ಆಸ್ಟ್ರೇಲಿಯಾ, ಇಂಗ್ಲೆಂಡ್ನಿಂದ ಕಲಿಬೇಕು ಭಾರತದ ಕ್ರಿಕೆಟ್ ಮಂಡಳಿ
ಆಟಗಾರರ ಆಡಿ ಆಡಿ ಸುಸ್ತಾದ್ರೂ ರೆಸ್ಟ್ ಅನ್ನೋದೇ ಐಪಿಎಲ್ನಲ್ಲಿ ಇಲ್ಲ
ದೇಶಕ್ಕಿಂತ ಐಪಿಎಲ್ ಅನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ಬಿಸಿಸಿಐ
ದೇಶಕ್ಕಿಂತ ಹೆಚ್ಚಾಯ್ತಾ ಐಪಿಎಲ್?. ಬಿಸಿಸಿಐಗೆ ದೇಶದ ಪ್ರತಿಷ್ಠೆಗಿಂತ ಹಣವೇ ಮುಖ್ಯನಾ?. ಭಾರತೀಯ ಕ್ರಿಕೆಟ್ ಏಳಿಗೆ ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ವಾ?. ನಿಜಕ್ಕೂ ಭಾರತೀಯ ಕ್ರಿಕೆಟ್ ಬೆಳವಣಿಗಿಗೆ ಏನ್ ಮಾಡ್ತಿದೆ ಬಿಸಿಸಿಐ. ಈ ಎಲ್ಲಾ ಪ್ರಶ್ನೆಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಳಿಕ ಕೇಳಿ ಬರುತ್ತಿವೆ.
ಕ್ರಿಕೆಟ್.. ಭಾರತದ ಜನಪ್ರಿಯ ಕ್ರೀಡೆ. ಅದು ಯಾವ ಮಟ್ಟಕ್ಕೆ ಅಂದ್ರೆ, ಒಂದು ಧರ್ಮವಾಗಿ ಬೇರೂರಿದೆ. ಈ ಕ್ರಿಕೆಟ್ ಅನ್ನೇ ಬಂಡವಾಳ ಮಾಡಿಕೊಂಡ ಬಿಸಿಸಿಐ, ಇಂದು ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆದಿದೆ. ಐಪಿಎಲ್ ಮೂಲಕ ಸಾವಿರಾರೂ ಕೋಟಿ ಜೇಬಿಗಿಳಿಸುತ್ತಿರುವ ಬಿಗ್ಬಾಸ್ಗಳಿಗೆ ಇಂದು ದೇಶಕ್ಕಿಂತ ಐಪಿಎಲ್ ಮುಖ್ಯ ಎಂಬ ಹುಚ್ಚು ತನದಲ್ಲಿದೆ. ಇದಕ್ಕೆಲ್ಲ ಕಾರಣ ಶ್ರೀಮಂತ ಕ್ರಿಕೆಟ್ ಲೀಗ್ನಿಂದ ಹರಿಯುತ್ತಿರೋ ಹಣದ ಹೊಳೆ.
ಐಪಿಎಲ್ ಎಂಬ ಮಾಯಜಾಲದಲ್ಲಿ ತೇಲಾಡ್ತಿರೋ ಬಿಸಿಸಿಐ, ದೇಶಕ್ಕಿಂತ ಐಪಿಎಲ್ ಮಿಲಿಯನ್ ಡಾಲರ್ ಟೂರ್ನಿಯನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹಣದ ಅಮಲಿನಲ್ಲಿ ದೇಶದ ಘನತೆಯನ್ನೇ ಪಣಕ್ಕಿಟ್ಟಿದೆ. ಇದಕ್ಕೆಲ್ಲ ಸಾಕ್ಷಿ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲು.
ಐಪಿಎಲ್ ಆಡಿದವರು WTC ಫೈನಲ್ನಲ್ಲಿ ಅಟ್ಟರ್ಫ್ಲಾಫ್..!
WTC ಫೈನಲ್ ಸೋಲಿನ ಬೆನ್ನಲ್ಲೇ ಐಪಿಎಲ್ನ ಹೊಣೆ ಮಾಡಲಾಗ್ತಿದೆ. ಐಪಿಎಲ್ನಲ್ಲಿ ಆಡಿದ ಆಟಗಾರರ ಅಟ್ಟರ್ ಫ್ಲಾಪ್ ಎಂದು ಟೀಕಿಸಲಾಗ್ತಿದೆ. ಇದಕ್ಕೆ ಕಾರಣ ಐಪಿಎಲ್ನಲ್ಲಿ ಆಡಿರೋ ಎಲ್ಲ ಆಟಗಾರರು ವೈಫಲ್ಯ ಅನುಭವಿಸಿದ್ದೇ ಆಗಿದೆ. ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್, ಕ್ಯಾಮರೂನ್ ಗ್ರೀನ್ ಸಹಿತ ಫ್ಲಾಫ್ ಆಗಿದ್ದಾರೆ. ಇದನ್ನೇ ಎಕ್ಸಾಂಪಲ್ ನೀಡ್ತಿದ್ದಾರೆ.
ಅಷ್ಟೇ ಅಲ್ಲ, ಸೂಪರ್ ಪವರ್ ಕ್ರಿಕೆಟ್ ಸಂಸ್ಥೆ, ವಾರ್ಮ್ ಅಪ್ಗೂ ಟೈಮ್ ನೀಡದಂತೆ ರೆಡ್ಬಾಲ್ ಕ್ರಿಕೆಟ್ಗೆ ತಳ್ಳಿತ್ತು. ಈ ನಡೆ ನಿಜಕ್ಕೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಇದಿಷ್ಟೇ ಅಲ್ಲ, ಆಟಗಾರರಿಗೆ ದೇಶಕ್ಕಿಂತ ಐಪಿಎಲ್ ಮುಖ್ಯ ಎಂಬ ಗಂಭೀರ ಆರೋಪಗಳನ್ನೂ ಎದುರಿಸ್ತಿದ್ದಾರೆ. ಆದ್ರೆ, ಇದರ ಹಿಂದೆ ಸತ್ಯ ಬೇರೇಯದ್ದೇ ಇದೆ.
ಆಟಗಾರರ ಅಹವಾಲು ಕೇಳಲ್ಲ ಐಪಿಎಲ್ ಫ್ರಾಂಚೈಸೀಸ್..!
ಐಪಿಎಲ್ನಲ್ಲಿ ಒಮ್ಮೆ ಕೋಟಿ ಕೋಟಿಗೆ ಬಿಕರಿಯಾದ್ರೆ, ಮುಗೀತು ಆಟಗಾರರ ಬಳಲಿ ಬೆಂಡಾದರೂ ರೆಸ್ಟ್ ಅನ್ನೋ ಪದಕ್ಕೆ ಇಲ್ಲಿ ಸ್ಥಾನವೇ ಇಲ್ಲ. ಒಂದು ಮಾತಲ್ಲಿ ಹೇಳೋದ್ರಾದ್ರೆ, ಆಟಗಾರರ ವಿಚಾರದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನಂತೆ ಭಾರತದಲ್ಲಿ ನಡೆಯೋದೆ ಇಲ್ಲ. ಇದನ್ನ ಸ್ವತಃ ಟೀಮ್ ಇಂಡಿಯಾದ ಆಟಗಾರರೇ ಹೇಳಿಕೊಂಡಿದ್ದಾರೆ.
ಬ್ರೇಕ್ ತೆಗೆದುಕೊಳ್ಳಲು ಬಿಡಲ್ಲ..!
ನಾನು ಬಳಲಿದ್ದೇನೆ. ನನಗೆ ಬ್ರೇಕ್ ಬೇಕು. ಆದರೆ, ನನ್ನ ಫ್ರಾಂಚೈಸಿ ಬ್ರೇಕ್ ತೆಗೆದುಕೊಳ್ಳಲು ಬಿಡಲ್ಲ. ಇದು ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಅಲ್ಲ. ಟೀಮ್ ಇಂಡಿಯಾ ಆಟಗಾರರ ದುಸ್ಥಿತಿ. ಈ ವಿಚಾರದಲ್ಲಿ ಆಟಗಾರರ ನೆರವಿಗೆ ನಿಲ್ಲಬೇಕಿರೋ ಬಿಸಿಸಿಐ ಕೂಡ, ಫ್ರಾಂಚೈಸಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರೋದು ನಿಜಕ್ಕೂ ಘನಘೋರ.
ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಬೇಕಿದೆ ದೂರ ದೃಷ್ಟಿ..!
ಬಿಸಿಸಿಐ ಹಣದ ಕಣಜ ತುಂಬಿಸುತ್ತಿದೆ ನಿಜ. ಆದ್ರೆ ಫ್ಯೂಚರ್ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ. ಈ ಒಂದು ಲೀಗ್ನಲ್ಲಿ 3 ಫಾರ್ಮೆಟ್ ಆಟಗಾರರು ಸಿಗ್ತಾರೆ ಅನ್ನೋದು ನಿಜಕ್ಕೂ ಹುಚ್ಚುತನ. ಐಪಿಎಲ್ನಿಂದಲೇ ಎಲ್ಲವೂ ಎಂಬ ಅಜ್ಞಾನದಲ್ಲಿ ಬಿಸಿಸಿಐ ಮುಳುಗಿದರೆ, ಬ್ಯಾಂಕ್ ಬ್ಯಾಲೆನ್ಸ್ ಡಬಲ್ಗಾಗಿ ಐಪಿಎಲ್ ಆಡೋದೆ ನೆಕ್ಸ್ಟ್ ಜನರೇಷನ್ ಪ್ಲೇಯರ್ಗಳ ಗುರಿಯಾಗೋದರಲ್ಲಿ ಅನುಮಾನವೇ ಇಲ್ಲ.
ಹೀಗಾಗಿ ಬಿಸಿಸಿಐ ಸ್ಪೋರ್ಟ್ಸ್ ಜಸ್ಟ್ ಬ್ಯಾಂಕ್ ಬ್ಯಾಲೆನ್ಸ್ ರೀತಿ ನೋಡದೆ, ಭಾರತದ ಘನತೆಯಂತೆ ನೋಡಬೇಕಾದ ಅಗತ್ಯತೆ ಇದ್ದೇ ಇದೆ. ಫ್ರಾಂಚೈಸಿಗಳ ಕಮರ್ಷಿಯಲ್ ಡಿಮ್ಯಾಂಡ್ಸ್ ಜೊತೆ ಜೊತೆಗೆ ದೇಶವೂ ಫಸ್ಟ್ ಎಂಬ ಪರಿಕಲ್ಪನೆಯನ್ನ ಬಿಸಿಸಿಐ, ಫ್ರಾಂಚೈಸಿಗಳ ಮೇಲೆ ಹೇರಬೇಕಾದ ಅಗತ್ಯತೇ ಇದ್ದೇ ಇದೆ. ಇಲ್ಲದಿದ್ರೆ, ಭಾರತ ಸಂಪೂರ್ಣ ಲೀಗ್ ಮಯ ಆಗೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ