ಜನವರಿಯಿಂದ ನಡೆಯಲಿದೆ ಟೆಸ್ಟ್ ಪಂದ್ಯ
5 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಭಾರತ
ಮುಂದುವರಿಯಲಿದೆ WTC ಅಭಿಯಾನ
ಭಾರತೀಯ ಕ್ರಿಕೆಟ್ ಮಂಡಳಿ (BCCI) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲಿದೆ.
2024ರ ಜನವರಿಯಿಂದ ನಡೆಯುವ ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಈ ಮೂಲಕ ಭಾರತ ತಂಡವು ‘ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್’ನ್ಗಾಗಿ ಮೂರನೇ ಅಭಿಯಾನವನ್ನು ಮುಂದುವರೆಸಲಿದೆ. ಮೊದಲ ಪಂದ್ಯವು ಹೈದ್ರಾಬಾದ್ನಲ್ಲಿ ಜನವರಿ 25 ರಿಂದ ಶುರುವಾಗಲಿದೆ.
ಎರಡನೇ ಪಂದ್ಯವು ವಿಶಾಖಪಟ್ಟಣದಲ್ಲಿ ಫೆಬ್ರವರಿ 2 ರಿಂದ ಶುರುವಾದರೆ, ರಾಜ್ಕೋಟ್ನಲ್ಲಿ ಫೆಬ್ರವರಿ 15 ರಿಂದ ಮೂರನೇ ಪಂದ್ಯ ನಡೆಯಲಿದೆ. ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಇನ್ನು ಐದನೇ ಮತ್ತು ಕೊನೆಯ ಪಂದ್ಯವು ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ನಡೆಯಲಿದೆ.
ಭಾರತ ತಂಡವು ಮೂರನೇ ಟೆಸ್ಟ್ ಚಾಂಪಿಯನ್ ಶಿಪ್ಗೆ ಕ್ಯಾಂಪೇನ್ ಶುರು ಮಾಡಿದೆ. ವೆಸ್ಟ್ ವಿಂಡೀಸ್ ವಿರುದ್ಧ 1-0 ಅಂತರದಿಂದ ಸರಣಿ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ವೆಸ್ಟ್ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಸರಣಿಯನ್ನು ಭಾರತ ತಂಡ ಒಂದು ಇನ್ನಿಂಗ್ಸ್ ಹಾಗೂ 141 ರನ್ಗಳ ಭರ್ಜರಿ ಗೆಲುವು ಕಂಡಿತು. ಎರಡನೇ ಪಂದ್ಯವು ಮಳೆಯಿಂದಾಗಿ ಡ್ರಾನ್ನಲ್ಲಿ ಅಂತ್ಯಗೊಂಡಿದೆ.
ಕಳೆದ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಭಾರತ ಪ್ರವೇಶ ಮಾಡಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಪಡೆ 209 ರನ್ಗಳಿಂದ ಸೋಲನ್ನು ಕಂಡಿತು. ಇನ್ನು ಮೊದಲ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಭಾರತ ಫೈನಲ್ ಪ್ರವೇಶ ಮಾಡಿ, ಕೇನ್ ವಿಲಿಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಕಂಡಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್