ರೋಹಿತ್ ಶರ್ಮಾ ಟೀಮ್ಗೆ ಬಿಸಿಸಿಐ ಚಾನ್ಸ್ ಏಕೆ ಕೊಟ್ಟಿಲ್ಲ?
ಈ ತಂಡದಲ್ಲಿ ರೋಹಿತ್, ಕೊಹ್ಲಿ, ಸಿರಾಜ್ ಯಾರೂ ಇರಲ್ಲ
ರಿಂಕು ಸೇರಿ ಯುವ ಆಟಗಾರರಿಗೆ ಮಣೆ ಹಾಕಿದ ಬಿಸಿಸಿಐ
ವಿಶ್ವಕಪ್ ನಡೆಯುವ ಸಮಯದಲ್ಲೇ ಚೀನಾದಲ್ಲಿ ಏಷ್ಯನ್ ಗೇಮ್ಸ್ ನಡೆಯುತ್ತಿರುವ ಕಾರಣ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಅನ್ನು ಕೈ ಬಿಟ್ಟು ಯಂಗ್ ಟೀಮ್ಗೆ ಬಿಸಿಸಿಐ ಮಣೆ ಹಾಕಿದೆ. ಮುಂದಿನ ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ಚೀನಾದ ಹ್ಯಾಂಗ್ಜೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಟೀಮ್ ಇಂಡಿಯಾವನ್ನ ಬಿಸಿಸಿಐ ಪ್ರಕಟಿಸಿದೆ. 15 ಆಟಗಾರರ ಯುವ ತಂಡವನ್ನು ಆಯ್ಕೆ ಮಾಡಿರುವ ಸೆಲೆಕ್ಟರ್ ಕಮಿಟಿ ಯುವ ಕ್ರಿಕೆಟಿಗ ಋತುರಾಜ್ ಗಾಯಕ್ವಾಡ್ಗೆ ನಾಯಕತ್ವದ ಹೊಣೆ ನೀಡಿದೆ.
ಇದೇ ವರ್ಷ ಭಾರತದಲ್ಲಿ 2023 ವಿಶ್ವಕಪ್ ನಡೆಯಲಿದೆ. ಚೀನಾದಲ್ಲೂ ಇದೇ ಸಮಯದಲ್ಲಿ ಏಷ್ಯನ್ ಗೇಮ್ಸ್ ನಡೆಯುತ್ತಿರುವ ಕಾರಣ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಅನ್ನು ಏಷ್ಯನ್ ಗೇಮ್ಸ್ ಆಯ್ಕೆ ಮಾಡಿಲ್ಲ. ಹೊಸದೊಂದು ಯಂಗ್ ಪ್ಲೇಯರ್ಗಳ ಟೀಮ್ ಅನ್ನು ಬಿಸಿಸಿಐ ಘೋಷಣೆ ಮಾಡಿದೆ.
ಇದನ್ನು ಓದಿ: ಬೆಂಗಳೂರಿಗರೇ ಎಚ್ಚರ! ರಾತ್ರಿ ಒಬ್ಬರೇ ಓಡಾಡ್ಬೇಡಿ; ಸಿಟಿಗೆ ಮತ್ತೆ ಎಂಟ್ರಿ ಕೊಟ್ಟಿದೇ ಆ ಗ್ಯಾಂಗ್!
ಏಷ್ಯಾನ್ ಗೇಮ್ಸ್ನಲ್ಲಿ ಟಿ20 ಮಾದರಿಯ ಪಂದ್ಯಗಳು
ಐಪಿಎಲ್ನಲ್ಲಿ ಮಿಂಚಿದ ಆಟಗಾರರಿಗೆ ಮಣೆ ಹಾಕಲಾಗಿದ್ದು ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರವಿ ಬಿಷ್ನೋಯಿ, ಆರ್ಷ್ದೀಪ್ ಸಿಂಗ್ ಹಾಗೂ ಪ್ರಭಾಸಿಮ್ರಾನ್ ಸಿಂಗ್ ಸ್ಥಾನ ಪಡೆದ ಪ್ರಮುಖರಾಗಿದ್ದಾರೆ. 5 ಆಟಗಾರರನ್ನ ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರ ವರೆಗೆ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಆಯೋಜನೆಗೊಂಡಿದ್ದು, ಟಿ20 ಮಾದರಿಯ ಪಂದ್ಯಗಳು ನಡೆಯಲಿವೆ.
2023 ಏಷ್ಯನ್ ಗೇಮ್ಸ್ಗೆ ಭಾರತ ತಂಡ:
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್) ವಾಷಿಂಗ್ಟನ್ ಸುಂದರ್, ಶಹ್ಬಾಜ್ ಅಹ್ಮದ್, ರವಿ ಬಿಷ್ನೋಯಿ, ಆವೇಶ್ ಖಾನ್, ಆರ್ಶ್ದೀಪ್ ಸಿಂಗ್, ಮುಕೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಾಸಿಮ್ರಾನ್ (ವಿಕೆಟ್ ಕೀಪರ್). ಇನ್ನು, ಶಿಖರ್ ಧವನ್ ಏಷ್ಯನ್ ಗೇಮ್ಸ್ ತಂಡದ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಬಿಸಿಸಿಐ ಸರ್ಪ್ರೈಸ್ ಆಗಿ ಗಾಯಕ್ವಾಡ್ಗೆ ನಾಯಕತ್ವದ ಜವಾಬ್ದಾರಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ