ವಿವಾದಾದ್ಮಕ ಪೋಸ್ಟ್ ಹಾಕಿದ್ರೆ ಅಷ್ಟೇ ಕತೆ
ಇಂತಹ ಪೋಸ್ಟ್ ಮೇಲಿದೆ ಪೊಲೀಸರ ಹದ್ದಿನ ಕಣ್ಣು
ಬೇಕಾ ಬಿಟ್ಟಿ ಪೋಸ್ಟ್ ಮಾಡಿದ್ರೆ ಜೈಲೂಟ ಫಿಕ್ಸ್
ಕಳೆದ ಹಲವು ವರ್ಷಗಳಿಂದ ಸೋಷಿಯಲ್ ಮೀಡಿಯಾ ಸಾಕಾಷ್ಟು ಚಾಲ್ತಿಗೆ ಬಂದಿದೆ. ಹಾಗೆಯೇ, ವಿವಾದ, ಅಭಿಯಾನಗಳು, ಚರ್ಚೆಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಹೋರಾಟ ಅನ್ನೋ ಹೆಸ್ರಲ್ಲಿ ಟ್ವೀಟ್ ಅಥವಾ ಪೋಸ್ಟ್ ಮಾಡಿ ಕೂತಲ್ಲೇ, ದೊಡ್ಡ ಮಟ್ಟದ ವಿವಾದ ಸೃಷ್ಟಿ ಮಾಡ್ಬಿಡ್ತಾರೆ. ಇನ್ನು, ಕೆಲವರು ಮಾಡೋ ಪ್ರಚೋದನಾತ್ಮಕ ಪೋಸ್ಟ್ಗಳಂತೂ ಯಾವ ಮಟ್ಟಿಗೆ ವಿವಾದಕ್ಕೀಡಾಗ್ತಾವೆ ಅಂದ್ರೆ, ಸ್ಟೇಷನ್, ಕೋರ್ಟ್ ಮೆಟ್ಟಿಲವರೆಗೂ ತಂದು ನಿಲ್ಲಿಸ್ತಾವೆ. ಹೀಗಾಗಿ, ಇದೆಲೆದ್ದಕ್ಕೂ ಬ್ರೇಕ್ ಹಾಕೋಕೆ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.
‘ವಿವಾದಾದ್ಮಕ ಪೋಸ್ಟ್ ಮಾಡಿದ್ರೆ, ಕೇಸು ಶತಸಿದ್ಧ’
ಇಷ್ಟು ದಿನ ಸೈಲೆಂಟ್ ಆಗಿ ಸೋಷಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಇದೀಗ ಅಲರ್ಟ್ ಆದಂತೆ ಕಾಣಿಸ್ತಿದೆ. ಧರ್ಮ, ಜಾತಿ, ಹಾಗೇ ದೇಶದ ಬಗ್ಗೆ ಟ್ವೀಟ್ ಮಾಡಿ ಪ್ರಚೋದನೆ ನೀಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳೋಕೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅಷ್ಟಲ್ಲದೇ, ವಿವಾದಾತ್ಮಕ ಪೋಸ್ಟ್ ಮಾಡೋರನ್ನ ಹೆಡೆಮುರಿ ಕಟ್ಟೋಕೆ ಪೊಲೀಸರು, ನಗರದ ಎಲ್ಲಾ ಸ್ಟೇಷನ್ಗಳಲ್ಲೂ ಸೋಷಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣಿಡೋಕೆ ಅಂತಾನೇ ಒಂದು ಟೀಂ ರೆಡಿ ಮಾಡ್ತಿದ್ದಾರೆ.
ಇನ್ನು, ಈ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತರಾದ ಬಿ. ದಯಾನಂದ್, ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ವಿವಾದಾದ್ಮಕ ಪೋಸ್ಟ್ ಮಾಡೋ ಮೂಲಕ ಜನರಲ್ಲಿ ಆತಂಕ ಸೃಷ್ಟಿ ಮಾಡ್ತಿದ್ದಾರೆ. ಹೀಗಾಗಿ, ಸೋಷಿಯಲ್ ಮೀಡಿಯಾ ಗಮನಿಸಲು ಒಂದು ತಂಡ ರಚನೆ ಮಾಡ್ಲಾಗ್ತಿದೆ ಅಂತಾ ತಿಳಿಸಿದ್ದಾರೆ.
ಒಟ್ಟಾರೆ, ಟೈಮ್ ಪಾಸ್ ಆಗಲ್ಲ ಅಂತಾ, ಏನಾದ್ರೂ ಸೋಷಿಯಲ್ ಮೀಡಿಯಾದಲ್ಲಿ ಬೇಕಾ ಬಿಟ್ಟಿ ಪೋಸ್ಟ್ ಮಾಡುದ್ರೆ, ಜೈಲು ಶತಸಿದ್ಧ ಅಂತಾ ಪೊಲೀಸ್ ಆಯುಕ್ತರು ವಾರ್ನಿಂಗ್ ಕೊಟ್ಟಿದ್ದಾರೆ. ಅದೇನೆ ಇರ್ಲಿ, ಇನ್ಮುಂದೆ ಆದ್ರೂ ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡ್ಬೇಕಂದ್ರೆ ನಿಮ್ ಬುದ್ಧಿ ನಿಮ್ಮ ಕೈಲಿ ಇದ್ರೆ ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ