ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂದೆ ದೊಡ್ಡ ಸವಾಲು
ವರ್ಲ್ಡ್ಕಪ್ ಹೇಗೆ ಗೆಲ್ಲಬೇಕು ಎನ್ನುವುದೇ ಇಂಡಿಯಾದ ಪ್ಲಾನ್
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಪ್ರೋಚ್ ಬದಲಾಗಬೇಕು
ಅಗರ್ಕರ್ ಚೀಫ್ ಸೆಲೆಕ್ಟರ್ ಹುದ್ದೆಗೆ ಏರಿದ್ದರಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಲ ಹೆಚ್ಚಿದೆ. ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್, ಚೀಫ್ ಸೆಲೆಕ್ಟರ್ ಅಗರ್ಕರ್. ಮೂವರ ಕಾಂಬಿನೇಷನ್ನಲ್ಲಿ ವಿಶ್ವಕಪ್ ನಮ್ದೇ ಅನ್ನೋದು ಅಭಿಮಾನಿಗಳ ಮನದಾಳವಾಗಿದೆ. ಆದ್ರೆ, ಫ್ಯಾನ್ಸ್ ಕನಸು ನನಸಾಗಬೇಕಂದ್ರೆ ತ್ರಿಮೂರ್ತಿಗಳು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.
ಇಂಡೋ- ಇಂಡೀಸ್ ಸರಣಿಗೆ ಕೌಂಟ್ಡೌನ್ ಆರಂಭವಾಗಿದ್ದರೂ ಭಾರತೀಯ ಕ್ರಿಕೆಟ್ ಅಲ್ಲಿ ವಿಶ್ವಕಪ್ನದ್ದೆ ಸದ್ದು. ತವರಿನಲ್ಲಿ ನಡೆಯೋ ಪ್ರತಿಷ್ಟಿತ ಟೂರ್ನಿಯಲ್ಲಿ ಚಾಂಪಿಯನ್ ಆಗಬೇಕು ಅನ್ನೋದೊಂದೆ ಸದ್ಯ ಅಭಿಮಾನಿಗಳ ಮುಂದಿರೋ ದೊಡ್ಡ ಕನಸು. ಚೀಫ್ ಸಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ಬಂದ ಮೇಲಂತೂ ಅಭಿಮಾನಿಗಳ ಕನಸು ಮತ್ತಷ್ಟು ಚಿಗುರೊಡೆದಿದೆ.
ರೋಹಿತ್, ದ್ರಾವಿಡ್, ಅಗರ್ಕರ್, ದಿ ಬೆಸ್ಟ್ ಕಾಂಬಿನೇಷನ್.!
ರೋಹಿತ್ ಶರ್ಮಾ- ವೈಟ್ ಬಾಲ್ ಕ್ರಿಕೆಟ್ ಅನ್ನು ಸಕ್ಸಸ್ ಫುಲ್ ಕ್ಯಾಪ್ಟನ್. ರಾಹುಲ್ ದ್ರಾವಿಡ್- ಮೈಂಡ್ & ಗೇಮ್ ರೀಡ್ ಮಾಡೋದ್ರಲ್ಲಿ ಪಂಟರ್. ಅಜಿತ್ ಅಗರ್ಕರ್- ಸ್ಮಾರ್ಟ್ ಆಗಿ ಬಿಗ್ ಡೀಲ್ ಮಾಡೋ ಮಾಸ್ಟರ್. ಈ ಮೂರು ಮಾಸ್ಟರ್ಮೈಂಡ್ಗಳು ಈಗ ಒಂದಾಗಿವೆ. ಇವರೆಲ್ಲರದ್ದೂ ಸದ್ಯ ಏಕದಿನ ವಿಶ್ವಕಪ್ ಗೆಲ್ಲಬೇಕು ಅನ್ನೋದು ಒಂದೆ ಗುರಿ. ಆ ಗುರಿಯನ್ನ ಮುಟ್ಟಬೇಕಂದ್ರೆ ಈಗಿನಿಂದ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
ಬದಲಾಗಬೇಕಿದೆ ಕ್ಯಾಪ್ಟನ್ ರೋಹಿತ್ ಅಪ್ರೋಚ್.!
ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ದಿನದಿಂದ ರೋಹಿತ್ ಶರ್ಮಾ ಅಗ್ರೆಸ್ಸಿವ್ ಅಪ್ರೋಚ್ನ್ನ ಮೊರೆ ಹೋಗಿದ್ದಾರೆ. ಆದ್ರೆ, ಈ ಅಪ್ರೋಚ್ಗೆ ಬಿಗ್ ಟೂರ್ನಮೆಂಟ್ಗಳಲ್ಲಿ ಸಕ್ಸಸ್ ಸಿಕ್ಕಿಲ್ಲ. ಏಷ್ಯಾಕಪ್, ಟಿ20 ವಿಶ್ವಕಪ್, ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಎಲ್ಲದರಲ್ಲೂ ಮುಗ್ಗರಿಸಿದ್ದಾಗಿದೆ. ಹೀಗಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಪ್ರೋಚ್ ಬದಲಾಗಬೇಕಿದೆ. ಮ್ಯಾಚ್ ಸಿಚ್ಯುವೇಶನ್, ಕಂಡೀಷನ್ಗೆ ಅನುಗುಣವಾಗಿ ಅಗ್ರೆಸ್ಸಿವ್ ಜೊತೆಗೆ ಸೇಫ್ ಗೇಮ್ಗು ಮುಂದಾಗಬೇಕಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೂ ಎಚ್ಚರಿಕೆಯ ನಡೆ ಅನುಸರಿಸಬೇಕಿದೆ.
ನೋ ಕಾಂಪ್ರಮೈಸ್ ಅನ್ನಬೇಕು ಕೋಚ್ ದ್ರಾವಿಡ್.!
ನಾಯಕನ ಜೊತೆ ಕೋಚ್ ರಾಹುಲ್ ದ್ರಾವಿಡ್ ಕೂಡ ಬದಲಾಗಬೇಕಿದೆ. ಈಗಿನಿಂದಲೇ ಬ್ಲೂಪ್ರಿಂಟ್ ರೆಡಿ ಮಾಡಿಕೊಳ್ಳಬೇಕಿರೋ ದ್ರಾವಿಡ್, ಯಾವುದರಲ್ಲೂ ಕಾಂಪ್ರಮೈಸ್ ಆಗ್ಲೇಬಾರದು. ಕ್ಯಾಪ್ಟನ್ಗೆ ಅಗತ್ಯ ಇನ್ಫುಟ್ ನೀಡ್ತಾ, ಯಾವುದೇ ಡಿಸಿಶನ್ ವಿಚಾರದಲ್ಲಿ ಯಡವಟ್ಟಾಗಂದಂತೆ ಎಚ್ಚರವಹಿಸಬೇಕಿದೆ. ಮುಂದಿರೋ ಎಲ್ಲ ಸರಣಿಗಳಲ್ಲೂ ಆಟಗಾರರನ್ನ ಮಾನಿಟರ್ ಮಾಡೋದ್ರ ಜೊತೆಗೆ ಮ್ಯಾಚ್ ಬೈ ಮ್ಯಾಚ್ ಗೆಲುವಿನ ಕಡೆಗೆ ಗಮನಹರಿಸಬೇಕಿದೆ.
ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಹಾಗೂ ಬೌಲಿಂಗ್ ಕೋಚ್ಗಳ ಕಾರ್ಯ ವೈಖರಿಯ ಮೇಲೂ ದ್ರಾವಿಡ್ ಹದ್ದಿನ ಕಣ್ಣಿಡಬೇಕಿದೆ. ಕ್ಯಾಚ್ ಡ್ರಾಪ್ ಟೀಮ್ ಇಂಡಿಯಾವನ್ನ ಎಡಬಿಡದೇ ಕಾಡ್ತಿದ್ರೆ, ಪ್ರಮುಖ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗ ದಿಢೀರ್ ವೈಫಲ್ಯ ಅನುಭವಿಸ್ತಿದೆ. ಪ್ರೆಶರ್ ಟೈಮ್ನಲ್ಲಿ ಬೌಲರ್ಸ್ ರನ್ ಲೀಕ್ ಮಾಡ್ತಿದ್ದಾರೆ. ಸಪೋರ್ಟ್ ಸ್ಟಾಪ್ಗಳು ಈ ವೀಕ್ನೆಸ್ಗಳಿಂದ ತಂಡ ಹೊರಬರುವಂತೆ ಪ್ಲಾನ್ ರೂಪಿಸಬೇಕಿದೆ.
ಅಗರ್ಕರ್ ಮೇಲಿದೆ ಮಹತ್ವದ ಜವಾಬ್ದಾರಿ.!
ಚೀಫ್ ಸಲೆಕ್ಟರ್ ಅಜಿತ್ ಅಗರ್ಕರ್ ಮುಂದೆ ತುಂಬಾ ದೊಡ್ಡ ಸವಾಲಿದೆ. ಮಹತ್ವದ ಟೂರ್ನಿಗೆ 3 ತಿಂಗಳು ಮಾತ್ರ ಬಾಕಿ ಇರೋದ್ರಿಂದ, ಅಟ್ಲೀಸ್ಟ್ 20 ಆಟಗಾರರ ಕೋರ್ ಟೀಮ್ ಸೆಲೆಕ್ಟ್ ಮಾಡಬೇಕಿದೆ. ಇಂಜುರಿ ಮ್ಯಾನೇಜ್ಮೆಂಟ್ ವಿಚಾರದಲ್ಲಿ ಎಚ್ಚರ ವಹಿಸಬೇಕಾಗಿದ್ದು, ಆಟಗಾರರ ವರ್ಕ್ ಲೋಡ್ ಮ್ಯಾನೇಜ್ ಮಾಡಬೇಕಿದೆ. ಒಬ್ಬ ಆಟಗಾರನಿಗೆ ಇಂಜುರಿಯಾದ್ರೆ, ಆತನನ್ನ ರಿಪ್ಲೆಸ್ ಮಾಡಬಲ್ಲ ಸಮರ್ಥ ಆಟಗಾರ ಕೂಡ ಅದೇ ಕೋರ್ ಗ್ರೂಪ್ನಲ್ಲಿರಬೇಕು ಅಂತಹ ಆಟಗಾರರ ತಂಡವನ್ನ ಅಗರ್ಕರ್ ಆಯ್ಕೆ ಮಾಡಬೇಕಿದೆ.
ಈಗಾಗಲೇ ಬಿಗ್ ಇವೆಂಟ್ಗಳಲ್ಲಿ ಕ್ಯಾಪ್ಟನ್ ರೋಹಿತ್, ಕೋಚ್ ದ್ರಾವಿಡ್ ಫೇಲ್ ಆಗಿದ್ದಾರೆ. ಈ ಹಿಂದಿನ ಸೆಲೆಕ್ಟರ್ ಮಾಡಿದ ಪ್ಲಾನ್ಗಳೂ ಫ್ಲಾಪ್ ಆಗಿವೆ. ಹೀಗಾಗಿ ಹೊಸ ಗೇಮ್ ಪ್ಲಾನ್ ರೂಪಿಸಿ ವಿಶ್ವಕಪ್ಗೆ ಸಿದ್ಧತೆ ಆರಂಭವಾಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ