IPL ಆಡಿದ ಮಾತ್ರಕ್ಕೆ ಭಾರತ ತಂಡದಲ್ಲಿ ಚಾನ್ಸ್ ಸಿಗೋದು ಡೌಟ್
ಮೈದಾನದಲ್ಲಿ ತೋರಿದ ವರ್ತನೆಯೇ ಇವರಿಗೆ ಪ್ಲಸ್ ಪಾಯಿಂಟ್
ಈಗಾಗಲೇ ನಾಲ್ವರ ಮೇಲೆ ಕಣ್ಣು, ತಂಡದಲ್ಲಿ ಆಡಲು ಸಿಕ್ಕಿಲ್ಲ ಚಾನ್ಸ್
ಇಷ್ಟು ದಿನ ಐಪಿಎಲ್ನಲ್ಲಿ ಸಖತ್ ಪರ್ಫಾಮೆನ್ಸ್ ನೀಡಿದರೆ ಭಾರತ ತಂಡದಲ್ಲಿ ಚಾನ್ಸ್ ಸಿಗುತ್ತಿತ್ತು. ಆದ್ರೆ, ಇನ್ಮುಂದೆ ಹಂಗಾಗಲ್ಲ. ಎಷ್ಟೇ ಚೆನ್ನಾಗಿ ಪರ್ಫಾಮ್ ಮಾಡಿದರು, ಎಷ್ಟೇ ಟ್ಯಾಲೆಂಟ್ ಇರಲಿ, ಸಣ್ಣ ಯಡವಟ್ಟು ಮಾಡಿಕೊಂಡರು ಕಥೆ ಮುಗಿಯಿತು. ಖೇಲ್ ಖತಂ, ಟೀಮ್ ಇಂಡಿಯಾ ಡೋರ್ ಕ್ಲೋಸ್ ಅಷ್ಟೇ.
ತಂಡಕ್ಕೆ ಎಂಟ್ರಿಗೆ ಮಾನದಂಡ ಏನು?. ಈ ಪ್ರಶ್ನೆ ಪ್ರತಿ ಬಾರಿ ಟೀಮ್ ಸೆಲೆಕ್ಷನ್ ಆದಾಗ್ಲೂ ಚರ್ಚೆಯಾಗುತ್ತಲೇ ಇರುತ್ತೆ. ಈ ಬಾರಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಸೆಲೆಕ್ಷನ್ ಆದಾಗಲೂ ಕೂಡ ಇದೇ ಹೆಚ್ಚು ಸದ್ದು ಮಾಡ್ತಿದೆ. ಸರ್ಫರಾಜ್ ಖಾನ್ರನ್ನ ತಂಡದಿಂದ ಕೈ ಬಿಡಲು ಬಲವಾದ ಕಾರಣ ಕೂಡ ಇದೆ.
ಇದನ್ನು ಓದಿ: ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.. ಕ್ರಿಕೆಟ್ಗೆ ಗುಡ್ಬೈ ಹೇಳ್ತಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ..!
ಕಳೆದ 2 ಸೀಸನ್ಗಳಿಂದ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಸರ್ಫರಾಜ್ ಖಾನ್ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬ್ಯಾಟ್ ಹಿಡಿದು ಘರ್ಜಿಸ್ತಾ ಇರೋ ಯಂಗ್ ಬ್ಯಾಟರ್ ರನ್ ಕೊಳ್ಳೆ ಹೊಡೀತಿದ್ದಾರೆ. ಸರ್ಫರಾಜ್ ಬ್ಯಾಟಿಂಗ್ ವೈಖರಿಗೆ ಫಿದಾ ಆಗಿರೋ ಎಲ್ಲರೂ, ಟೀಮ್ ಇಂಡಿಯಾ ಸೆಲೆಕ್ಟ್ ಮಾಡಿ ಅಂತಿದ್ದಾರೆ. ಆದ್ರೆ, ಮುಂಬೈಕರ್ಗೆ ಚಾನ್ಸ್ ಸಿಗ್ತಾನೆ ಇಲ್ಲ.
ಟ್ಯಾಲೆಂಟ್, ಪರ್ಫಾಮೆನ್ಸ್ ಇದ್ರೆ ಚಾನ್ಸ್ ಸಿಗಲ್ಲ..!
ಸರ್ಫರಾಜ್ ಖಾನ್ಗೆ ಯಾಕೆ ಚಾನ್ಸ್ ಸಿಗ್ತಾ ಇಲ್ಲ ಈ ಪ್ರಶ್ನೆಗೆ ಹುಡುಕಾಟ ನಡೆಸಿದಾಗ ಸಿಕ್ಕ ಉತ್ತರ ಅವರ ‘ವರ್ತನೆ’. ಸರ್ಫರಾಜ್ ಖಾನ್ ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ಸುಮ್ಮನಾಗಿದ್ರೆ, ಚಾನ್ಸ್ ಸಿಗ್ತಿತ್ತೋ ಏನೋ. ಆದ್ರೆ, ಸೆಂಚುರಿ ಪೂರೈಸಿದ ಒಳಿಕ ಓವರ್ ಆಗಿ ಸೆಲಬ್ರೇಷನ್ ಮಾಡಿದ್ದು ಮುಳುವಾಯ್ತು. ಜೊತೆಗೆ ಆಯ್ಕೆಯಾಗದಕ್ಕೆ ಸೆಲೆಕ್ಟರ್ಸ್, ಬಿಸಿಸಿಐ ಅಫಿಶಿಯಲ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಟಾಂಗ್ ನೀಡುವಂತೆ ಪೋಸ್ಟ್ ಹಾಕಿದ್ರಿಂದ ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇವಲ ಸರ್ಫರಾಜ್ ಮಾತ್ರವಲ್ಲ, ಇನ್ನೂ ಹಲವರು ಈ ಪಟ್ಟಿಯಲ್ಲಿದ್ದಾರೆ.
ಭಾರತ ತಂಡದ ಪರ ಆಡಬೇಕು ಎಂದು ಕನಸುಗಳಿಂದ ಆಡ್ತಿರೋ ಯುವಕರೇ ಇದೇ ಎಚ್ಚರಿಕೆಯ ಕರೆಗಂಟೆಯಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ರೆ, ಇಂಡಿಯಾ ಪರ ಆಡೋ ಕನಸು ಕನಸಾಗೇ ಉಳಿಯಲಿದೆ. ಡೊಮೆಸ್ಟಿಕ್ ಹಾಗೂ ಐಪಿಎಲ್ನಂತ ಟೂರ್ನಿಗಳಲ್ಲಿ ಆಡುವ ಎಲ್ಲರನ್ನೂ ಬಿಸಿಸಿಐ ಮಾನಿಟರ್ ಮಾಡೋಕೆ ಆರಂಭಿಸಿದ್ದಾರೆ. ಪರ್ಫಾಮ್ ಮಾಡಿ ಟ್ಯಾಲೆಂಟ್ ತೋರಿಸೋದರ ಜೊತೆಗೆ ಶಿಸ್ತಿನ ವರ್ತನೆ ಇದ್ರೆ ಮಾತ್ರ ಚಾನ್ಸ್ ಸಿಗಲಿದೆ.
ಬಿಸಿಸಿಐ ಅಧಿಕಾರಿಗಳ ಹದ್ದಿನ ಕಣ್ಣಲ್ಲಿ ನಾಲ್ವರು ಯುವ ಆಟಗಾರರು
ಸದ್ಯ ಐಪಿಎಲ್ನಲ್ಲಿ ಮಿಂಚಿದ ನಾಲ್ವರು ಯುವ ಆಟಗಾರರು ಬಿಸಿಸಿಐನ ಹದ್ದಿನ ಕಣ್ಣಿನಲ್ಲಿದ್ದಾರಂತೆ. ಐಪಿಎಲ್ ಟೂರ್ನಿ ಮುಗಿದ ಬಳಿಕ ಫ್ರಾಂಚೈಸಿಗಳಲ್ಲಿದ್ದ ಇಂಟಿಗ್ರಿಟಿ ಆಫೀಸರ್ಸ್ ರಿಪೋರ್ಟ್ ಸಲ್ಲಿಸಿದ್ದು, ನಾಲ್ವರು ಆಟಗಾರರ ವರ್ತನೆಯ ಬಗ್ಗೆ ದೂರು ಕೇಳಿ ಬಂದಿದೆಯಂತೆ. ನಿಯಮ ಮೀರಿ ವರ್ತಿಸಿದ್ದಾರೆ ಎನ್ನಲಾಗ್ತಿದ್ದು, ಸೆಲೆಕ್ಷನ್ ಕಮಿಟಿ ಹಾಗೂ ಬಿಸಿಸಿಐ ಅಧಿಕಾರಿಗಳು ಗರಂ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನು ಓದಿ: ವಿಶ್ವಕಪ್ನಲ್ಲಿ ಜಡೇಜಾ, ಚಹಾಲ್ ಜೊತೆ ಯಾವ್ಯಾವ ಸ್ಪಿನ್ ಮಾಂತ್ರಿಕರಿಗೆ ಸ್ಥಾನ..? ಅಶ್ವಿನ್ ಕಥೆ ಮುಗಿಯಿತಾ..?
IPLನಲ್ಲಿ ಪರ್ಫಾಮ್ ಮಾಡಿದ ಮಾತ್ರಕ್ಕೆ ಚಾನ್ಸ್ ಸಿಗಲ್ಲ..!
ಕಳೆದ ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಪರ್ಫಾಮ್ ಮಾಡಿದ್ರೆ ಸಾಕು ಟೀಮ್ ಇಂಡಿಯಾದಲ್ಲಿ ಸ್ಥಾನ ಫಿಕ್ಸ್ ಅನ್ನೋ ಮಾತು ಇತ್ತು. ಹಲ ಸರಣಿಗಳ ವಿಚಾರದಲ್ಲಿ ಇದು ನಿಜವಾಗಿದೆ ಕೂಡ. ಆದ್ರೆ, ಕೇವಲ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೆ ಮಾತ್ರ ಸಾಲಲ್ಲ. ಬಿಹೆವಿಯರ್ ಕೂಡ ಮೋಸ್ಟ್ ಇಂಪಾರ್ಟೆಂಟ್. ಆನ್ & ಆಫ್ ದ ಫೀಲ್ಡ್ನಲ್ಲಿ ಆಟಗಾರರ ವರ್ತನೆ ಹೇಗಿರತ್ತೆ ಅನ್ನೋದರ ಮೇಲೆ ಸ್ಥಾನ ನಿರ್ಧಾರವಾಗಲಿದೆ.
ಸದ್ಯ, ಆಟಗಾರರ ನಿಯಮ ಮೀರಿದ ವರ್ತನೆಗಳಿಂದ ಸಿಟ್ಟಾಗಿರೋ ಬಿಸಿಸಿಐ ಅಧಿಕಾರಿಗಳು ಖಡಕ್ ಸಂದೇಶ ರವಾನಿಸಲು ಮುಂದಾಗಿದ್ದಾರೆ. ಹೀಗಾಗಿ ಟೀಮ್ ಸೆಲೆಕ್ಷನ್ ವಿಚಾರದಲ್ಲಿ ಟಫ್ ಕಾಲ್ ತೆಗೆದುಕೊಳ್ತಿದ್ದಾರೆ. ಇದನ್ನ ನೋಡಿ ಯುವ ಆಟಗಾರರು ಈಗಲೇ ಎಚ್ಚೆತ್ತುಕೊಂಡರೆ ಸೇಫ್. ಇಲ್ಲದಿದ್ರೆ, ಟೀಮ್ ಇಂಡಿಯಾ ಪರ ಆಡುವ ಕನಸು ಕನಸಾಗೇ ಉಳಿಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ