಬೆಂಗಳೂರಲ್ಲಿ ಇವತ್ತು ಬೆಳಗ್ಗೆಯೇ ಮಳೆ ಬಿಟ್ಟು ಬಿಡದೆ ಸುರಿದಿದೆ. ಮಳೆಯ ನಡುವೆ ಗಿಡಗಳಿಗೆ ನೀರುಣಿಸುವ ಅವಶ್ಯಕತೆ ಇದೆಯಾ? ಇಷ್ಟು ಮಳೆಯಾದ್ರು ಟ್ಯಾಂಕರ್‌ನಿಂದ ನೀರು ಹಾಕಬೇಕಾ? ಅಂತಾ ಸಾರ್ವಜನಿಕರ ಪ್ರಶ್ನಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಮಳೆ ನಿಂತು ಹೋದ ಮೇಲೆ ಗಿಡಗಳಿಗೆ ನೀರು ಹಾಕಬೇಕಾ? ಬಿಬಿಎಂಪಿ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರ ಮಂಗಳಾರತಿ

https://newsfirstlive.com/wp-content/uploads/2023/06/BBMP-Water-Tanker.jpg

Load More