newsfirstkannada.com

ಅಳಿಯನ ಆತ್ಮಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್​​.. ಈ ಬಗ್ಗೆ ಏನಂದ್ರು?

Share :

Published July 8, 2024 at 7:49pm

    ಬಿ.ಸಿ.ಪಾಟೀಲ್​ ದೊಡ್ಡ ಮಗಳನ್ನು ಮದುವೆಯಾಗಿದ್ದ ಪ್ರತಾಪ್ ಕುಮಾರ್

    ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ಆತ್ಮಹತ್ಯೆ ಮಾಡಿಕೊಂಡ ಅಳಿಯ

    ’ಪ್ರತಾಪ್​ ಕುಮಾರ್​ ನನಗೆ ಕೇವಲ ಅಳಿಯ ಆಗಿರಲಿಲ್ಲ, ಮಗ ಕೂಡ ಆಗಿದ್ದ’

ದಾವಣಗೆರೆ: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ನಡೆದಿದೆ. ಪ್ರತಾಪ್ ಕುಮಾರ್ (41) ಆತ್ಮಹತ್ಯೆ ಮಾಡಿಕೊಂಡಿರೋ ಅಳಿಯ. ಆತ್ಮಹತ್ಯೆ ಮಾಡಿಕೊಂಡಿರೋ ಪ್ರತಾಪ್ ಕುಮಾರ್ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಪತಿಯಾಗಿದ್ದಾರೆ.

ಇದನ್ನೂ ಓದಿ: BREAKING: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು

ಇನ್ನು, ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವ ಬಿ.ಸಿ ಪಾಟೀಲ್, ನನ್ನ ಮೊದಲನೆಯ ಮಗಳು ಸೌಮ್ಯಳೊಂದಿಗೆ ಆತನ ಮದುವೆ ಆಗಿತ್ತು. ಮದುವೆಯ ನಂತರ ನನ್ನ ಜೊತೆಯಲ್ಲೇ ಇದ್ದ. ಮನೆಯಲ್ಲಿ ಜವಾಬ್ದಾರಿಯನ್ನು ಆತ ನೋಡಿಕೊಳ್ಳುತ್ತಿದ್ದ. ಇಂದು ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದ. ಆಯ್ತು ಹೋಗಿ ಬಾ ಎಂದು ನಾನು ಹೇಳಿದ್ದೆ. ಮಧ್ಯಾಹ್ನ 1.45ರ ಸುಮಾರಿಗೆ ನನಗೆ ಮೆಸೇಜ್ ಬಂತು. ತಾತನ ಸಹೋದರ ನನಗೆ ಫೋನ್ ಮಾಡಿದ್ದ. ಪ್ರತಾಪ್​ ಎಲ್ಲಿದ್ದಾನೆ ಎಂದು ನಿಮಗೆ ಗೊತ್ತೇ ಎಂದು ಕೇಳಿದ. ಈಗ ಇನ್ನೂ ಮಾತ್ರೆ ತೆಗೆದುಕೊಂಡಿದ್ದಾನೆ ಎಂಬ ಸುದ್ದಿ ಇದೆ. ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ. ಆ ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದೆ. ಹಾಗಾಗಿ ನಾನು ತಕ್ಷಣವೇ ದಾವಣಗೆರೆಯ ರೂರಲ್ ಡಿಎಸ್‌ಪಿಗೆ ಫೋನ್ ಮಾಡಿದೆ. ಅವರು ಫೋನ್ ನಂಬರ್ ಕೇಳಿದರು ಅದನ್ನು ಕೊಟ್ಟೆ. ಆ ನಂತರ ಹೊನ್ನಾಳಿಯ ಸಿಪಿಐಗೆ ಹೇಳಿದೆ. ಶಿವಮೊಗ್ಗ ಎಸ್ಪಿ ಸಹ ವಿಷಯ ತಿಳಿಸಿದೆ. ದಾವಣಗೆರೆಯ ಡಿಎಸ್ಪಿ ಅವರು ಲೊಕೇಶನ್ ಕೊಟ್ಟರು. ಆದರೆ ಅದು ಟ್ರೇಸ್ ಆಗಲಿಲ್ಲ. ನಂತರ ನಾನು ಕರೆ ಮಾಡಿದಾಗ ಪ್ರತಾಪ್ ಕರೆ ಸ್ವೀಕರಿಸಿದ್ದ. ಆದರೆ ಆತ ಮಾತನಾಡುವ ಸ್ಥಿತಿಯಲ್ಲಿ ಇರದೆ ನಿತ್ರಾಣ ಸ್ಥಿತಿಯಲ್ಲಿರುವುದು ತಿಳಿಯಿತು. ಆತ ವಾಮಿಟ್ ಮಾಡಿಕೊಳ್ಳುತ್ತಿರುವುದು ನನಗೆ ತಿಳಿಯಿತು. ನಾನು ಈಗ ನೀನು ಎಲ್ಲಿದ್ದೀಯಪ್ಪ ಎಂದು ಕೇಳಿದೆ. ನಾನು ಮಲೆಬೆನ್ನೂರು ರಸ್ತೆಯಲ್ಲಿ ಇರುವುದಾಗಿ ತಿಳಿಸಿದ. ಮತ್ತೆ ಸರಿಯಾಗಿ ಎಲ್ಲಿದ್ದೀಯಾ ಎಂದು ಕೇಳಿದೆ. ನಾನು ಹೊನ್ನಾಳಿ ಮಲೆಬೆನ್ನೂರು ರಸ್ತೆಯಲ್ಲಿ ಇರುವುದಾಗಿ ತಿಳಿಸಿದ. ಆಗ ನಾನು ಎಲ್ಲರಿಗೂ ಪ್ರತಾಪ್​ ಇರುವ ಜಾಗವನ್ನು ತಿಳಿಸಿದೆ. ನಂತರ ಪ್ರತಾಪ್​ ಸಿಕ್ಕಿದ್ದಾನೆ ಎಂಬ ವಿಚಾರ ತಿಳಿಯಿತು.

ಇದೆ ವೇಳೆ ಪ್ರತಾಪ್​ನ ಸಹೋದರ ಪ್ರಭು ಕೂಡ ಸಹೋದರರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದರು. ನಂತರ ಅವರೇ ಪ್ರತಾಪ್​ನನ್ನು ಹೊನ್ನಾಳಿಯ ಆಸ್ಪತ್ರೆಗೆ ದಾಖಲಿಸಿದರು. ನಾನು ಹೊನ್ನಾಳಿಯ ಆಸ್ಪತ್ರೆಯ ವೈದ್ಯರ ಬಳಿ ವಿಚಾರಿಸಿದೆ. ಮೆಕ್ಕೆಜೋಳಕ್ಕೆ ಬಳಸುವ ಔಷಧಿಯನ್ನು ಪ್ರತಾಪ್​ ಸೇವಿಸಿದ್ದಾಗಿ ತಿಳಿಸಿದರು. ನಾನು ಅವರಿಗೆ ನೀವು ಇಲ್ಲಿಯೇ ಚಿಕಿತ್ಸೆ ಕೊಡುವುದಾದರೆ ಕೊಡಿ. ಇಲ್ಲದಿದ್ದರೆ ಪ್ರಥಮ ಚಿಕಿತ್ಸೆಯನ್ನು ನೀಡಿ ದಾವಣಗೆರೆ ಅಥವಾ ಶಿವಮೊಗ್ಗಕ್ಕೆ ಕಳಿಸಿಕೊಡಿ ಎಂದು ಹೇಳಿದೆ. ಆನಂತರ ಪ್ರತಾಪ್​ನ ಸಹೋದರ ಪ್ರಭು ಅವರು ಅಳಿಯನನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ಮುಂದಾದರು. ಸರಿ ಹಾಗಾದ್ರೆ ನಾನು ಬರುತ್ತೇನೆ ಎಂದು ಬಂದೆ. ನಾನು 10 ಕಿ.ಮೀ ನಷ್ಟು ಕ್ರಮಿಸುವ ವೇಳೆಗೆ ಪ್ರಭು ಅವರು ನನಗೆ ಕರೆ ಮಾಡಿ ಪ್ರತಾಪ್​ ನಿಧನ ಹೊಂದಿದ್ದಾಗಿ ತಿಳಿಸಿದರು. ನನ್ನ ಮಗಳಿಗೆ ಮಕ್ಕಳಾಗಿರಲಿಲ್ಲ. ಆ ಬಗ್ಗೆ ಪ್ರತಾಪ್​ನಿಗೆ ಕೊರಗಿತ್ತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಳಿಯನ ಆತ್ಮಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್​​.. ಈ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/07/bc-patil5.jpg

Load More