newsfirstkannada.com

ವಿರಾಟ್​ ಕೊಹ್ಲಿಗೆ ಪಟ್ಟ ಕಟ್ಟಲು ಇಕ್ಕಟ್ಟಿಗೆ ಸಿಲುಕಿದ ಬಿಸಿಸಿಐ; ಟೆಸ್ಟ್​ ಕ್ಯಾಪ್ಟನ್ಸಿ ಕಳೆದುಕೊಳ್ತಾರಾ ರೋಹಿತ್?

Share :

17-06-2023

    ವಿರಾಟ್​​ ಕೊಹ್ಲಿಗೆ ಟೆಸ್ಟ್​ ಅಧಿಪತ್ಯ ಕಟ್ಟಲು ಬಿಸಿಸಿಐ ಹೊರಟಿದೆಯಾ?

    ಇಕ್ಕಟ್ಟಿಗೆ ಸಿಲುಕಿದ ಬಿಸಿಸಿಐ, ಅಗ್ರೆಸ್ಸಿವ್​ ನಾಯಕನಿ​ಗಾಗಿ ಹುಡುಕಾಟ

    ಬಿಸಿಸಿಐ ನಿರ್ಧಾರ ಕಿಂಗ್​ ಕೊಹ್ಲಿ ಒಪ್ಪಿ ತಂಡದ ಸಾರಥ್ಯ ವಹಿಸ್ತಾರಾ?

ಟೀಮ್ ಇಂಡಿಯಾದ ಮುಂದಿನ ಟೆಸ್ಟ್​ ನಾಯಕ ಯಾರು?. ಸದ್ಯ ವಿಶ್ವ ಕ್ರಿಕೆಟ್​ ಲೋಕದಲ್ಲಿ ಚರ್ಚೆಯಾಗ್ತಿರೋ ಟಾಪಿಕ್. ಇಲ್ಲ ರೋಹಿತ್ ಶರ್ಮಾನೇ ಮುಂದುವರಿಯುತ್ತಾರಾ. ಖಂಡಿತ ಉತ್ತರ ಇಲ್ಲದ ಪ್ರಶ್ನೆ. ಆದ್ರೆ, ಈ ನಡುವೆ ಮತ್ತೆ ವಿರಾಟ್​​ ಕೊಹ್ಲಿಗೆ ಟೆಸ್ಟ್​ ಅಧಿಪತ್ಯ ಕಟ್ಟೋಕೆ ಬಿಸಿಸಿಐ ಹೊರಟಿದ್ಯಾ ಎಂಬ ಮಾತು ಕೇಳಿ ಬರುತ್ತಿದೆ.

ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್​​ರ ಸ್ಟ್ರಾಟರ್ಜಿ, ಗೇಮ್​ಪ್ಲಾನ್​ಗಳ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲ, ಸ್ವತಃ ಬಿಸಿಸಿಐ ಹಿಟ್​ಮ್ಯಾನ್​​ರನ್ನ ಟೆಸ್ಟ್​ ಕ್ಯಾಪ್ಟನ್ಸಿಯಿಂದ ಕಳೆಗಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಹೀಗಾಗಿ ಚೀಫ್ ಸೆಲೆಕ್ಟರ್​ ಶಿವ ಸುಂದರ್ ದಾಸ್ ಕಮಿಟಿ, ವೆಸ್ಟ್ ಇಂಡೀಸ್ ಪ್ರವಾಸ ಬಳಿಕ ನ್ಯೂ ಕ್ಯಾಪ್ಟನ್ ಹೆಸರು ಘೋಷಿಸೋ ಲೆಕ್ಕಚಾರದಲ್ಲಿದೆ.

WTC ಫೈನಲ್ ಸೋಲಿನ ಬಳಿಕ ರೋಹಿತ್, ಕ್ಯಾಪ್ಟನ್ಸಿ ಬಗ್ಗೆ ತೀವ್ರ ಅಸಮಾಧಾನವಿದೆ. ಬಿಗ್​ಬಾಸ್​ಗಳು ಹೊಸ ನಾಯಕನ ಹುಡುಕಾಟಕ್ಕೆ ಕೈಹಾಕಿದ್ದಾರೆ. ಅದರಲ್ಲೂ ಆಕ್ರಮಣಕಾರಿ ಮನೋಭಾವ, ಹೋರಾಟದ ಕಿಚ್ಚು ಮಾಯವಾಗಿರೋದನ್ನೇ ಮಾನದಂಡ ಆಗಿರಿಸಿಕೊಂಡಿರೋ BCCI, ಅಗ್ರೆಸ್ಸಿವ್ ಅಟ್ಯೂಟ್ಯೂಡ್​ ಹೊಂದಿರೋ ಆಟಗಾರನಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟೋ ಚಿಂತನೆಯಲ್ಲಿದೆ.

ಮತ್ತೆ ಕಿಂಗ್ ಕೊಹ್ಲಿಗೆ ಸಿಗುತ್ತಾ ಟೆಸ್ಟ್​ ನಾಯಕತ್ವ ಪಟ್ಟ..?

ಟೀಮ್ ಇಂಡಿಯಾ ಸಕ್ಸಸ್​ಫುಲ್​ ಟೆಸ್ಟ್ ಕ್ಯಾಪ್ಟನ್​ ವಿರಾಟ್ ಕೊಹ್ಲಿ.. ಅಗ್ರೆಸ್ಸಿವ್ ಕ್ಯಾಪ್ಟನ್ಸಿಯಿಂದಲೇ ದೇಶ, ವಿದೇಶದಲ್ಲಿ ಟೆಸ್ಟ್​ ಸರಣಿಗಳನ್ನ ಗೆಲ್ಲಿಸಿಕೊಟ್ಟಿದ್ದ ವೀರಾಧಿವೀರ. ಆದ್ರೆ, 2022ರ ಟಿ20 ವಿಶ್ವಕಪ್ ವೇಳೆ ಕೊಹ್ಲಿ​ ಟಿ20 ನಾಯಕತ್ವ ತ್ಯಜಿಸಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ಬಿಸಿಸಿಐ, ಏಕದಿನ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿತ್ತು. ಇದರಿಂದ ಬೇಸರಗೊಂಡಿದ್ದ ವಿರಾಟ್, ಸೌತ್ ಆಫ್ರಿಕಾ ಟೂರ್​ ವೇಳೆ ಟೆಸ್ಟ್ ತಂಡದ ನಾಯಕತ್ವಕ್ಕೂ ಗುಡ್ ಬೈ ಹೇಳಿ ಶಾಕ್ ನೀಡಿದ್ದರು. ಆದ್ರೀಗ ಇದೇ ಕೊಹ್ಲಿಗೆ ಟೆಸ್ಟ್​ ನಾಯಕತ್ವ ಪಟ್ಟ ಕಟ್ಟಬೇಕಾದ ಅನಿವಾರ್ಯತೆ BCCIಗೆ ಎದುರಾಗಿದೆ.

ಟೆಸ್ಟ್​ ನಾಯಕತ್ವದ ರೇಸ್​ನಲ್ಲಿ ಹಲವು ಆಟಗಾರರು..!

ಟೆಸ್ಟ್​ ನಾಯಕತ್ವದ ರೇಸ್​ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ರಿಷಭ್ ಪಂತ್​, ಶ್ರೇಯಸ್​ ಅಯ್ಯರ್, ಜಸ್​ಪ್ರೀತ್ ಬೂಮ್ರಾ ಇದ್ದಾರೆ. ಆದ್ರೆ, ಇಂಜುರಿ ಸಮಸ್ಯೆಯ ಕಾರಣ ನಾಯಕತ್ವದ ರೇಸ್​​​ನಿಂದ ಔಟ್​ ಆಗಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆಗೆ ನಾಯಕತ್ವ ನೀಡುವ ಸ್ಥಿತಿಯಲ್ಲೂ ಬಿಸಿಸಿಐ ಇಲ್ಲ. ಯುವ ಆಟಗಾರರ ಶುಭ್​ಮನ್​​ಗೆ ಪಟ್ಟ ಕಟ್ಟೋಣ ಅಂದ್ರೆ, ಈಗಷ್ಟೇ ಟೆಸ್ಟ್ ಕ್ರಿಕೆಟ್​​​ನಲ್ಲಿ ಕಣ್ಣು ಬಿಡುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ಒಲಿದರೆ ಅಚ್ಚರಿ ಪಡಬೇಕಿಲ್ಲ.

ಕೊಹ್ಲಿಗೆ ಟಫ್ ಕಾಂಪಿಟೇಟರ್ ಆಗ್ತಾರಾ ಆರ್​.ಅಶ್ವಿನ್..?

ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಕೊಹ್ಲಿ ಜೊತೆ ರೇಸ್​ನಲ್ಲಿರೋದು ಆಫ್ ಸ್ಪಿನ್ನರ್ ಅಶ್ವಿನ್. ಆದ್ರೆ, ವಿದೇಶಗಳಲ್ಲಿ ಅಶ್ವಿನ್​ ಪ್ಲೇಯಿಂಗ್ ಇಲೆವೆನ್​​ ಹೊರಗಿರೋದು ಹೆಚ್ಚು. ಇವರೇ ಅಲ್ಲ, ಜಡೇಜಾ ಕೂಡ ಕ್ಯಾಪ್ಟನ್ಸಿ ರೇಸ್​ನಲ್ಲಿ ಇರೋದನ್ನ ತಳ್ಳಿ ಹಾಕುವಂತಿಲ್ಲ. ಆದ್ರೆ, ಜಡ್ಡು ಕ್ಯಾಪ್ಟನ್ಸಿ ಬಗ್ಗೆ ಅನುಮಾನ ಇದ್ದೇ ಇದೆ. ಇನ್ನು ಹಲವು ಕಾರಣಗಳು ಕಿಂಗ್ ಕೊಹ್ಲಿಗೆ ಪರವಾಗಿಯೇ ಇವೆ..
ಈಗಾಗಲೇ ನಾಯಕನಾಗಿ 68 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ಕೊಹ್ಲಿ, 40 ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಟೀಮ್ ಇಂಡಿಯಾದ ನಂ.1 ಟೆಸ್ಟ್ ಕ್ಯಾಪ್ಟನ್ ಎಂಬ ಗರಿ ಕೊಹ್ಲಿಗಿದೆ.

ಮುಂದಿನ WTC ಅವಧಿಗೆ ವಿರಾಟ್​ ಕೊಹ್ಲಿಯೇ ನಾಯಕ​..?

ಒಂದೆಡೆ ನಾಯಕತ್ವಕ್ಕೆ ಫಿಟ್ ಆಗಿರೋ ಆಟಗಾರರ ಸಮಸ್ಯೆ ಒಂದೆಡೆಯಾದ್ರೆ, ಮತ್ತೊಂದೆಡೆ 36 ವರ್ಷದ ರೋಹಿತ್ ಶರ್ಮಾ ಫಿಟ್ನೆಸ್​ ದೊಡ್ಡ ಸಮಸ್ಯೆ. ಹೀಗಾಗಿ ಮುಂದಿನ WTC ಋತುವಿನಲ್ಲಿ ರೋಹಿತ್ ಶರ್ಮಾ ಆಡುವ ಬಗ್ಗೆ ಅನುಮಾನಗಳಿವೆ. ಈ ಕಾರಣಗಳಿಂದ ಹೊಸ ನಾಯಕನನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅಳೆದೂ ತೂಗಿ ಬಿಸಿಸಿಐ, ಮುಂದಿನ 2 ವರ್ಷಗಳ ಅವಧಿಗೆ ಮತ್ತೆ ವಿರಾಟ್​ಗೆ ನೇಮಿಸಬೇಕಾದ ಸಂಕಷ್ಟಕ್ಕೆ ಸಿಲುಕಿದೆ.

ಅದೇನೇ ಆಗಲಿ, ಅಂದು ತುರಾತುರಿಯಲ್ಲಿ ಕೊಹ್ಲಿಯನ್ನ ಎದುರು ಹಾಕಿಕೊಂಡ ಬಿಸಿಸಿಐ, ಈಗ ಮತ್ತೆ ಕೊಹ್ಲಿಯನ್ನ ಒಪ್ಪಿಸಿ ಈ ತೀರ್ಮಾನ ಕೈಗೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್​ ಕೊಹ್ಲಿಗೆ ಪಟ್ಟ ಕಟ್ಟಲು ಇಕ್ಕಟ್ಟಿಗೆ ಸಿಲುಕಿದ ಬಿಸಿಸಿಐ; ಟೆಸ್ಟ್​ ಕ್ಯಾಪ್ಟನ್ಸಿ ಕಳೆದುಕೊಳ್ತಾರಾ ರೋಹಿತ್?

https://newsfirstlive.com/wp-content/uploads/2023/06/VIRAT_KOHLI_ROHIT.jpg

Load More