ಭಕ್ತರಿಂದ ಭಾರೀ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ
ಗೋಡೆ ಕೆಡವಲು ಕಾರಣವೇನು, ನಿಜಕ್ಕೂ ಆಗಿದ್ದೇನು?
ಧರ್ಮರಾಯಸ್ವಾಮಿ ದೇವಸ್ಥಾನ ಬಳಿಯಿರುವ ಗಂಗಾಧರೇಶ್ವರ
ಬೆಂಗಳೂರು: ಅರ್ಚಕರು ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿರುವಾಗ ದೇವಸ್ಥಾನ ಕೆಡವಲು ಮುಂದಾದ ಘಟನೆ ಎಸ್.ಪಿ.ರೋಡ್ ಧರ್ಮರಾಯ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಬಳಿ ಇರುವ ಗಂಗಾಧರೇಶ್ವರ ದೇವಾಲದಲ್ಲಿ ನಡೆದಿದೆ. ಯಾವುದೇ ಮಾಹಿತಿ ಕೊಡದೆ ಬಿಬಿಎಂಪಿ ದೇವಸ್ಥಾನ ಕೆಡವಲು ಮುಂದಾಗಿದೆ.
ಹೇಳದೆ ಕೇಳದೆ ಬೆಂಗಳೂರು ಮಹಾನಗರ ಪಾಲಿಕೆ ಗಂಗಾಧರೇಶ್ವ ದೇವಸ್ಥಾನವನ್ನು ಕೆಡವಲು ಬುಲ್ಡೋಜರ್ ಬಿಟ್ಟಿದ್ದಾರೆ. ಈ ವಿಚಾರ ತಿಳಿದಂತೆ ಅರ್ಚಕರು ಅಡ್ಡ ಬಂದಿದ್ದಾರೆ. ಬಳಿಕ ಇವರೊಂದಿಗೆ ಸ್ಥಳೀಯರು ಕೂಡ ಸಾಥ್ ನೀಡಿ ದೇವಸ್ಥಾನ ಕೆಡವಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬಿಬಿಎಂಪಿಯ ಈ ನಡೆಗೆ ಜನರು ಹಿಡಿಶಾಪ ಹಾಕಿದ್ದಾರೆ.
ಗಂಗಾಧರೇಶ್ವರ ದೇವಸ್ಥಾನ
ಧರ್ಮರಾಯ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು ಟ್ರಾಫಿಕ್ ಸಮಸ್ಯೆ ಸಹ ಇದೆ. ಈ ಸಮಯದಲ್ಲಿ ಅನಧಿಕೃತ ಸೀಟ್ ಗಳನ್ನು ತೆಗೆಯಲು ಪಾಲಿಕೆ ಮುಂದಾಗಿದೆ. ಅದರ ಜೊತೆಗೆ ಗಂಗಾಧರೇಶ್ವರ ದೇವಸ್ಥಾನ ಗೋಡೆ ಕೆಡವಲು ಬಿಬಿಎಂಪಿ ಮುಂದಾಗಿದೆ.
ಇನ್ನು ಎಪತ್ತು ವರ್ಷದಿಂದ ನಾವು ಇಲ್ಲಿ ಅಂಗಡಿ ಇಟ್ಟಿದ್ದೀವಿ. ಆದರೆ ಯಾವತ್ತು ಸಮಸ್ಯೆಯಾಗಿಲ್ಲ. ಇವತ್ತು ಬಿಬಿಎಂಪಿ ಅಧಿಕಾರಿಗಳು ಹೇಳ್ದೆ ಕೇಳ್ದೆ ಬಂದು ತೆರವು ಮಾಡಿದ್ದಾರೆ. ಒಂದು ನೋಟಿಸ್ ಕೂಡ ನೀಡಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆದ್ರೆ ಏನು ಮಾಡೋದು ಎಂದು ಸಾರ್ವಜನಿಕರು ರಸ್ತೆ ತಡೆ ಹಿಡಿದು ಆಕ್ರೋಶ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ