ಬಿಸಿಸಿಐ-ಡ್ರೀಮ್11 ಮಧ್ಯೆ ಮಹತ್ವದ ಒಪ್ಪಂದ
ಬಿಸಿಸಿಐಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು, ಈಗ ನಿಟ್ಟುಸಿರು
ಎಷ್ಟು ವರ್ಷಗಳವರೆಗೆ ಒಪ್ಪಂದ ಆಗಿದೆ ಗೊತ್ತಾ..?
ಭಾರತ ಕ್ರಿಕೆಟ್ ತಂಡದ ಜರ್ಸಿ ಸ್ಪಾನ್ಸರ್ ವಿಶ್ವದ ಅತ್ಯಂತ ಜನಪ್ರಿಯ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್- 11 ಪಡೆದುಕೊಂಡಿದೆ. ಬಿಸಿಸಿಐ ಜೊತೆಗೆ ಈ ಒಪ್ಪಂದವನ್ನು 3 ವರ್ಷ ಕಾಲದವರೆಗೆ ಡ್ರೀಮ್- 11 ಮಾಡಿಕೊಂಡಿದೆ. ಕಳೆದ ಮಾರ್ಚ್ನಲ್ಲಿ ಬೈಜುಸ್ ಕಂಪನಿಯ ಒಪ್ಪಂದವು ಅಂತಿಮಗೊಂಡಿತ್ತು. ಹೀಗಾಗಿ ಜೂನ್ 11 ರಂದು ಬಿಸಿಸಿಐ ಈ ಬಗ್ಗೆ ಟೆಂಡರ್ ಕರೆದಿತ್ತು.
ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್- 11 ಜರ್ಸಿ ಸ್ಪಾನ್ಸರ್ ಜುಲೈ 12 ರಿಂದ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದಲೇ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಡೊಮಿನಿಕಾದ ರಾಸೋಯಿಯಲ್ಲಿನ ವಿಂಡ್ಸನ್ ಪಾರ್ಕ್ನಲ್ಲಿ ನಡೆಯಲಿದೆ. ಇದು 2023-2025ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ಗಾಗಿ ನಡೆಯುವ ಭಾರತದ ಮೊದಲ ಸರಣಿಯಾಗಿದೆ ಎನ್ನಲಾಗಿದೆ.
ಐಸಿಸಿ ವಿಶ್ವಕಪ್ ಇದೇ ವರ್ಷ ನಡೆಯಲಿದ್ದು ಫ್ಯಾನ್ಸ್ಗಳ ನಿರೀಕ್ಷೆ ದುಪ್ಪಟ್ಟು ಮಾಡಲು ಇದೊಂದು ಒಪ್ಪಂದ ಸಹಕಾರಿ ಆಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದ್ದಾರೆ. ಈ ಬಗ್ಗೆ ಡ್ರೀಮ್-11 ಸಿಇಒ ಹರ್ಷ ಜೈನ್ ಮಾತನಾಡಿ, ಕ್ರಿಕೆಟ್ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚು ಮಾಡಲಾಗುವುದು. ಬಿಸಿಸಿಐ ಜತೆ ಈ ಒಪ್ಪಂದ ಮಾಡಿಕೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಇದು ಹೀಗೆ ಮುಂದುವರೆಯಲಿದೆ ಎಂದು ತಿಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ