ಈ ಐದು ಕೀ ಪ್ಲೇಯರ್ಸ್ ಟೀಮ್ ಇಂಡಿಯಾಗೆ ಬೇಕೆ ಬೇಕು.!
ಆಟಗಾರರ ಇಂಜುರಿ ವಿಚಾರವಾಗಿ ಕೊನೆಗೆ ತುಟಿ ಬಿಚ್ಚಿದ BCCI
ಬುಮ್ರಾ ಚೇತರಿಕೆಗೆ BCCI ಹ್ಯಾಪಿ, ಶೀಘ್ರ ಕಮ್ಬ್ಯಾಕ್ ಸಾಧ್ಯತೆ
ಟೀಮ್ ಇಂಡಿಯಾದ ಪಂಚ ಪಾಂಡವರ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೇಳಿ ಬಂದಿದೆ. ಇಂತಹದೊಂದು ಸ್ವೀಟ್ ಬ್ರೇಕಿಂಗ್ ನ್ಯೂಸ್ನಿಂದ ಫ್ಯಾನ್ಸ್ ಸಂತಸಕ್ಕೆ ಪಾರವೇ ಇಲ್ಲ. ಅಷ್ಟಕ್ಕೂ ಆ ಪಂಚ ಪಾಂಡವರು ಯಾರು..? ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ ಐವರು ಕೀ ಪ್ಲೇಯರ್ಸ್. ವೇಗಿ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಮ್ಯಾಚ್ ವಿನ್ನರ್ ರಿಷಬ್ ಪಂತ್ ಇಂಜುರಿ ಟೀಮ್ ಇಂಡಿಯಾಗೆ ದೊಡ್ಡ ಸೆಟ್ಬ್ಯಾಕ್ ಆಗಿತ್ತು. ಇವರ ಅಲಭ್ಯತೆಯಲ್ಲಿ 2024ರ ಟಿ20 ವಿಶ್ವಕಪ್ ಹಾಗೂ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಸಹ ಸೋತು ನಿರಾಸೆ ಅನುಭವಿಸಿತ್ತು.
ಮೌನ ಮುರಿದ ಬಿಸಿಸಿಐ.. ಯಾರು, ಯಾವಾಗ ಕಮ್ಬ್ಯಾಕ್..?
3 ತಿಂಗಳಲ್ಲಿ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ನಡೆಯಲಿದೆ. ಈ ಬಿಗ್ ಟೂರ್ನಿಗಾದ್ರು ಪಂಚ ಪಾಂಡವರು ತಂಡಕ್ಕೆ ಕಮ್ಬ್ಯಾಕ್ ಮಾಡ್ತಾರಾ, ಇಲ್ಲ ಅನ್ನೋ ಪ್ರಶ್ನೆ ಕ್ರಿಕೆಟ್ ಪ್ರಿಯರನ್ನ ಬಿಟ್ಟು ಬಿಡದೇ ಕಾಡ್ತಿತ್ತು. ಆಟಗಾರರ ಇಂಜುರಿ ವಿಚಾರದಲ್ಲಿ BCCI ಮೌನ ವಹಿಸಿದ್ದು ಆತಂಕವನ್ನ ಡಬಲ್ ಮಾಡಿತ್ತು. ಇದೀಗ ವಿಶ್ವಕಪ್ ಸಮೀಪಿಸಿದ ಬೆನ್ನಲ್ಲೇ ಬಿಸಿಸಿಐ ತುಟಿ ಬಿಚ್ಚಿ ಮಾತನಾಡಿದ್ದು, ಮೇನ್ ಪ್ಲೇಯರ್ಸ್ ಮರಳುವಿಕೆ ಬಗ್ಗೆ ಗುಡ್ ನ್ಯೂಸ್ ನೀಡಿದೆ.
2024ರ ಇಂಗ್ಲೆಂಡ್ ಸರಣಿ ವೇಳೆಗೆ ಫಿಟ್ ಆಗ್ತಾರೆ ರಿಷಭ್..!
ರಿಷಬ್ ಪಂತ್ ಟೀಮ್ ಇಂಡಿಯಾದ ರಿಯಲ್ ಮ್ಯಾಚ್ ವಿನ್ನರ್. ಇವರ ಬ್ಯಾಟ್ನಿಂದ ಸಿಡಿಯುವ ಒಂದೊಂದು ಸಿಕ್ಸ್ ಕಣ್ಣಿಗೆ ಹಬ್ಬ. ಸದ್ಯ ಆ ಅದೃಷ್ಟ ನೋಡುಗರಿಗೆ ಇಲ್ಲವಾಗಿದೆ. ಯಾಕಂದ್ರೆ ಕಳೆದ ವರ್ಷ ಭೀಕರ ಕಾರು ಅಪಘಾತಕ್ಕೊಳಗಾದ ಪಂತ್ ಇನ್ನೂ ತಂಡಕ್ಕೆ ಮರಳಿಲ್ಲ. ಏಕದಿನ ವಿಶ್ವಕಪ್ನಿಂದ ದೂರ ಉಳಿಯಲಿರುವ ಡೇಂಜರಸ್ ಬ್ಯಾಟರ್, 2024ರಲ್ಲಿ ನಡೆಯಲಿರುವ ಇಂಗ್ಲೆಂಡ್ ಸರಣಿಗೆ ಫಿಟ್ ಆಗಲಿದ್ದಾರೆ. ಸದ್ಯ ಬಿಸಿಸಿಐ ನೀಡಿರೋ ಮಾಹಿತಿ ಪ್ರಕಾರ ಪಂತ್ ಗಮನಾರ್ಹ ಚೇತರಿಕೆ ಕಾಣ್ತಿದ್ದಾರೆ. ನೆಟ್ನಲ್ಲಿ ಬ್ಯಾಟಿಂಗ್, ಕೀಪಿಂಗ್ ಮಾಡಲು ಪ್ರಾರಂಭಿಸಿದ್ದಾರೆ.
ಬುಮ್ರಾ ಚೇತರಿಕೆಗೆ ಬಿಸಿಸಿಐ ಹ್ಯಾಪಿ, ಶೀಘ್ರವೇ ಕಮ್ಬ್ಯಾಕ್
ಕಳೆದ ವರ್ಷ ತಂಡದಿಂದ ಹೊರಬಿದ್ದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕಮ್ಬ್ಯಾಕ್ ಯಾವಾಗ ಎನ್ನುವುದು ಇಲ್ಲಿತನಕ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಆದ್ರೀಗ ಡೆತ್ ಓವರ್ ಸ್ಪೆಶಲಿಸ್ಟ್ ಇಂಜುರಿ ಬಗ್ಗೆ ಬಿಗ್ ಅಪ್ಡೇಟ್ ನ್ಯೂಸ್ ಹೊರಬಿದ್ದಿದೆ. ಎನ್ಸಿಎ ರಿಹ್ಯಾಬ್ನಲ್ಲಿರೋ ಬುಮ್ರಾ ಬೌಲಿಂಗ್ ಪ್ರಾಕ್ಟೀಸ್ ಮಾಡ್ತಿದ್ದು, ಕೆಲ ಅಭ್ಯಾಸ ಪಂದ್ಯಗಳ ಬಳಿಕ ಇವರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ವರ್ಷದ ಬಳಿಕ ತಂಡಕ್ಕೆ ಮರಳಲು ಎದುರು ನೋಡ್ತಿದ್ದಾರೆ.
ರಾಹುಲ್-ಶ್ರೇಯಸ್ ಎಂಟ್ರಿಗೆ ಇನ್ನೊಂದೇ ಹೆಜ್ಜೆ ಬಾಕಿ..!
2023ರ ಐಪಿಎಲ್ ವೇಳೆ ತೊಡೆ ಇಂಜುರಿಗೆ ತುತ್ತಾಗಿದ್ದ ಕೆಎಲ್ ರಾಹುಲ್ ವೇಗವಾಗಿ ರಿಕವರಿ ಕಾಣ್ತಿದ್ದಾರೆ. ನೆಟ್ಸ್ನಲ್ಲಿ ದೈಹಿಕ ಚಟುವಟಿಕೆ ಜೊತೆ ಬ್ಯಾಟಿಂಗ್ ಆರಂಭಿಸಿದ್ದು, ಟೀಮ್ ಇಂಡಿಯಾಗೆ ಮರಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾಗಿ ಬಿಟ್ರೆ ಒನ್ಡೇ ವಿಶ್ವಕಪ್ ಡೋರ್ ಓಪನ್ ಆಗಲಿದೆ.
ಬೆನ್ನು ನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿದೆ. ಬಿಸಿಸಿಐ ಇವರ ಚೇತರಿಕೆಯಿಂದ ತೃಪ್ತಿಯಾಗಿದ್ದು, ಫಿಟ್ನೆಸ್ ಟೆಸ್ಟ್ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳೋದಾಗಿ ಹೇಳಿದೆ.
ಒನ್ಡೇ ವಿಶ್ವಕಪ್ ಸನಿಹದಲ್ಲಿ ಐವರು ಕೀ ಪ್ಲೇಯರ್ಗಳ ಇಂಜುರಿ ಬಗ್ಗೆ ಅಪ್ಡೇಟ್ ನೀಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಫಿಫ್ಟಿ ಓವರ್ ಮಹಾಬ್ಯಾಟಲ್ಗೆ ಎಲ್ಲರೂ ಫುಲ್ ಫಿಟ್ ಆಗಿ, ತಂಡಕ್ಕೆ ಮರುಳುವಂತಾಗಲಿ ಎಂದು ನಾವು ಆಶೀಸುತ್ತೇವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ