ಖಡಕ್ ಆಫೀಸರ್ಗಾಗಿ ಬಿಸಿಸಿಐ ಹುಡುಕಾಟ, ಸೆಹ್ವಾಗ್ ಮೇಲೆ ಕಣ್ಣು
ಭಾರತ ತಂಡಕ್ಕೆ ಸೆಹ್ವಾಗ್ರನ್ನು ಕರೆತರಬೇಕೆಂದ್ರೆ ಸಂಬಳದ್ದೇ ಸಮಸ್ಯೆ
ಕೋಟಿ, ಕೋಟಿ ದುಡಿಮೆ ಬಿಟ್ಟು ಭಾರತ ತಂಡದ ಯಶಸ್ಸಿಗೆ ಬರ್ತಾರಾ?
ಬಿಸಿಸಿಐ ಬಿಗ್ ಬಾಸ್ಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಭವಿಷ್ಯದ ಟೀಮ್ ಇಂಡಿಯಾ ಕಟ್ಟಲು ಒಬ್ಬ ಖಡಕ್ ಆಫೀಸರ್ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಹೀಗೆ ಹುಡುಕಾಟ ನಡೆಸ್ತಿರುವಾಗ ಮಾಜಿ ಕ್ರಿಕೆಟಿಗ, ನಜಬ್ಗಢ್ ಕಾ ನವಾಬ್ ವೀರೇಂದ್ರ ಸೆಹ್ವಾಗ್ ಬಿಸಿಸಿಐ ಕಣ್ಣಿಗೆ ಬಿದ್ದಿದ್ದಾರೆ. ಖಡಕ್ ಆಫೀಸರ್ಗಾಗಿ ಬಿಸಿಸಿಐ ಯಾಕೆ ಹುಡುಕಾಡ್ತಿದೆ ಗೊತ್ತಾ?.
ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿಯ ಬರ ಎದುರಿಸ್ತಾ ಇರೋ ಟೀಮ್ ಇಂಡಿಯಾಗೆ ಇದು ಪ್ರತಿಷ್ಟೆಯ ಕಣ. ತವರಿನಂಗಳದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲಲೇಬೇಕು. ಈಗಾಗಲೇ ಬಿಗ್ ಇವೆಂಟ್ಗಳಲ್ಲಿ ಮುಗ್ಗರಿಸಿರುವುದು ಅಭಿಮಾನಿಗಳ ವಲಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ತವರಿನಲ್ಲು ಮುಖಭಂಗ ಅನುಭವಿಸಿದ್ರೆ, ಮುಂದೆ ಏನಾಗುತ್ತೋ ಗೊತ್ತಿಲ್ಲ.
ಕೊನೆಗೂ ಎಚ್ಚೆತ್ತುಕೊಂಡ ಬಿಸಿಸಿಐ ಬಾಸ್ಗಳು.!
ಸೀನಿಯರ್ ಸೆಲೆಕ್ಷನ್ ಕಮಿಟಿಯ ಚೇರ್ಮನ್ ಆಗಿದ್ದ ಚೇತನ್ ಶರ್ಮಾ ಸ್ಟಿಂಗ್ ಆಪರೇಷನ್ ಸಿಕ್ಕಿಬಿದ್ದು ರಾಜೀನಾಮೆ ನೀಡಿ 4 ತಿಂಗಳು ಕಳೆದಿವೆ. ಆ ಸ್ಥಾನಕ್ಕೆ ಇನ್ನೊರ್ವ ಸೂಕ್ತ ಅಭ್ಯರ್ಥಿಯನ್ನ ಆಯ್ಕೆ ಮಾಡದೆ ಬಿಸಿಸಿಐ ಬಾಸ್ಗಳು ಇಷ್ಟು ದಿನ ದಿವ್ಯ ನಿರ್ಲ್ಯಕ್ಷ ವಹಿಸಿದ್ರು. ಆದ್ರೆ ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಸೋಲು ಬಡಿದೆಬ್ಬಿಸಿದೆ. ಕೊನೆಗೂ ಎಚ್ಚೆತ್ತುಕೊಂಡಿರುವ ಬಿಸಿಸಿಐ ಬಾಸ್ಗಳು ನೂತನ ಸೆಲೆಕ್ಟರ್ಗೆ ಹುಡುಕಾಟ ನಡೆಸ್ತಿದ್ದಾರೆ.
ಖಡಕ್ ಸೆಲೆಕ್ಟರ್ಗಾಗಿ ಶುರುವಾಯ್ತು ಹುಡುಕಾಟ.!
ಇಷ್ಟು ದಿನ ಮಾಡಿದ ಪ್ರಮಾದಗಳಿಂದ ಪಾಠ ಕಲಿತಿರುವ ಬಿಸಿಸಿಐ ಬಾಸ್ಗಳು ಈ ಬಾರಿ ಒಬ್ಬ ಖಡಕ್ ಸೆಲೆಕ್ಟರ್ ಹುಡಕಾಟ ನಡೆಸ್ತಿದ್ದಾರೆ. ಕ್ಯಾಪ್ಟನ್- ಕೋಚ್ ಯಾರ ಲಾಬಿಗೂ ಜಗ್ಗದೆ, ಸ್ಟಾರ್ಗಿರಿಗೆ ಮಣೆ ಹಾಕದೆ ಇರೋ ಖಡಕ್ ಆಫೀಸರ್ ಬಿಸಿಸಿಐಗೆ ಈಗ ಬೇಕಾಗಿದೆ. ಟ್ಯಾಲೆಂಟ್ ಇದ್ರೆ ಮಾತ್ರ ಅವಕಾಶ ಅನ್ನೋ ಆಯ್ಕೆಗಾರನ ಹುಡುಕಾಟ ಬಿಸಿಸಿಐ ವಲಯದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಟೀಮ್ ಇಂಡಿಯಾವನ್ನ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿದ ಅನುಭವಿ ಆಟಗಾರನನ್ನೇ ಕರೆ ತರಬೇಕು ಎಂದು ಬಿಸಿಸಿಐ ಸಿದ್ಧವಾಗಿದೆ.
ವೀರೇಂದ್ರ ಸೆಹ್ವಾಗ್ ಮೇಲೆ ಬಾಸ್ಗಳ ಕಣ್ಣು.!
ಸೆಲೆಕ್ಷನ್ ಕಮಿಟಿಯಲ್ಲಿ ಸದ್ಯ ಕಾಲಿ ಇರೋದು ಒಂದೇ ಸ್ಥಾನ. ಅದು ನಾರ್ಥ್ ಝೋನ್ಗೆ ಮೀಸಲು. ಅಂದ್ರೆ, ಬಿಸಿಸಿಐ ಸಂವಿಧಾನದ ಪ್ರಕಾರ ಆ ಸ್ಥಾನಕ್ಕೆ ಉತ್ತರವಲಯದ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕಿದೆ. ಸದ್ಯ ಉತ್ತರ ವಲಯದಲ್ಲಿ ಬಿಸಿಸಿಐ ಹುಡುಕ್ತಾ ಇರೋವಂತ ಖಡಕ್ ಕ್ವಾಲಿಟಿ ಹೊಂದಿರೋ ಏಕೈಕ ವ್ಯಕ್ತಿ ಅಂದ್ರೆ ಅದು ವೀರೇಂದ್ರ ಸೆಹ್ವಾಗ್. ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನ ಆಡಿರೋ ಅನುಭವ ಹೊಂದಿರೋ ಸೆಹ್ವಾಗ್, ಯಾರ ಲಾಬಿಗೂ ಮಣಿಯದೇ ನಿರ್ಧಾರ ಕೈಗೊಳ್ಳೋದ್ರಲ್ಲೂ ಎತ್ತಿದ ಕೈ.
ಸೆಹ್ವಾಗ್ ಆಯ್ಕೆಗೆ ಸಂಬಳದ್ದೇ ದೊಡ್ಡ ಸಮಸ್ಯೆ.!
ಟೀಮ್ ಇಂಡಿಯಾದ ಸೆಲೆಕ್ಷನ್ ಕಮಿಟಿ ಚೇರ್ಮನ್ ಹುದ್ದೆಗೆ ಸೆಹ್ವಾಗ್ ಬೆಸ್ಟ್ ಚಾಯ್ಸ್. ಆದ್ರೆ, ಇದಕ್ಕೆ ಸೆಹ್ವಾಗ್ ಒಪ್ಪಿವರೇ ಅನ್ನೋದು ದೊಡ್ಡ ಪ್ರಶ್ನೆ. ಸದ್ಯ ಸೆಲೆಕ್ಷನ್ ಕಮಿಟಿ ಚೇರ್ಮನ್ ವಾರ್ಷಿಕ ಸಂಬಳ 1 ಕೋಟಿ. ಈಗಾಗಲೇ ಕಾಂಮೆಂಟರಿ, ಎಂಡ್ರೋಸ್ಮೆಂಟ್ಗಳಿಂದ ಸೆಹ್ವಾಗ್ ಕೋಟಿ ಕೋಟಿ ಹಣ ದುಡಿಯುತ್ತಿದ್ದಾರೆ. ಸೆಲೆಕ್ಷನ್ ಕಮಿಟಿ ಚೇರ್ಮನ್ ಆದ್ರೆ, ಕಾಮೆಂಟರಿ, ಎಂಡ್ರೋಸ್ಮೆಂಟ್ಗಳನ್ನ ನಿಲ್ಲಿಸಬೇಕು. ಇದ್ರಿಂದ ಬೇರೆಲ್ಲ ಆದಾಯ ನಿಲ್ಲಲಿದೆ. ಎಲ್ಲವನ್ನೂ ಬಿಟ್ಟು ಕೇವಲ 1 ಕೋಟಿ ಒಪ್ಪಂದಕ್ಕೆ ಸೆಹ್ವಾಗ್ ಸೈನ್ ಮಾಡೋದು ಅನುಮಾನ.
ಕೋಚ್ ಹುದ್ದೆ ಕೇಳಿದಾಗ ತಿರಸ್ಕಾರ, ಸೆಹ್ವಾಗ್ ಈಗ ಒಪ್ತಾರಾ?.
ಈ ಹಿಂದೆ ವೀರೂ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಆಗ ಸೆಹ್ವಾಗ್ಗೆ ಮಣೆ ಹಾಕಿರಲಿಲ್ಲ. ಆಗ ತಿರಸ್ಕಾರಕ್ಕೆ ಒಳಗಾಗಿದ್ದ ಸೆಹ್ವಾಗ್, ಈಗ ತಾವಾಗೇ ಸೆಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಸುಳ್ಳು. ಒಂದು ವೇಳೆ ಬಿಸಿಸಿಐ ತಾನಾಗೇ ಅಪ್ರೋಚ್ ಮಾಡಿದ್ರೂ, ಕಡಿಮೆ ಸಂಬಳದ ಕಾರಣ ನೀಡಿ ಸೆಹ್ವಾಗ್, ಆಫರ್ ರಿಜೆಕ್ಟ್ ಮಾಡಬಹುದು.
ದ್ರಾವಿಡ್ಗೆ ಮಾಡಿದಂತೆ ಮಾಡುತ್ತಾ ಬಿಸಿಸಿಐ?
ಟೀಮ್ ಇಂಡಿಯಾದ ಹಿಂದಿನ ಕೋಚ್ ರವಿ ಶಾಸ್ತ್ರಿ ವಾರ್ಷಿಕ ವೇತನ 7 ಕೋಟಿ ರೂಪಾಯಿ ಆಗಿತ್ತು. ಶಾಸ್ತ್ರಿ ಅವಧಿ ಅಂತ್ಯದ ಬಳಿಕ ರಾಹುಲ್ ದ್ರಾವಿಡ್ ಕರೆತರಲು ಬಿಸಿಸಿಐ ಸರ್ಕಸ್ ನಡೆಸ್ತು. ₹7 ಕೋಟಿ ಇದ್ದ ಹೆಡ್ ಕೋಚ್ ಸಂಬಳವನ್ನ ₹10 ಕೋಟಿಗೆ ಹೆಚ್ಚಳ ಮಾಡಿ, ದ್ರಾವಿಡ್ರನ್ನ ಕೋಚ್ ಹುದ್ದೆಗೆ ತಂದು ಕೂರಿಸಿತ್ತು. ಇದೀಗ ಸೆಹ್ವಾಗ್ರನ್ನ ಕರೆತರಲೂ ಸೆಲೆಕ್ಟರ್ಸ್ ಸಂಬಳದಲ್ಲಿ ಏರಿಕೆ ಮಾಡಿದ್ರೆ ಅಚ್ಚರಿಪಡಬೇಕಿಲ್ಲ.
ಟೀಮ್ ಇಂಡಿಯಾ ಸದ್ಯ ಬದಲಾವಣೆ ಹಾದಿಯಲ್ಲಿದೆ. ಭವಿಷ್ಯದ ತಂಡ ರೂಪಿಸಬೇಕಿದೆ. ಸೀನಿಯರ್ಗಳ ಭವಿಷ್ಯದ ಜೊತೆಗೆ ಪ್ಯೂಚರ್ ಕ್ಯಾಪ್ಟನ್ ಆಯ್ಕೆಯಂತ ಬಿಗ್ ಡಿಸಿಷನ್ ತೆಗೆದುಕೊಳ್ಳಬೇಕಿದೆ. ಈ ಎಲ್ಲ ಖಡಕ್ ನಿರ್ಧಾರಗಳನ್ನ ತೆಗೆದುಕೊಳ್ಳೋಕೆ ಒಬ್ಬ ಡೆರ್ ಡೆವಿಲ್ ಹಾಗೂ ಪ್ರಭಾವಿ ಸೆಲೆಕ್ಟರ್ ಬೇಕೆ ಬೇಕು. ಸೆಹ್ವಾಗ್ ಒಪ್ಪದೆ ಇದ್ದರೇ, ಬೇರೋಬ್ಬ ಖಡಕ್ ಆಯ್ಕೆಗಾರರನ್ನ ಬಿಸಿಸಿಐ ಹುಡುಕಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ