newsfirstkannada.com

IPL2023: ಪ್ರತಿ ಡಾಟ್​ ಬಾಲ್​ಗೆ 500 ಗಿಡಗಳನ್ನು ನೆಡಲು ಮುಂದಾದ ಬಿಸಿಸಿಐ! ಇದು ಪರಿಸರ ಕಾಳಜಿ ಅಂದ್ರೆ

Share :

24-05-2023

    ಐಪಿಎಲ್​ ಪ್ಲೇಆಫ್​ ಪಂದ್ಯದಲ್ಲಿ ಪರಿಸರ ಕಾಳಜಿ

    ಪ್ರತಿ ಡಾಲ್​ ಬಾಲ್​ಗೆ 500 ಗಿಡಗಳು

    ಬಿಸಿಸಿಐ ಹೊಸ ಚಿಂತನೆಗೆ ಭಾರೀ ಮೆಚ್ಚುಗೆ

ಕಾಡು ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ ಊರಿಗೊಂದು ಕಾಡು ಹೀಗೆ ನಾನಾ ತರಹದಲ್ಲಿ ಪರಿಸರ ಕಾಳಜಿ ಮೂಡಿಸಿದರು ಅದನ್ನು ಕಾರ್ಯಗತಗೊಳಿಸುವವರು ಕೆಲವೇ ಕೆಲವು ಮಂದಿ. ಆದರೀಗ ಬಿಸಿಸಿಐ ಪರಿಸರ ಕಾಳಜಿ ಕುರಿತಾಗಿ ಸೂಕ್ತ ಕ್ರಮವೊಂದನ್ನು ಅಳವಡಿಸಿಕೊಂಡಿದೆ. ಅದೇನು ಗೊತ್ತಾ?. ಬೌಲರ್ಸ್​ ಎಸೆಯುವ ಪ್ರತಿ ಡಾಟ್​ ಬಾಲ್​ಗೆ 500 ಗಿಡಗಳನ್ನು ನೆಡಲು ಮುಂದಾಗಿದೆ.

ಹೌದು. ಕ್ರಿಕೆಟ್​ ನಿಯಂತ್ರಣ ಮಂಡಳಿ ಪರಿಸರ ಕಾಳಜಿ ಕುರಿತಾಗಿ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಐಪಿಎಲ್​ ಪ್ಲೇಆಫ್​ ಪಂದ್ಯದಲ್ಲಿ ಬೌಲರ್ಸ್​​ ಎಸೆಯುವ ಪ್ರತಿ ಡಾಲ್​ ಬಾಲ್​ಗೆ 500 ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಯತ್ತ ಚಿತ್ತಹರಿಸಿದೆ.

ಬಿಸಿಸಿಐ ಕಡೆಯಿಂದ ಪರಿಸರ ಕಾಳಜಿ
ಅಂದಹಾಗೆಯೇ, ನಿನ್ನೆ ಚೆಪಾಕ್​ನಲ್ಲಿ ನಡೆದ ಗುಜರಾತ್​ ಟೈಟನ್ಸ್​ ಮತ್ತು ಚೆನ್ನೈ ಸೂಪರ್​​ಕಿಂಗ್ಸ್​ ಪಂದ್ಯದಲ್ಲಿ ಬೌಲರ್​ಗಳು ಎಸೆದ ಡಾಟ್​ ಬಾಲ್​​ಗಳನ್ನು ವಿಶೇಷ ಗ್ರಾಫಿಕ್ಸ್​ ಮೂಲಕ ತೋರಿಸಿದೆ. ಬೌಲರ್​ ಎಸೆದ ಡಾಟ್​ ಬಾಲ್​​ ಅನ್ನು ಮರದ ಚಿತ್ರದ ಮೂಲಕ ಗ್ರಾಫಿಕ್ಸ್​ನಲ್ಲಿ ತೋರಿಸಿದೆ.

ಪ್ರತಿ ಡಾಲ್​ ಬಾಲ್​ಗೆ 500 ಗಿಡಗಳು
2023ರ ಐಪಿಎಲ್​ನ ಪ್ಲೇಆಫ್​ನಲ್ಲಿ ಎಸೆಯುವ ಪ್ರತಿ ಡಾಟ್​​ ಬಾಲ್​ಗೆ 500 ಗಿಡಗಳನ್ನು ನೆಡುವುದದಾಗಿ ಬಿಸಿಸಿಐ ಹೇಳಿದೆ. ಅಂತೆಯೇ ನಿನ್ನೆ ಮೊಹಮ್ಮದ್ ಶಮಿ ಎಸೆದ ಡಾಲ್​ ಬಾಲ್​ ಅನ್ನು ಗ್ರಾಫಿಕ್ಸ್​ನಲ್ಲಿ ಮರದ ಚಿತ್ರದ ಮೂಲಕ ತೋರಿಸಿದೆ. ಹಸಿರು ಬಣ್ಣದ ಮರದ ಚಿತ್ರವನ್ನು ಗ್ರಾಫಿಕ್ಸ್​ನಲ್ಲಿ ಬಿತ್ತರಿಸಿದೆ.

ಸದ್ಯ ಬಿಸಿಸಿಐಯ ಹೊಸ ಚಿಂತನೆ ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಅದರಲ್ಲೂ ಪರಿಸರ ಪ್ರೇಮಿಗಳು ಈ ಬಿಸಿಸಿಐ ಈ ನಡುತೆಯನ್ನು ಶ್ಲಾಘಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL2023: ಪ್ರತಿ ಡಾಟ್​ ಬಾಲ್​ಗೆ 500 ಗಿಡಗಳನ್ನು ನೆಡಲು ಮುಂದಾದ ಬಿಸಿಸಿಐ! ಇದು ಪರಿಸರ ಕಾಳಜಿ ಅಂದ್ರೆ

https://newsfirstlive.com/wp-content/uploads/2023/05/Green-Tree-IPL.jpg

Load More