newsfirstkannada.com

ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಜಯ್​ ಶಾ.. ಏನಂದ್ರು ಗೊತ್ತಾ?

Share :

Published July 7, 2024 at 4:40pm

Update July 7, 2024 at 4:41pm

    ಬರೋಬ್ಬರಿ 17 ವರ್ಷಗಳ ಬಳಿಕ 2024 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ

    2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಟ್ರೋಫಿ ಗೆದ್ದು ಇತಿಹಾಸ..!

    ರೋಹಿತ್ ಶರ್ಮಾ​ ಕ್ಯಾಪ್ಟನ್ಸಿ ಬಗ್ಗೆ ಅಚ್ಚರಿ ಸ್ಟೇಟ್ಮೆಂಟ್​ ಕೊಟ್ಟ ಜಯ್​ ಶಾ

ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಫೈನಲ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ನಾಯಕತ್ವ ಮತ್ತು ಕ್ರಿಕೆಟ್​​ ದಿಗ್ಗಜ ವಿರಾಟ್​ ಬ್ಯಾಟಿಂಗ್​​​ನೊಂದಿಗೆ ಬುಮ್ರಾ, ಹಾರ್ದಿಕ್​​, ಅರ್ಷ್​ದೀಪ್​ ಸಿಂಗ್​​ ಬೌಲಿಂಗ್​​​ ಸಹಾಯದಿಂದ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ತನ್ನದಾಗಿಸಿಕೊಂಡಿದೆ. ಇದರಲ್ಲಿ ಡೇವಿಡ್​ ಮಿಲ್ಲರ್​​​ ಕ್ಯಾಚ್​​​ ಅದ್ಭುತವಾಗಿ ಹಿಡಿದ ಸೂರ್ಯಕುಮಾರ್​ ಯಾದವ್​ ಪಾಲು ಕೂಡ ಇದೆ.

ಇತ್ತೀಚೆಗಷ್ಟೇ ವೆಸ್ಟ್​ ಇಂಡೀಸ್​ನಿಂದ ತವರಿಗೆ ಬಂದಿಳಿದ ಟೀಮ್​ ಇಂಡಿಯಾ ತಂಡದ ಆಟಗಾರರು ಮುಂಬೈನ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವ ಆಚರಿಸಿದ್ರು. ಈ ಬಗ್ಗೆ ಮೊದಲ ಬಾರಿಗೆ ಮಾತಾಡಿರೋ ಬಿಸಿಸಿಐ ಕಾರ್ಯದರ್ಶಿ, ವಿಶ್ವಕಪ್​ ಗೆಲ್ಲಿಸಿದ್ದಕ್ಕೆ ಟೀಮ್​ ಇಂಡಿಯಾ ಆಟಗಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ವಿಶ್ವಕಪ್​ ಗೆಲುವನ್ನು ನಾನು ಟೀಮ್​ ಇಂಡಿಯಾದ ಕೋಚ್​​ ದ್ರಾವಿಡ್​​, ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ ಅವರಿಗೆ ಅರ್ಪಿಸುತ್ತೇನೆ. ಟೀಮ್​ ಇಂಡಿಯಾ ಗೆಲುವಿಗೆ ಕಾರಣರಾದ ಸೂರ್ಯ, ಬುಮ್ರಾ, ಹಾರ್ದಿಕ್​​, ಅರ್ಷ್​ದೀಪ್​ ಅವರಿಗೂ ಅಭಿನಂದನೆಗಳು. ನನಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರ ನೇತೃತ್ವದಲ್ಲಿ ಟೀಮ್​ ಇಂಡಿಯಾ ಮುಂದೆ ಬರೋ ಚಾಂಪಿಯನ್ಸ್​ ಟ್ರೋಫಿ ಮತ್ತು ವಿಶ್ವ ಟೆಸ್ಟ್​​ ಚಾಂಪಿಯನ್​ ಟ್ರೋಫಿ ಕೂಡ ಗೆಲ್ಲಲಿದ್ದೇವೆ ಅನ್ನೋ ಭರವಸೆ ಇದೆ ಎಂದರು ಜಯ್​ ಶಾ.

ಇದನ್ನೂ ಓದಿ: ರೋಹಿತ್ ಟೀಮ್​ ಭಾರತಕ್ಕೆ ಬರಲು ಕೋಟಿ ಕೋಟಿ ದುಡ್ಡು ಖರ್ಚು.. ಒಬ್ಬೊಬ್ಬ ಪ್ಲೇಯರ್​​ಗೆ ಲಕ್ಷಾಂತರ ರೂ ವೆಚ್ಚ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಜಯ್​ ಶಾ.. ಏನಂದ್ರು ಗೊತ್ತಾ?

https://newsfirstlive.com/wp-content/uploads/2024/07/Rohit_Jay-Sha.jpg

Load More