ಪಟಾಕಿ ಹಚ್ಚುವವರ ಬಾಳಲ್ಲಿ ಕತ್ತಲ ದೀಪಾವಳಿ
ಪಟಾಕಿ ಅವಘಡದಿಂದ ಹೆಚ್ಚಾಗುತ್ತಿವೆ ಕೇಸ್ಗಳು
ಪಟಾಕಿ ಸಿಡಿದು 9 ಮಕ್ಕಳ ಕಣ್ಣಿಗೆ ಗಾಯಗಳಾಗಿವೆ
ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಲವರ ಬದುಕು ಕತ್ತಲಾಗಿದೆ. ಪಟಾಕಿ ಅವಘಡದಿಂದ ಅನೇಕರು ಸಂಕಷ್ಟಕ್ಕೆ ಜಾರಿದ್ದಾರೆ. ನವೆಂಬರ್ 12 ರಿಂದ ಇಲ್ಲಿಯವರೆಗೆ 26 ಕೇಸ್ ದಾಖಲಾಗಿರೋದು ವರದಿಯಾಗಿದೆ.
ನಾರಾಯಣ ನೇತ್ರಾಲಯದಲ್ಲಿ 26 ಕೇಸ್ ದಾಖಲಾಗಿವೆ. ಸ್ವತಃ ಪಟಾಕಿ ಸಿಡಿಸುತ್ತಿದ್ದಾಗ 14 ಜನರು ಗಾಯಗೊಂಡಿದ ಸಂಗತಿ ಬೆಳಕಿಗೆ ಬಂದಿದೆ.
ಇನ್ನು ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 17 ಕೇಸ್ ಗಳು ದಾಖಲಾಗಿವೆ. ನಿನ್ನೆ ರಾತ್ರಿಯೇ 12 ಕೇಸ್ಗಳು ಬಂದಿವೆ. ಅದರಲ್ಲಿ ಪಟಾಕಿ ಸಿಡಿದು 9 ಮಕ್ಕಳ ಕಣ್ಣಿಗೆ ಗಾಯಗಳಾಗಿದ್ದು, 9 ಮಕ್ಕಳ ಪೈಕಿ 5 ಮಕ್ಕಳಿಗೆ ಸೀರಿಯಸ್ ಇಂಜುರಿ ಆಗಿದೆ. ಇಬ್ಬರಿಗೆ ಮಾತ್ರ ಆಪರೇಷನ್ ಮಾಡಲಾಗಿದೆ. ಉಳಿದ ಮೂವರ ಮೇಲೆ ನಿಗಾದಲ್ಲಿ ಇಡಲಾಗಿದ್ದು, ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.
ಒಟ್ಟು 17 ಕೇಸ್ ಗಳ ಪೈಕಿ 7 ಜನರು ಮಾತ್ರ ಸೀರಿಯಸ್ ಕಂಡೀಷನ್ ಇದ್ದು, 7 ಜನರು ದೃಷ್ಟಿ ಕಳೆದುಕೊಳ್ಳೋ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. 7 ಜನರಲ್ಲಿ ಐವರು ಮಕ್ಕಳು ಇಬ್ಬರು ದೊಡ್ಡವರು ಎಂದು ತಿಳಿದುಬಂದಿದೆ.
ಪಟಾಕಿ ಅವಾಂತರದಿಂದ ಗಾಯಗೊಂಡ ಹೆಚ್ಚಿನ ರೋಗಿಗಳು ಬೆಂಗಳೂರಿನ ನಿವಾಸಿಗಳಾಗಿದ್ದು, ಒಬ್ಬರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ