‘ಕಾಲಾಯ ತಸ್ಮಯ್ ನಮಃ’ ಪೋಸ್ಟ್ ಬೆನ್ನಲ್ಲೇ ಮತ್ತೊಂದು ಸ್ಟೇಟ್ಮೆಂಟ್
‘ಏನ್ ಬಾಸ್’ ಹೀಗೆ ಹೇಳಿಬಿಟ್ರಿ ಎಂದು ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್
ಸುಮಲತಾ ಪಾರ್ಟಿಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಸ್ಟಾರ್ಸ್
ಕಳೆದ ಎರಡು ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಸಂಸದೆ ಸುಮಲತಾ ಅಂಬರೀಶ್ ಅವರ ಬರ್ತ್ಡೇ ಪಾರ್ಟಿಯ ವೇದಿಕೆಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರೋದು!
ಈ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಹಳೆಯ ಸ್ನೇಹಿತರು ಮತ್ತೆ ಒಂದು ಆಗುತ್ತಿದ್ದಾರೆ ಅನ್ನೋ ವದಂತಿ ಹಬ್ಬಿತ್ತು. ಅದಕ್ಕೆ ಪೂರಕ ಎಂಬಂತೆ ದರ್ಶನ್ ನಿನ್ನೆ ಫೇಸ್ಬುಕ್ನಲ್ಲಿ ‘ಕಾಲಾಯ ತಸ್ಮಯ್ ನಮಃ’ ಎಂಬ ಅಡಿಬರಹದೊಂದಿಗೆ ಜೊಡೆತ್ತು ಮಧ್ಯೆ ನಿಂತಿದ್ದ ಫೋಟೋ ಹಾಕಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಖಂಡಿತ ಸುದೀಪ್ ಮತ್ತು ದರ್ಶನ್ ಒಂದಾಗುತ್ತಾರೆ ಅಂದ್ಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಏಕಾಂಗಿ ಆಗಿರಿ.. ಸಂತೋಷದಿಂದ ಇರಲು.. ಸಂತೋಷದಿಂದ ಇರಲು, ಏಕಾಂಗಿ ಆಗಿರಿ.. ನನ್ನ ಸೆಲೆಬ್ರಿಟಿಗಳೊಂದಿಗೆ (Be alone, to be happy, Be happy, to be alone, With My Celebrities) ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಈ ಪೋಸ್ಟ್ ಬೆನ್ನಲ್ಲೇ, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಏನ್ ಬಾಸ್ ನೀವು ಗುಡ್ ನ್ಯೂಸ್ ಕೊಡ್ತೀರಿ ಅಂದ್ಕೊಂಡಿದ್ವಿ. ಆದರೆ, ನಿಮ್ಮ ಈ ಕ್ಯಾಪ್ಷನ್ ಇಷ್ಟ ಆಗಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ಸುದೀಪ್ ಜೊತೆಗಿನ ಸ್ನೇಹದ ಕನಸು ಬರೀ ಕನಸಾಯ್ತಾ? ಸುದೀಪ್-ದರ್ಶನ್ ಮತ್ತೆ ಒಂದಾಗಲ್ವಾ? ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಪೋಸ್ಟ್ ಬೆನ್ನಲ್ಲೇ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಮತ್ತೆ ಕನ್ಫ್ಯೂಸ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ