newsfirstkannada.com

ಸ್ವಂತ ಅಕ್ಕನ ಮಗಳನ್ನೇ ಮದುವೆ ಆಗಿದ್ದ ಬಿಸಿ ಪಾಟೀಲ್​ ಅಳಿಯ.. ಹೆಂಡತಿಯನ್ನು ಅನಾಥ ಮಾಡಿಬಿಟ್ರು!

Share :

Published July 8, 2024 at 5:54pm

Update July 8, 2024 at 5:57pm

    ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

    ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್​..!

    ಪ್ರತಾಪ್​ ಕುಮಾರ್​ ಆತ್ಮಹತ್ಯೆಗೆ ಕಾರಣ ಮಾತ್ರ ಇನ್ನೂ ನಿಗೂಢ

ದಾವಣಗೆರೆ: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್​ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಸಿ ಪಾಟೀಲ್ ದೊಡ್ಡ ಮಗಳಾದ ಸೌಮ್ಯ ಅವರ ಗಂಡ ಪ್ರತಾಪ್​​ ಕುಮಾರ್​​ ಅವರು ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ.

ಪ್ರತಾಪ್​ ಕುಮಾರ್​ ಅವರಿಗೆ 43 ವರ್ಷ. ಈ ಘಟನೆ ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್​ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಕನ ಮಗಳನ್ನೇ ಮದುವೆ ಆಗಿದ್ದ ಪ್ರತಾಪ್​ ಕುಮಾರ್​​..!

ಪ್ರತಾಪ್ ಕುಮಾರ್ ಬಿಸಿ ಪಾಟೀಲ್‌ ಅವರ ಹೆಂಡತಿಯ ಸ್ವಂತ ತಮ್ಮ. ಇವರಿಗೆ ದೊಡ್ಡ ಮಗಳು ಸೌಮ್ಯ ಅವರನ್ನೇ ಕೊಟ್ಟು ಬಿಸಿ ಪಾಟೀಲ್​ ಮದುವೆ ಮಾಡಿದ್ದರು. ಅಂದರೆ ಅಕ್ಕನ ಮಗಳನ್ನೇ ಪ್ರತಾಪ್ ಕುಮಾರ್ ಮದುವೆಯಾಗಿದ್ದರು. ದಾವಣಗೆರೆ ಕತ್ತಲಗೆರೆ ಗ್ರಾಮದ ಮೃತ ಪ್ರತಾಪ್ ಕುಮಾರ್ ಬದುಕಲ್ಲಿ ಎಲ್ಲವೂ ಸರಿಯಿತ್ತು. ಆದ್ರೂ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಅಳಿಯ ಮೃತಪಟ್ಟ ಮಾಹಿತಿ ತಿಳಿದ ಕೂಡಲೇ ಬಿ.ಸಿ ಪಾಟೀಲ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇಷ್ಟೇ ಅಲ್ಲ ಬಿಸಿ ಪಾಟೀಲ್​ ಅವರೊಂದಿಗೆ ಇದ್ದು, ರಾಜಕೀಯ ವ್ಯವಹಾರ ನೋಡಿಕೊಳ್ಳುತ್ತಿದ್ದರು ಪ್ರತಾಪ್​​. ಜೊತೆಗೆ 90 ಎಕರೆ ಜಮೀನು ನೋಡಿಕೊಂಡು ಕೆಲಸ ಮಾಡಿಸುತ್ತಿದ್ದರು. ಮದುವೆ ಆಗಿ 14 ವರ್ಷ ಆದ್ರೂ ಮಕ್ಕಳು ಇರಲಿಲ್ಲ. ಆದ್ರೂ ಖುಷಿಯಾಗಿ ಪ್ರತಾಪ್​​​​​ ಮತ್ತು ಸೌಮ್ಯ ಜೊತೆಯಲ್ಲೇ ಇದ್ದರು.

ಇದನ್ನೂ ಓದಿ: BREAKING: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸ್ವಂತ ಅಕ್ಕನ ಮಗಳನ್ನೇ ಮದುವೆ ಆಗಿದ್ದ ಬಿಸಿ ಪಾಟೀಲ್​ ಅಳಿಯ.. ಹೆಂಡತಿಯನ್ನು ಅನಾಥ ಮಾಡಿಬಿಟ್ರು!

https://newsfirstlive.com/wp-content/uploads/2024/07/BC-Patil.jpg

Load More