newsfirstkannada.com

ದೊಡ್ಡ ತಪ್ಪು ಮಾಡಿಬಿಟ್ರಂತೆ ವಿರಾಟ್ ಕೊಹ್ಲಿ.. ಬಿಸಿಸಿಐ ಖಡಕ್ ವಾರ್ನಿಂಗ್​​..!

Share :

27-08-2023

    ಏಷ್ಯಾಕಪ್​​​ಗೆ ಮುನ್ನ ‘ಏಷ್ಯನ್ ಕಿಂಗ್’​​​​​​​​​​​ಗೆ ಸಂಕಷ್ಟ..!

    ಕೊಹ್ಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾ ಬಿಸಿಸಿಐ..?

    ರನ್ ಮಷೀನ್​ ಏಷ್ಯಾಕಪ್ ಆಡ್ತಾರಾ ? ಆಡಲ್ವಾ ?

ಇಲ್ಲದೇ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೇ ನೋಡಿ. ಏಷ್ಯಾಕಪ್ ಸಮೀಪಿಸಿದ ಹೊತ್ತಿನಲ್ಲಿ ವಿರಾಟ್ ಕೊಹ್ಲಿಗೆ ದೊಡ್ಡ ಸಂಕಷ್ಟ ಬಂದೊದಗಿದೆ. ತಾನೇ ತಂದುಕೊಂಡ ಈ ಸಂಕಷ್ಟದಿಂದ ಮುಂಬರೋ ಏಷ್ಯಾಕಪ್ ಟೂರ್ನಿ ಆಡ್ತಾರಾ? ಇಲ್ವೋ ಅನ್ನೋ ಪ್ರಶ್ನೆ ಎದ್ದಿದೆ.
ಅಂಗಳದ ರಣಕಲಿ, ರನ್​ ರಾಕ್ಷಸ, ಒಂಟಿ ಸಲಗ, ಮಾಡ್ರನ್ ಕ್ರಿಕೆಟ್ ದೊರೆ, 2ನೇ ಕ್ರಿಕೆಟ್ ದೇವರು. ಈ ಎಲ್ಲಾ ಹೆಸರಿನಿಂದ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಮುಂಬರೋ ಏಷ್ಯಾಕಪ್​​ಗೆ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಇನ್ನೇನು ಪ್ಯಾಡ್ ಕಟ್ಟಿ ಅಖಾಡಕ್ಕಿಳಿದು ಎದುರಾಳಿಯನ್ನ ತನ್ನ ಬ್ಯಾಟ್​​ ಅನ್ನೋ ಬ್ರಹ್ಮಾಸ್ತ್ರದಿಂದ ಉಡೀಸ್ ಮಾಡಬೇಕಷ್ಟೆ. ಆದ್ರೆ ಇದೇ ಹೊತ್ತಲ್ಲಿ ಕಿಂಗ್ ಕೊಹ್ಲಿ ದೊಡ್ಡ ಸಂಕಷ್ಟ ತಂದುಕೊಂಡಿದ್ದಾರೆ.

ಏಷ್ಯಾಕಪ್​​ ಸಮರದಲ್ಲಿ ಕಿಂಗ್ ಕೊಹ್ಲಿ ಬ್ಯಾಟಿಂಗ್ ದರ್ಬಾರ್​ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಅಭಿಮಾನಿಗಳ ಈ ಮಹಾದಾಸೆ ಭಗ್ನಗೊಳ್ಳುತ್ತಾ ಅನ್ನೋ ಪ್ರಶ್ನೆ ಕಾಡ್ತಿದೆ. ಇಲ್ಲದೇ ಇರುವೆ ಬಿಟ್ಟುಕೊಳ್ಳಲು ಹೋದ ಸೂಪರ್​​​​​​ ಸ್ಟಾರ್​​​​ ಕೊಹ್ಲಿಗೆ ಸಂಕಷ್ಟ ಬಂದೊದಗಿದ್ದು, ಆಗಸ್ಟ್​ 30 ರಿಂದ ಆರಂಭಗೊಳ್ಳುವ ಆರಂಭಗೊಳ್ಳುವ ಏಷ್ಯಾಕಪ್​​​ ಆಡ್ತಾರಾ ? ಇಲ್ವಾ ಅನ್ನೋ ಪ್ರಶ್ನೆ ತಲೆದೂರಿದೆ. ಅಷ್ಟಕ್ಕೂ ಕೊಹ್ಲಿಯನ್ನ ಡೇಂಜರ್ ಝೋನ್​​​​​​​ಗೆ ಸಿಲುಕಿಸಿದ್ದು ಈ ಒಂದು ಪೋಸ್ಟ್​​​..!

ಯೋ ಯೋ ಟೆಸ್ಟ್​ ಅಂಕ ಹಂಚಿಕೊಂಡ ಕೊಹ್ಲಿ

ಏಷ್ಯಾಕಪ್​​ಗಾಗಿ ಬೆಂಗಳೂರಿನ ಎನ್​ಸಿಎಯಲ್ಲಿ ಟೀಮ್ ಇಂಡಿಯಾ ಅಟಗಾರರಿಗೆ ಯೋ ಯೋ ಟೆಸ್ಟ್​ ನಡೆಸಲಾಗ್ತಿದೆ. ಕಿಂಗ್ ಕೊಹ್ಲಿ 17.2 ಅಂಕ ಪಡೆದು ಯೋ ಯೋ ಟೆಸ್ಟ್​​ನಲ್ಲಿ ಪಾಸಾಗಿದ್ದು, ಈ ವಿಚಾರವನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಸದ್ಯ ಇದೇ ವಿಚಾರಕ್ಕೆ ಬಿಸಿಸಿಐ ಕಿಂಗ್ ಕೊಹ್ಲಿ ವಿರುದ್ಧ ಗರಂ ಆಗಿದ್ದು, ಸೆಂಚುರಿ ಸಾಮ್ರಾಟನಿಗೆ ಖಡಕ್ ವಾರ್ನಿಂಗ್​​​ ನೀಡಿದೆ.

ಒಪ್ಪಂದದ ನಿಯಮ ಉಲ್ಲಂಘಿಸಿದ ಕಿಂಗ್ ಕೊಹ್ಲಿ..!

ಕೊಹ್ಲಿ ಯೋ ಯೋ ಟೆಸ್ಟ್​ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುಮ್ಮನಾಗಿದ್ರೆ ಏನು ಆಗ್ತಿರ್ಲಿಲ್ಲ. ಆದ್ರೆ ಕೊಹ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಟೆಸ್ಟ್​​ನಲ್ಲಿ ತಾವು ಪಡೆದ ಸ್ಕೋರ್​ ಅನ್ನ ಶೇರ್ ಮಾಡಿದ್ದಾರೆ. ಸದ್ಯ ಇದೇ ಬಿಗ್​​ಬಾಸ್​ಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಯಾಕಂದ್ರೆ ಬಿಸಿಸಿಐ ಕಾಂಟ್ರಾಕ್ಟ್ ಪ್ರಕಾರ ಪ್ಲೇಯರ್ಸ್​ ಟ್ರ್ಯಾಕ್​​ನಲ್ಲಿ ಓಡುವ ಪೋಟೋಗಳನ್ನ ಮಾತ್ರ ಪೋಸ್ಟ್ ಮಾಡಬಹುದು. ಆದರೆ ಟೆಸ್ಟ್​​ನಲ್ಲಿ ಪಡೆದ ಅಂಕಗಳನ್ನ ಯಾವುದೇ ಕಾರಣಕ್ಕೂ ಹಂಚಿಕೊಳ್ಳುವಂತಿಲ್ಲ. ಒಂದು ವೇಳೆ ಹಂಚಿಕೊಂಡ್ರೆ ಅದು ಒಪ್ಪಂದದ ಉಲ್ಲಂಘನೆ. ಸದ್ಯ ಕೊಹ್ಲಿಗೆ ಇದೇ ಉರುಳಾಗಿ ಪರಿಣಮಿಸಿದೆ.

‘ಅಂಕಗಳನ್ನ ಹಂಚಿಕೊಳ್ಳುವುದು ನಿಯಮ ಉಲ್ಲಂಘನೆ’
ಆಟಗಾರರು ಯಾವುದೇ ಗೌಪ್ಯ ವಿಷಯವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನ ನಿಲ್ಲಿಸಬೇಕು. ಬೇಕಿದ್ದರೆ ಟ್ರೈನಿಂಗ್​​ನಲ್ಲಿ ಓಡುವ ಫೋಟೋಗಳನ್ನ ಪೋಸ್ಟ್ ಮಾಡಬಹುದು. ಆದರೆ ಯೋ ಯೋ ಟೆಸ್ಟ್​​ನಲ್ಲಿ ಪಡೆದ ಅಂಕಗಳನ್ನ ಹಂಚಿಕೊಳ್ಳುವುದು ಒಪ್ಪಂದದ ನಿಯಮಗಳನ್ನ ಉಲ್ಲಂಘಿಸುತ್ತದೆ-ಬಿಸಿಸಿಐ, ಅಧಿಕಾರಿ

ಶಿಕ್ಷೆಗೆ ಗುರಿಯಾಗ್ತಾರಾ ಸೆಂಚುರಿ ಸರದಾರ..?

ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಯೋ ಯೋ ಟೆಸ್ಟ್​ ಸ್ಕೋರ್​ ಶೇರ್ ಮಾಡಿ ಬಿಸಿಸಿಐ ನಿಯಮವನ್ನ ಗಾಳಿಗೆ ತೂರಿದ್ದಾರೆ. ಹಾಗಿದ್ರೂ ಇವರ ವಿರುದ್ಧ ಬಿಗ್​​ಬಾಸ್​ಗಳು ಸ್ಟ್ರಿಕ್​​​ ಆಕ್ಷನ್​ ತೆಗೆದುಕೊಳ್ಳುವ ಸಾಧ್ಯತೆ ಕಮ್ಮಿನೇ. ಯಾಕಂದ್ರೆ ಕೊಹ್ಲಿ ಹೇಳಿಕೇಳಿ ಲೆಜೆಂಡ್​ ಬ್ಯಾಟ್ಸ್​​ಮನ್. ಇಂತಹ ಆಟಗಾರರನ್ನ ಎದುರು ಹಾಕಿಕೊಂಡ್ರೆ ಬಿಸಿಸಿಐಗೆ ನಷ್ಟನೆ ಹೆಚ್ಚು. ಹೀಗಾಗಿ ಕೊಹ್ಲಿಗೆ ಖಡರ್ ವಾರ್ನಿಂಗ್ ಕೊಟ್ಟು ಸುಮ್ಮನಾಗಬಹುದು.

ಕೊಹ್ಲಿ ರೂಲ್ಸ್ ಬ್ರೇಕ್​ ಮಾಡಿದ್ದು ಎಷ್ಟು ಸರಿ..?

ಸದ್ಯ ಕೊಹ್ಲಿ ರೂಲ್ಸ್ ಬ್ರೇಕ್ ಮಾಡಿದ್ದು ನಿಜಕ್ಕೂ ತಪ್ಪು. ಅದನ್ನ ಯಾರೂ ಒಪ್ಪುವಂತಹದ್ದಲ್ಲ. ಯಾಕಂದ್ರೆ ಕ್ರಿಕೆಟರ್ಸ್​ಗೆ ಡಿಶಿಪ್ಲಿನ್ ತುಂಬಾನೇ ಮುಖ್ಯ. ಅದ್ರಲ್ಲೂ ಕೊಹ್ಲಿಯಂತ ಗ್ರೇಟೆಸ್ಟ್​​​ ಬ್ಯಾಟ್ಸ್​​ಮನ್​​ ನಿಯಮ ಗಾಳಿಗೆ ತೂರಿದ್ದು ಇನ್ನು ದೊಡ್ಡ ತಪ್ಪು. ಯಾಕಂದ್ರೆ ಕಿಂಗ್ ಕೊಹ್ಲಿ 15 ವರ್ಷಗಳ ಅಪಾರ ಅನುಭವವಿದೆ. ರೂಲ್ಸ್​​​ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಯಾರು ಹೇಳಿಕೊಡುವ ಅಗತ್ಯವಿಲ್ಲ. ಇಂತಹ ಲೆಜೆಂಡ್ರಿ ಆಟಗಾರನೇ ಸದ್ಯ ರೂಲ್ಸ್ ಬ್ರೇಕ್ ಮಾಡಿದ್ದು ನಿಜಕ್ಕೂ ವಿಷಾದವೇ ಸೈ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದೊಡ್ಡ ತಪ್ಪು ಮಾಡಿಬಿಟ್ರಂತೆ ವಿರಾಟ್ ಕೊಹ್ಲಿ.. ಬಿಸಿಸಿಐ ಖಡಕ್ ವಾರ್ನಿಂಗ್​​..!

https://newsfirstlive.com/wp-content/uploads/2023/07/VIRAT_KOHLI_IMITAION.jpg

Load More