newsfirstkannada.com

ರೋಹಿತ್​ ಕ್ಯಾಪ್ಟನ್ಸಿ ಕಿತ್ತುಕೊಳ್ತಾ BCCI..? ಭಾರತ- ಜಿಂಬಾಬ್ವೆ T20 ಸರಣಿಗೆ ಶುಭ್​ಮನ್ ಗಿಲ್​ ನಾಯಕ

Share :

Published June 24, 2024 at 7:12pm

Update June 24, 2024 at 7:13pm

  ಜಿಂಬಾಬ್ವೆ ವಿರುದ್ಧದ ಸರಣಿಗೆ ಎಲ್ಲ ಹಿರಿಯ ಆಟಗಾರರಿಗೆ ಕೊಕ್

  ಹೊಸ ನಾಯಕ ಗಿಲ್​​ ಜೊತೆಗಿರುವ ಪ್ಲೇಯರ್ಸ್ ಯಾರು, ಯಾರು?

  ಶುಭ್​ಮನ್​ ಗಿಲ್​ ಕ್ಯಾಪ್ಟನ್ಸಿಯಲ್ಲಿ ಯಂಗ್​ ಟೀಮ್​ಗೆ BCCI ಮಣೆ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ ಆಡುತ್ತಿತ್ತು. ರೋಹಿತ್ ಮೂರು ಮಾದರಿಯ ಕ್ರಿಕೆಟ್​​ಗೆ ಒಬ್ಬರೇ ನಾಯಕರಾಗಿದ್ದರು. ಸದ್ಯ ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾಗೆ ನಾಯಕ ಯಾರು ಎಂಬ ಪ್ರಶ್ನೆಗೆ ಬಿಸಿಸಿಐ ಹೊಸ ಉತ್ತರ ಕೊಟ್ಟಿದೆ. ಮುಂದಿನ ತಿಂಗಳಿನಿಂದ ಆರಂಭವಾಗುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಟೂರ್ನಿಗೆ ಶುಭ್​ಮನ್​ ಗಿಲ್ ಅವರನ್ನ ​ ಕ್ಯಾಪ್ಟನ್ ಆಗಿ 15 ಆಟಗಾರರ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ.

ಇದನ್ನೂ ಓದಿ: ಕ್ಯಾಸಿನೊ ಗೇಮ್​​ನಲ್ಲಿ ಕೋಟಿ ಕೋಟಿ ಹಣ ಗೆದ್ದ.. ಖುಷಿಯಲ್ಲಿ ಇರುವಾಗಲೇ ಕಾರ್ಡಿಕ್ ಅರೆಸ್ಟ್, ದುರಂತ ಸಾವು

ಇದೀಗ ಗಿಲ್ ಅವರನ್ನೂ ನಾಯಕರನ್ನಾಗಿ ನೋಡಬಹುದು ಎಂದು ಈ ಹಿಂದೆ ಹೇಳಿತ್ತು. ಅದರಂತೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಶುಭ್​​ಮನ್​ ಗಿಲ್​ ನೇತೃತ್ವದಲ್ಲಿ ಬಿಸಿಸಿಐ ಹೊಸ ತಂಡವನ್ನೂ ಪ್ರಕಟಿಸಿದೆ. ಜುಲೈ 6 ರಿಂದ ಜಿಂಬಾಬ್ವೆ ಜೊತೆಗಿನ ಪಂದ್ಯಗಳು ಆರಂಭವಾಗಲಿವೆ. ಎರಡನೇ ಪಂದ್ಯ ಜುಲೈ 7 ರಂದು ನಡೆಯುತ್ತದೆ. ಆದರೆ ಮೂರನೇ ಪಂದ್ಯ ಜುಲೈ 10 ರಂದು ನಡೆಯಲಿದೆ. 4ನೇ ಪಂದ್ಯ ಜುಲೈ 13 ರಂದು ಮತ್ತು ಐದನೇ ಪಂದ್ಯ ಜುಲೈ 14 ರಂದು ನಡೆಯಲಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿಂದು ಯಾರಾಗ್ತಾರೆ ಮ್ಯಾಚ್ ವಿನ್ನರ್​..? ಎಲ್ಲರ ಕಣ್ಣು ಈ ಆಲ್​ರೌಂಡರ್ ಮೇಲೆ!

ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ಬೂಮ್ರಾ, ಶಮಿ, ಸಿರಾಜ್, ರಿಷಬ್ ಪಂತ್ ಸೇರಿದಂತೆ ಈ ಹಿಂದಿನ ಎಲ್ಲ ಆಟಗಾರರಿಗೆ ಬಿಸಿಸಿಐ ಕೊಕ್ ನೀಡಿದೆ. ಹೊಸ ತಂಡವನ್ನು ಇದೀಗ ಪ್ರಕಟಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಕ್ಯಾಪ್ಟನ್ಸಿ ಕಿತ್ತುಕೊಳ್ತಾ BCCI..? ಭಾರತ- ಜಿಂಬಾಬ್ವೆ T20 ಸರಣಿಗೆ ಶುಭ್​ಮನ್ ಗಿಲ್​ ನಾಯಕ

https://newsfirstlive.com/wp-content/uploads/2024/06/ROHIT_GILL.jpg

Load More