newsfirstkannada.com

ಬಿರು ಬಿಸಿಲಿನಲ್ಲಿ ಪಾನಿಪುರಿ ತಿಂತಾ ಇದ್ದೀರಾ? ಹಾಗಾದರೆ ತಕ್ಷಣವೇ ಈ ಸ್ಟೋರಿ ಓದಿ

Share :

Published March 28, 2024 at 6:23pm

Update March 29, 2024 at 3:08pm

    ಪ್ರಸಿದ್ದ ಖಾದ್ಯ ಪಾನಿಪುರಿ ಸೇವನೆಯಿಂದ ಆಗುವ ಪ್ರಯೋಜನ ಏನು?

    ಅತಿಯಾದ ಮಸಾಲೆ ಪದಾರ್ಥವನ್ನು ಸೇವಿಸುವುದರಿಂದ ಏನಾಗುತ್ತೆ?

    ಬಿಸಿಲಿನ ಬೇಗೆಯಲ್ಲಿ ಪಾನಿಪುರಿ ತಿಂದರೆ ನಿಮ್ಮ ಜೀವಕ್ಕೆ ಬರಬಹುದು ಆಪತ್ತು

ಭಾರತದ ಜನಪ್ರಿಯ ಖಾದ್ಯಗಳಲ್ಲಿ ಈ ಪಾನಿಪುರಿ ಕೂಡ ಒಂದು. ಈ ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಖತ್​ ಟೇಸ್ಟ್​. ಬಾಯಲ್ಲಿ ಇಟ್ಟರೆ  ಕರುಮ್ ಕುರುಮ್. ಹೀಗಾಗಿ ಪಾನಿಪುರಿ ಯುವತಿಯರಿಗಂತೂ ಪಂಚಪ್ರಾಣ. ಎಲ್ಲೇ ಕಂಡರಂತೂ ಬಾಯಿ ಚಪ್ಪರಿಸದೆ ಇರಲಾರರು. ರಸ್ತೆ ಬದಿಯಲ್ಲಿಟ್ಟು ಮಾರಾಟವಾಗುವ ಈ ಪಾನಿಪುರಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ಇಂತಹ ಬಿರು ಬಿಸಿಲಿನ ಬೇಗೆಯಲ್ಲಿ ಪಾನಿಪುರಿ ತಿಂದರೆ ನಿಮ್ಮ ಜೀವಕ್ಕೂ ಬರುತ್ತೆ ಆಪತ್ತು.

ಇದನ್ನೂ ಓದಿ: ಬೆಳ್ಳನೆಯ ಮಜ್ಜಿಗೆ, ನಿಮ್ಮ ಆರೋಗ್ಯ ಫಳಫಳ; ಬೇಸಿಗೆಯ ಆಸರಿಗೆ ಮಜ್ಜಿಗೆ ಆಸರೆ.. ಅಯ್ಯೋ ಇಷ್ಟೊಂದು ಲಾಭಾನಾ..!?

ಹೌದು, ಇತ್ತೀಚಿಗಂತೂ ಬಿಸಿಲ ಬೇಗೆ ತಾಳಲಾರದೇ ಜನರು ತಂಪಾದ ಪಾನೀಯಗಳ ಕಡೆ ಮುಖ ಮಾಡಿದ್ದಾರೆ. ಆದರೆ ಕೆಲವು ಪಾನೀಯಗಳ ಜೊತೆಗೆ ಪಾನಿಪುರಿಯನ್ನು ಅತಿಯಾಗಿ ಸೇವಿಸುತ್ತಿರುವುದು ಹೆಚ್ಚಾಗಿದೆ. ಆದರೆ ಇದೇ ಪಾನಿಪುರಿ ತಿನ್ನುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ತೊಂದರೆಯಾಗುತ್ತದೆ ಗೊತ್ತಾ? ರಸ್ತೆ ಬದಿಗಿಟ್ಟು ಪಾನಿಪುರಿಯನ್ನು ತಿನ್ನುವುದರಿಂದ ಡಿ ಹೈಡ್ರೇಶನ್, ಫುಡ್​ ಪಾಯಿಜನ್ ಆಗಲಿದೆ. ಇದರ ಜೊತೆ ಜೊತೆಗೆ ವಾಂತಿ, ಭೇದಿ ಮತ್ತು ಜಾಂಡೀಸ್​ ಅಂತಹ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಪಾನಿಪುರಿಗೆ ಬಳಸುವ ನೀರು ಹಾಗೂ ತಿನ್ನುವ ತಟ್ಟೆಗಳಿಂದಲೂ ರೋಗ ರುಜಿನಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಕಂಡ ಕಂಡಲ್ಲಿ ಪಾನಿಪುರಿ ತಿನ್ನುವಾಗ ಎಚ್ಚರದಿಂದ ಇರಬೇಕು ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ.

ಪಾನಿಪುರಿ ಸೇವನೆಯಿಂದ ಆಗುವ ಪ್ರಯೋಜನಗಳೇನು?

ಪಾನಿಪುರಿಯನ್ನು ಮಧುಮೇಹಿಗಳು ತಿನ್ನಬಹುದು. ಡಯಾಬಿಟಿಸ್ ಸಮಸ್ಯೆ ಇರೋರಿಗೆ ಸಿಹಿ ಪದಾರ್ಥದಿಂದ ದೂರ ಇರುವಂತೆ ಸಲಹೆ ನೀಡಲಾಗಿರುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ಪಾನಿಪುರಿಯನ್ನು ಮಧುಮೇಹಿಗಳು ತಿನ್ನಬಹುದು. ಆದರೆ ಮನೆಯಲ್ಲಿ ಈ ಪಾನಿಪುರಿಯನ್ನು ಮಾಡಿ ತಿನ್ನುವುರಿಂದ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.

ಇನ್ನು, ಈ ಪಾನಿಪುರಿಯಲ್ಲಿ ಅತಿಯಾದ ಮಸಾಲ ಮಿಶ್ರಣವನ್ನು ಹಾಕಲಾಗುತ್ತದೆ. ಅತಿಯಾದ ಮಸಾಲೆ ಪದಾರ್ಥವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಕರ ಆಗುತ್ತದೆ. ಹಾಗಾಗಿ ಮಿತವಾಗಿ ಪಾನಿಪುರಿ ತಿನ್ನಬಹುದು. ಆದರೆ ಇಂತಹ ಬಿರು ಬಿಸಿಲಿನಲ್ಲಿ ಪಾನಿಪುರಿಯನ್ನು ಸೇವಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿರು ಬಿಸಿಲಿನಲ್ಲಿ ಪಾನಿಪುರಿ ತಿಂತಾ ಇದ್ದೀರಾ? ಹಾಗಾದರೆ ತಕ್ಷಣವೇ ಈ ಸ್ಟೋರಿ ಓದಿ

https://newsfirstlive.com/wp-content/uploads/2024/03/pani-puri.jpg

Load More