newsfirstkannada.com

ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಆಘಾತ; ಹಾರ್ದಿಕ್ ಪಾಂಡ್ಯ ಇಂಜುರಿ ಬಗ್ಗೆ ಬಿಸಿಸಿಐ ಹೇಳಿದ್ದೇನು?

Share :

20-10-2023

    ಪಾಂಡ್ಯನ ವೈದ್ಯಕೀಯ ರಿಪೋರ್ಟ್ ರಿಲೀಸ್​ ಮಾಡಿರುವ ಬಿಸಿಸಿಐ

    ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಗಾಯಕ್ಕೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ

    ವಿಶ್ವಕಪ್​ ಟೂರ್ನಿಯ ಮುಂದಿನ ಯಾವ ಪಂದ್ಯದಲ್ಲಿ ಆಡಲಿದ್ದಾರೆ..?

MCA ಸ್ಟೇಡಿಯಂನಲ್ಲಿ ಬಾಂಗ್ಲಾದ ಜೊತೆ ನಡೆದ ಪಂದ್ಯದಲ್ಲಿ ಭಾರತದ ಉಪನಾಯಕ ಹಾರ್ದಿಕ್ ಪಾಂಡ್ಯ ಎಡಗಾಲಿನ ಗಾಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ನ್ಯೂಜಿಲೆಂಡ್​ ವಿರುದ್ಧದ ನಡೆಯುವ ಪಂದ್ಯದಿಂದ ಪಾಂಡ್ಯ ಹೊರಗುಳಿಯಲಿದ್ದಾರೆ. ಈ ಬಗ್ಗೆ ವೈದ್ಯಕೀಯ ರಿಪೋರ್ಟ್ ರಿಲೀಸ್​ ಮಾಡಿರುವ ಬಿಸಿಸಿಐ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದೆ.

ಸದ್ಯ ಬಿಸಿಸಿಐ ಹೇಳಿರುವ ಪ್ರಕಾರ ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡುವುದಿಲ್ಲ ಎನ್ನುವುದು ಕನ್ಫರ್ಮ್ ಆಗಿದೆ. ಆದರೆ ಅಕ್ಟೋಬರ್ 29 ರಂದು ಲಕ್ನೋ ಸ್ಟೇಡಿಯಂನಲ್ಲಿ ನಡೆಯುವ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಆಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ತಿಳಿಸಿದೆ.

ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ಕೊಹ್ಲಿ

ಪುಣೆಯಲ್ಲಿ ನಡೆದ ಭಾರತ-ಬಾಂಗ್ಲಾ ಪಂದ್ಯದಲ್ಲಿ 9ನೇ ಓವರ್​ ಅನ್ನು ಬೌಲಿಂಗ್ ಮಾಡಲು ಬಂದಿದ್ದ ಹಾರ್ದಿಕ್​ ಪಾಂಡ್ಯ ಎಡಗಾಲಿಗೆ ಗಾಯವನ್ನು ಮಾಡಿಕೊಂಡರು. 2 ಬೌಲ್ ಮಾಡಿದ್ದ ಹಾರ್ದಿಕ್​ 3ನೇ ಬಾಲ್ ಹಾಕುತ್ತಿದ್ದಾಗ ಗಾಯಕ್ಕೆ ತುತ್ತಾದರು. 3 ಬೌಲ್​ಗಳನ್ನು ಮಾಡಿ ಹಾರ್ದಿಕ್ ಗಾಯಕ್ಕೆ ಒಳಗಾಗಿ ಮೈದಾನದಿಂದ ಹೊರ ಹೋಗಿದ್ದರಿಂದ ಉಳಿದ 3 ಬೌಲ್​ಗಳನ್ನು ವಿರಾಟ್ ಕೊಹ್ಲಿ ಅವರು ಮಾಡಿ ಕೇವಲ 2 ರನ್​ ನೀಡಿದ್ದರು.

ತಂಡದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ಆಲ್​ ರೌಂಡರ್​ಗಳಾಗಿ ಕಣಕ್ಕೆ ಇಳಿಯುತ್ತಿದ್ದು ಎದುರಾಳಿಗಳ ಮೇಲೆ ನಿರ್ಣಾಯಕವಾಗಿ ದಾಳಿ ಮಾಡುತ್ತಿದ್ದಾರೆ. ಇದು ಅಲ್ಲದೇ ಮುಂದಿನ ವಿಶ್ವಕಪ್​ ಮ್ಯಾಚ್​ಗಳಲ್ಲಿ ಪಾಂಡ್ಯ ಭಾಗವಹಿಸುವರೇ ಎನ್ನುವ ಪ್ರಶ್ನೆ ಮೂಡಿತ್ತು. ಆದ್ರೆ ಸದ್ಯಕ್ಕೆ ಬಿಸಿಸಿಐ ಪಾಂಡ್ಯ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಆಘಾತ; ಹಾರ್ದಿಕ್ ಪಾಂಡ್ಯ ಇಂಜುರಿ ಬಗ್ಗೆ ಬಿಸಿಸಿಐ ಹೇಳಿದ್ದೇನು?

https://newsfirstlive.com/wp-content/uploads/2023/10/HARDHIK_PANDYA-1.jpg

Load More