2011ರ ವಿಶ್ವಕಪ್ನಲ್ಲಿ ಡ್ರಾಪ್, ಈಗ ರೋಹಿತ್ ಶರ್ಮಾ ನಾಯಕ.!
ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಆಫ್ ಸ್ಪಿನ್ನರ್ಗಳು ಇಲ್ಲ
ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಕೊಕ್..!
ವಿಶ್ವಕಪ್ ಟೂರ್ನಿಗೆ ಪ್ರಕಟಗೊಂಡಿರುವ ಟೀಮ್ ಇಂಡಿಯಾದಲ್ಲಿ ಯಾವುದೇ ಸರ್ಪ್ರೈಸ್ ಅನ್ನಿಸೋ ಆಯ್ಕೆಗಳಿಲ್ಲ. ಆದ್ರೆ, ಹಲವು ಕುತೂಹಲಕಾರಿ ಸಂಗತಿಗಳಿವೆ. ಕೆಲವು ಮೈನಸ್ ಪಾಯಿಂಟ್ಗಳೂ ಇವೆ. ವಿಶ್ವಕಪ್ ಟೀಮ್ ಸೆಲೆಕ್ಷನ್ನ ಟಾಪ್ 5 ಹೈಲೆಟ್ಸ್ಗಳೇನು?
ಏಕದಿನ ವಿಶ್ವಕಪ್ ತಂಡದ ಆಯ್ಕೆಯ ಬಗೆಗಿನ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸೆಲೆಕ್ಷನ್ ಕಮಿಟಿ 15 ಆಟಗಾರರ ತಂಡವನ್ನ ಆಯ್ಕೆ ಮಾಡಿದೆ. ಶ್ರೀಲಂಕಾ ನಡೆದ ಪ್ರೆಸ್ಮೀಟ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಸೆಲೆಕ್ಷನ್ ಕಮಿಟಿ ಚೇರ್ಮನ್ ಅಜಿತ್ ಅಗರ್ಕರ್ ಟೀಮ್ ಅನೌನ್ಸ್ ಮಾಡಿದ್ದಾಗಿದೆ.
2011ರಲ್ಲಿ ಡ್ರಾಪ್, 2023ರಲ್ಲಿ ರೋಹಿತ್ ನಾಯಕ.!
ಈ ಹಿಂದೆ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ತಂಡದಿಂದ ಅಚ್ಚರಿಯ ರೀತಿಯಲ್ಲಿ ರೋಹಿತ್ ಶರ್ಮಾರನ್ನ ಡ್ರಾಪ್ ಮಾಡಲಾಗಿತ್ತು. ಆಗ ಬಹಿರಂಗವಾಗಿ ಹಿಟ್ಮ್ಯಾನ್ ಅಸಮಾಧಾನ ಹೊರ ಹಾಕಿದ್ರು. ಅದಾಗಿ 12 ವರ್ಷಗಳು ಕಳೆದಿವೆ. ಇದೀಗ ರೋಹಿತ್ ಶರ್ಮಾನೇ ಟೀಮ್ ಇಂಡಿಯಾವನ್ನ ಮೆಗಾ ಟೂರ್ನಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ನಾಯಕ ರೋಹಿತ್ ಮೇಲೆ ನಿರೀಕ್ಷೆಯ ಭಾರವೇ ಇದೆ.
ತವರಿನಲ್ಲಿ ಮೊದಲ ಬಾರಿ ತಂಡದಲ್ಲಿಲ್ಲ ಆಫ್ ಸ್ಪಿನ್ನರ್.!
ಇಂಡಿಯನ್ ಪಿಚ್ಗಳಲ್ಲಿ ಸ್ಪಿನ್ನರ್ಗಳೇ ಮ್ಯಾಚ್ ವಿನ್ನರ್ಸ್. ಅದ್ರಲ್ಲೂ ಆಫ್ ಸ್ಪಿನ್ನರ್ಗಳು ಮೋಸ್ಟ್ ಇಪಾರ್ಟೆಂಟ್ ರೋಲ್ ಪ್ಲೇ ಮಾಡ್ತಾರೆ. ಹೀಗಾಗಿ ಇಷ್ಟು ದಿನಗಳ ಕಾಲ ತವರಿನಲ್ಲಿ ನಡೆಯೋ ಸರಣಿಗಳು, ಟೂರ್ನಮೆಂಟ್ಗಳಲ್ಲಿ ಆಫ್ ಸ್ಪಿನ್ನರ್ಗೆ ಸ್ಥಾನ ಫಿಕ್ಸ್ ಆಗಿತ್ತು. ಆದ್ರೀಗ ವಿಶ್ವಕಪ್ ತಂಡದಲ್ಲಿ ಒಬ್ಬೇ ಒಬ್ಬ ಆಫ್ ಸ್ಪಿನ್ನರ್ ಇಲ್ಲ. ಸ್ಥಾನದ ನಿರೀಕ್ಷೆಯಲ್ಲಿದ್ದ ಅನುಭವಿ ಆರ್.ಅಶ್ವಿನ್ ಹಾಗೂ ಯುವ ವಾಷಿಂಗ್ಟನ್ ಸುಂದರ್ಗೆ ಕೊಕ್ ಕೊಡಲಾಗಿದೆ.
ಉಪನಾಯಕ ಪಟ್ಟ ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ.!
ಆಲ್ರೌಂಡರ್ ಹಾರ್ದಿಕ್ ಪಾಂಡ್ಯರ ಉಪನಾಯಕತ್ವದ ಸದ್ಯ ಹೆಚ್ಚು ಚರ್ಚೆಯಲ್ಲಿತ್ತು. ವೆಸ್ಟ್ ಇಂಡೀಸ್ ಪ್ರವಾಸದ ಹೀನಾಯ ಸೋಲು ಹಾರ್ದಿಕ್, ಪಟ್ಟಕ್ಕೆ ಕುತ್ತು ತಂದಿತ್ತು. ಕಮ್ಬ್ಯಾಕ್ ಮಾಡಿದ ವೇಗಿ ಜಸ್ಪ್ರಿತ್ ಬೂಮ್ರಾಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗುತ್ತೆ ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಅಂತಿಮವಾಗಿ ಹಾರ್ದಿಕ್ಗೆ ವೈಸ್ಕ್ಯಾಪ್ಟನ್ಸಿ ಪಟ್ಟವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಾನ ನಿರೀಕ್ಷೆಯಲ್ಲಿದ್ದ ಚಹಲ್ಗೆ ಭಾರೀ ನಿರಾಸೆ
ವ್ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಕೂಡ ವಿಶ್ವಕಪ್ ಟಿಕೆಟ್ ನಿರೀಕ್ಷೆಯಲ್ಲಿದ್ರು. ಆದ್ರೆ, ಚಹಲ್ಗೂ ನಿರಾಸೆಯಾಗಿದೆ. ವ್ರಿಸ್ಟ್ ಸ್ಪಿನ್ನರ್ ಚಹಲ್ಗೆ ಕೊಕ್ ಕೊಟ್ಟಿರುವ ಸೆಲೆಕ್ಷನ್ ಕಮಿಟಿ, ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಮಣೆ ಹಾಕಿದೆ. ಬ್ಯಾಟಿಂಗ್ ಡೆಪ್ತ್ನ ಲೆಕ್ಕಾಚಾರದಲ್ಲಿ ಅಕ್ಷರ್ಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಸದ್ಯ ವಿಶ್ವಕಪ್ ತಂಡದಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಒಬ್ಬರಿಗೆ ಮಾತ್ರ ಮಣೆ ಹಾಕಲಾಗಿದೆ.
ಸ್ಟ್ಯಾಂಡ್ ಬೈ ಆಟಗಾರನಾಗಿ ಸಂಜುಗಿಲ್ಲ ಸ್ಥಾನ.!
ವಿಶ್ವಕಪ್ ತಂಡದಿಂದಲೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಕೊಕ್ ನೀಡಲಾಗಿದೆ. ಏಷ್ಯಾಕಪ್ ತಂಡದಲ್ಲಿ ರಿಸರ್ವ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದ ಸಂಜುಗೆ ಗೇಟ್ಪಾಸ್ ನೀಡಲಾಗಿದೆ. ಸತತ ವೈಫಲ್ಯ ಅನುಭವಿಸಿರುವ ಸಂಜು ಸ್ಯಾಮ್ಸನ್ಗೆ ಮತ್ತೆ ಟೀಮ್ ಇಂಡಿಯಾ ಡೋರ್ ತೆರೆಯೋದು ಅನುಮಾನವೇ.
ಇದನ್ನು ಓದಿ: ವರ್ಲ್ಡ್ಕಪ್ಗೆ ಆಯ್ಕೆಯಾಗದೆ ಇದ್ದಿದ್ದ ರೋಹಿತ್ ಶರ್ಮಾ ಈಗ ಕ್ಯಾಪ್ಟನ್.. ಅಂದು ಹಿಟ್ಮ್ಯಾನ್ಗೆ ಯುವಿ ಹೇಳಿದ್ದೇನು?
ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾಗೂ ನಿರಾಸೆ.!
ಏಷ್ಯಾಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಯುವ ಆಟಗಾರರಾದ ಪ್ರಸಿದ್ಧ್ ಕೃಷ್ಣ ಹಾಗೂ ತಿಲಕ್ ವರ್ಮಾಗೂ ನಿರಾಸೆಯಾಗಿದೆ. ವಿಂಡೀಸ್ ಪ್ರವಾಸದಲ್ಲಿ ಅಬ್ಬರಿಸಿದ್ದ ತಿಲಕ್ ವರ್ಮಾ ಹಾಗೂ ಕಮ್ಬ್ಯಾಕ್ ಸರಣಿಯಲ್ಲಿ ಮೋಡಿ ಮಾಡಿದ ಪ್ರಸಿದ್ಧ್ ಕೃಷ್ಣ ಪರ ಹಲವರು ಬ್ಯಾಟಿಂಗ್ ನಡೆಸಿದ್ರು. ಆದ್ರೆ, ಇವರಿಬ್ಬರೂ ಸ್ಥಾನ ವಂಚಿತವಾಗಿದ್ದಾರೆ.
ಇದೆಲ್ಲದರ ಹೊರತಾಗಿ ಆಯ್ಕೆ ಮಾಡಲಾಗಿರುವ 15 ಸದಸ್ಯರ ತಂಡ ಬಲಿಷ್ಠವಾಗಿ ಕಾಣ್ತಿದೆ. ಸ್ಥಾನ ಗಿಟ್ಟಿಸಿಕೊಂಡ ಆಟಗಾರರ ಆನ್ ಪೇಪರ್ ರೆಕಾರ್ಡ್ಸ್ ಕೂಡ ಸಾಲಿಡ್ ಆಗಿವೆ. ಆದ್ರೆ, ಆನ್ಫೀಲ್ಡ್ನಲ್ಲಿ ಆಟ ನಡೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ