newsfirstkannada.com

ಸರ್ಫರಾಜ್ ಖಾನ್​ಗಾಗಿ ಬಿಸಿಸಿಐ ಜೊತೆ ಮುಂಬೈ ಕ್ರಿಕೆಟ್ ಕೌಂಟಿ ವಾಗ್ವಾದ.. ಸರ್ಫರಾಜ್ ಮಾಡಿದ್ದಾದ್ರೂ ಏನು? Video

Share :

27-06-2023

    ಆಯ್ಕೆ ಮಾಡದಿದ್ದಕ್ಕೆ ಸಮರ್ಥನೆ ಕೊಟ್ಟಿದ್ದ ಬಿಸಿಸಿಐಗೆ ಮುಂಬೈ ಕ್ರಿಕೆಟ್​ ಟಾಂಗ್​

    ಸರ್ಫರಾಜ್ ಖಾನ್ ಪರ ಬ್ಯಾಟ್​ ಬೀಸಿದ ಮುಂಬೈ ಕ್ರಿಕೆಟ್ ಕೌಂಟರ್​.. ಯಾಕೆ?

    ಸೆಂಚುರಿ ಬಾರಿಸಿದಾಗ ಎಲ್ಲರು ಸಂಭ್ರಮಿಸ್ತಾರೆ, ಅದರಂತೆ ಇವರು ಮಾಡಿದ್ದಾರೆ

ಸರ್ಫರಾಜ್ ಖಾನ್ ವರ್ಸಸ್ ಸೆಲೆಕ್ಟರ್ಸ್. ಸದ್ಯ ಕ್ರಿಕೆಟ್ ಪಡಸಾಲೆಯಲ್ಲಿ ಇದೇ ಡಿಬೇಟ್ ಜೋರಾಗಿದೆ. ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಿಂದ ಸರ್ಫರಾಜ್ ಖಾನ್​ರನ್ನ ಕೈಬಿಟ್ಟಿದ್ದಕ್ಕೆ ಬಿಸಿಸಿಐ ಸಮರ್ಥನೆ ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಮುಂಬೈ ಕ್ರಿಕೆಟ್ ಕೌಂಟರ್ ಅಟ್ಯಾಕ್ ನಡೆಸಿದೆ. ಅಷ್ಟಕ್ಕೂ ಏನಿದು ಬಿಸಿಸಿಐ ವರ್ಸಸ್ ಮುಂಬೈ ಕ್ರಿಕೆಟ್ ವಾರ್ ಎಂದರೆ.

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಸರ್ಫರಾಜ್ ಖಾನ್ ರನ್ ಮಷಿನ್. ಇರೋ ಬರೋ ದಾಖಲೆಗಳೆನ್ನೆಲ್ಲ ಅಳಿಸಿ ಹಾಕಿ, ರನ್ ಗುಡ್ಡೆ ಹಾಕಿದ್ರೂ ರಾಷ್ಟ್ರೀಯ ತಂಡದ ಪರ ಆಡುವ ಕನಸು ಮಾತ್ರ ಈಡೇರಿಲ್ಲ. ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಿಂದಲೂ ಸರ್ಫರಾಜ್ ಖಾನ್​ರನ್ನ ಕಡೆಗಣಿಸಲಾಗಿದೆ. ಇದೇ ವಿಚಾರ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ.

ತಾರಕಕ್ಕೇರಿದ ಸರ್ಫರಾಜ್ VS ಸೆಲೆಕ್ಟರ್ಸ್ ಡಿಬೇಟ್..!

ಸರ್ಫರಾಜ್ ಖಾನ್​ರನ್ನ ಇಂಡೀಸ್ ಸರಣಿಯಿಂದ ಕೈಬಿಟ್ಟಿದ್ದೇ ಬಂತು. ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಆಕ್ರೋಶಗಳ ಸುರಿಮಳೆ ವ್ಯಕ್ತವಾಯ್ತು. ಕೂಡಲೇ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಬಿಸಿಸಿಐ ಕಡೆಗಣಿಸಿದ್ದಕ್ಕೆ ಕಾರಣ ನೀಡ್ತು.

ಸರ್ಫರಾಜ್ ಶಿಸ್ತು ವೃದ್ಧಿಸಿಕೊಳ್ಳಬೇಕು

ಸಿಟ್ಟಿನಲ್ಲಿನ ರಿಯಾಕ್ಷನ್ ಅರ್ಥಮಾಡಿಕೊಳ್ಳಬಲ್ಲೆವು. ಆದರೆ ಅದಕ್ಕೊಂದು ಮಿತಿಯಿದೆ. ಸೀಸನ್​ ಒಂದರಲ್ಲಿ 900ಕ್ಕೂ ಅಧಿಕ ರನ್ ಬಾರಿಸಿದ ಆಟಗಾರರನ್ನ ಕಡೆಗಣಿಸದಿರುವುದಕ್ಕೆ ಆಯ್ಕೆಗಾರರೇನು ಮೂರ್ಖರಾ?. ಸರ್ಫರಾಜ್ ಆಯ್ಕೆ ಮಾಡದಿರುವುದಕ್ಕೆ ಅನೇಕ ಕಾರಣಗಳಿವೆ. ಫಿಟ್ನೆಸ್ ಲೆವೆಲ್ ಉತ್ತಮ ಪಡಿಸಿಕೊಳ್ಳಬೇಕು ಮತ್ತು ಅವರ ಆಕ್ರಮಣಕಾರಿ ಸ್ವಭಾವ ಒಪ್ಪುವಂತಹದ್ದಲ್ಲ. ಈ ಬಗ್ಗೆ ಅವರು ಹೆಚ್ಚಿನ ಗಮನ ಹರಿಸಬೇಕಿದೆ.

ಬಿಸಿಸಿಐ ಹಿರಿಯ ಅಧಿಕಾರಿ

ಇದು ಸರ್ಫರಾಜ್​ ಸೆಲೆಕ್ಟ್ ಮಾಡದಿರುವುದಕ್ಕೆ ಬಿಸಿಸಿಐ ಕೊಟ್ಟ ಸಮರ್ಥನೆ. ಅಧಿಕಾರಿಗಳು ಹೀಗೆ ಹೇಳಿದ್ದೇ ತಡ ಅತ್ತ ಮುಂಬೈ ಕ್ರಿಕೆಟ್ ಕೂಡ ಸರ್ಫರಾಜ್​ರನ್ನ ಡಿಫೆಂಡ್ ಮಾಡಿಕೊಂಡಿದೆ. ಯಾವುದೇ ಕಾರಣಕ್ಕೂ ಸರ್ಫರಾಜ್ ಹದ್ದು ಮೀತಿ ವರ್ತಿಸಿಲ್ಲ. ಅದು ಸಹಜ ಸೆಲೆಬ್ರೇಶನ್ ಎಂದು ಮುಂಬೈ ಕ್ರಿಕೆಟ್ ಹೇಳಿದೆ.

ಸರ್ಫರಾಜ್ ಮಿತಿಮೀರಿ ವರ್ತಿಸಿಲ್ಲ

ಮಧ್ಯಪ್ರದೇಶದ ವಿರುದ್ಧ ರಣಜಿ ಪಂದ್ಯದಲ್ಲಿ ಸರ್ಫರಾಜ್ ಖಾನ್ ಡಗೌಟ್​ ಅತ್ತ ಬ್ಯಾಟ್ ತೋರಿಸಿ ಸಂಭ್ರಮಿಸಿದ್ರು. ಯಾಕಂದ್ರೆ ಅಲ್ಲಿ ಸಹ ಆಟಗಾರರು ಮತ್ತು ಕೋಚ್ ಅಮೋಲ್ ಮುಜುಂದಾರ್ ಇದ್ದರು. ಈ ವೇಳೆ ಮುಜುಂದಾರ್ ಕ್ಯಾಪ್ ತೆಗೆದು ಸರ್ಫರಾಜ್​ಗೆ ನಮಿಸಿದ್ರು. ಇದಕ್ಕೆ ಪ್ರತಿಯಾಗಿ ಸರ್ಫರಾಜ್ ಖಾನ್ ತೊಡೆ ತಟ್ಟಿ ಕೈ ಬೆರಳನ್ನ ಮೇಲಕ್ಕೆತ್ತಿ ಸಂಭ್ರಮಿಸಿದ್ರು. ಈ ವೇಳೆ ಅಲ್ಲಿ ಸಲೀಲ್ ಅಂಕೋಲ್ ಇದ್ದರು. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಇರಲಿಲ್ಲ. ಸರ್ಫರಾಜ್ ತಂಡವನ್ನ ಒತ್ತಡದಿಂದ ಪಾರು ಮಾಡಿದ್ದರು. ಅವರ ಸಂಭ್ರಮ ಮನಸ್ಸಿನ ನಿರಾಳದ ಭಾಗ.

ಮುಂಬೈ ಕ್ರಿಕೆಟ್ ಅಸೋಷಿಯೇಶನ್

ಇಲ್ಲಿ ಯಾರದ್ದು ಸರಿ ? ಯಾರದ್ದು ತಪ್ಪು..?

ಬಿಸಿಸಿಐ ಒಂದು ಕಡೆ ಸರ್ಫರಾಜ್ ಖಾನ್​ಗೆ ಫಿಟ್ನೆಸ್ ಲೆವೆಲ್ ಮತ್ತು ಡಿಸಿಪ್ಲಿನ್ ಇಶ್ಯೂ ಇದೆ. ಹೀಗಾಗಿ ಅವರನ್ನ ಇಂಡೀಸ್ ಸರಣಿಗೆ ಪರಿಗಣಿಸಿಲ್ಲ ಎಂದು ರೀಸನ್ ಕೊಡ್ತಿದೆ. ಅತ್ತ ಮುಂಬೈ ಕ್ರಿಕೆಟ್ ಇದನ್ನ ಅಲ್ಲಗಳೆದಿದೆ. ಸರ್ಫರಾಜ್ ಎಲ್ಲೂ ಮಿತಿ ಮೀರಿಲ್ಲ. ಸೆಂಚುರಿ ಬಾರಿಸಿದ ಖುಷಿಯಲ್ಲಿ ಸಹ ಆಟಗಾರರೆದುರು ಕೈ ಬೆರಳನ್ನ ತೋರಿಸಿ ಸಂಭ್ರಮಿಸಿದ್ದಾರೆ ಎಂದು ಹೇಳುವ ಮೂಲಕ ಡಿಫೆಂಟ್ ಮಾಡಿಕೊಳ್ಳುವ ಕೆಲಸ ಮಾಡಿದೆ.

ಫೈನಲಿ ಇಲ್ಲಿ ಯಾರು ಹೇಳಿದ್ದು ಕರೆಕ್ಟ್ ಬಿಸಿಸಿಐ ನಾ ಅಥವಾ ಮುಂಬೈ ಕ್ರಿಕೆಟ್​ ಅನ್ನೋದು ಎಲ್ಲರನ್ನ ಕಾಡ್ತಿರುವ ಪ್ರಶ್ನೆ. ಯಾಕಂದ್ರೆ ಫಿಟ್ನೆಸ್ ಲೆವೆಲ್ ಬಗ್ಗೆ ಮಾತನಾಡುವ ಬಿಸಿಸಿಐ ಟೀಮ್ ಇಂಡಿಯಾದಲ್ಲಿ ಅದೆಷ್ಟೋ ಪ್ಲೇಯರ್ಸ್ ಫುಟ್ ಫಿಟ್ ಇದ್ದಾರೆ ಅನ್ನೋದನ್ನ ಸ್ವ ವಿಮರ್ಶೆ ಮಾಡಿಕೊಳ್ಳಬೇಕಿದೆ.

ಇನ್ನು ಇಲ್ಲಿ ಮುಂಬೈ ಕ್ರಿಕೆಟ್ ಸಮರ್ಥನೆಯು ಪ್ರಶ್ನಾರ್ಹವೆ. ಯಾಕಂದ್ರೆ ಇದೇ ಸರ್ಫರಾಜ್ ಆಕ್ರಮಣಕಾರಿ ಸ್ವಭಾವ ಕಮ್ಮಿ ಮಾಡಿಕೊಳ್ಳಲು ಒಮ್ಮೆ ಮನೋವೈದ್ಯರನ್ನ ಭೇಟಿಯಾಗಿದ್ರು. ಇಷ್ಟಾದ್ರು ಸರ್ಫರಾಜ್ ನಡತೆಯಲ್ಲಿ ಬದಲಾಗಿಲ್ಲ ಅನ್ನೋ ವಾದವು ಇದೆ. ಸೋ, ಸರ್ಫರಾಜ್ ವರ್ಸಸ್ ಸೆಲೆಕ್ಟರ್ಸ್ ಡಿಬೇಟ್ ಇಲ್ಲಿಗೆ ನಿಲ್ಲುತ್ತಾ?. ಇಲ್ಲ ಮತ್ತಷ್ಟು ಕಾವೇರುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸರ್ಫರಾಜ್ ಖಾನ್​ಗಾಗಿ ಬಿಸಿಸಿಐ ಜೊತೆ ಮುಂಬೈ ಕ್ರಿಕೆಟ್ ಕೌಂಟಿ ವಾಗ್ವಾದ.. ಸರ್ಫರಾಜ್ ಮಾಡಿದ್ದಾದ್ರೂ ಏನು? Video

https://newsfirstlive.com/wp-content/uploads/2023/06/Sarfaraz_khan-1.jpg

Load More