newsfirstkannada.com

ಹೊಸ ಸಾಹಸಕ್ಕೆ ಕೈ ಹಾಕಿದ ಕೊಹ್ಲಿ; ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮುಗಿಸಿ ಎಲ್ಲಿಗೆ ಹೋಗ್ತಾರೆ ಗೊತ್ತಾ..?

Share :

09-06-2023

  ‘ಮ್ಯಾನ್​​​​ vs ವೈಲ್ಡ್‌’​ ಶೋನಲ್ಲಿ ವಿರಾಟ್..!

  ಡೆಡ್ಲಿ ಶೋಗೆ ಡೆಲ್ಲಿ ಬಾಯ್ ಎಂಟ್ರಿ..?

  ಮೋದಿ, ಅಕ್ಕಿ, ರಜನಿ ಬಳಿಕ ಕೊಹ್ಲಿ ಗೆಸ್ಟ್​

ವಿರಾಟ್​ ಕೊಹ್ಲಿ ಎಂತಹ ಸಾಹಸಮಯಿ ನಿಮಗೆ ಗೊತ್ತಿದೆ. ಪಣ ತೊಟ್ಟು ನಿಂತ್ರೆ ಅದು ಎಂತದ್ದೇ ಆಗ್ಲಿ ಸಾಧಿಸುವವರೆಗೂ ಬಿಡಲ್ಲ. ವಿಶ್ವದ ಮೂಲೆ ಮೂಲೆಯ ಮೈದಾನಗಳಲ್ಲಿ ಅಸಾಧ್ಯವಾದುದನ್ನು ಸಾಧಿಸಿದ ಈ ಛಲದಂಕಮಲ್ಲ, ನಾಡು ಬಿಟ್ಟು ಇದೀಗ ಕಾಡಿಗೆ ಹೊರಡೋಕೆ ಸಜ್ಜಾಗಿದ್ದಾನೆ. ಕಿಂಗ್​ ಕಾಡಿಗೆ ಹೊರಟಿರೋದು ಒಂದು ಸಾಹಸಮಯ ಕಥೆಯನ್ನ ಹೇಳೋಕೆ.

ಕಾಡಿಗೆ ಹೊರಟ ಕ್ರಿಕೆಟ್​ ದುನಿಯಾದ ಕಿಂಗ್.​.!
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಆಡ್ತಿರೋ ಕೊಹ್ಲಿ, ಈ ಪಂದ್ಯ ಮುಗಿದ ಒಂದು ತಿಂಗಳ ಫುಲ್​ ಫ್ರಿ. ಮುಂದಿನ ಜುಲೈ 12ರವರೆಗೆ ಟೀಮ್​ ಇಂಡಿಯಾದ ಯಾವ ಪಂದ್ಯಗಳೂ ನಡೆಯಲ್ಲ. ಹೀಗಾಗಿ ಆಟಗಾರರೆಲ್ಲಾ ಬಿಡುವಿನ ಸಮಯ ಕಳೆಯಲು ಟ್ರಿಪ್​ ಪ್ಲಾನ್​ ಮಾಡ್ತಿದ್ದಾರೆ. ಆದ್ರೆ ಕಿಂಗ್​ ಕೊಹ್ಲಿ ಮಾತ್ರ ಕಾಡಿಗೆ ಹೋಗಲಿದ್ದಾರೆ.

ಮ್ಯಾನ್​ VS ವೈಲ್ಡ್,​​ ಸಾಹಸಮಯ ಶೋನಲ್ಲಿ ವಿರಾಟ್​..?
ಕೆಲ ತಿಂಗಳ ಹಿಂದೆ ಕೊಹ್ಲಿ, ಮ್ಯಾನ್​ VS ವೈಲ್ಡ್​ ಶೋಗೆ ಬರ್ತಾರೆ ಅನ್ನೋ ಸುದ್ದಿ ಗೊತ್ತಾಗಿತ್ತು. ಅದಕ್ಕೆ ಕೊನೆಗೂ ಮಹೂರ್ತ ಫಿಕ್ಸ್​ ಆದಂತಿದೆ. ಮುಂದಿನ ತಿಂಗಳು ಕ್ರಿಕೆಟ್​ನಿಂದ ಸಿಗ್ತಿರೋ ಬಿಡುವಿನ ಸಮಯದಲ್ಲಿ ಈ ಸಾಹಸಕ್ಕೆ ಕೈ ಹಾಕಲು ಕೊಹ್ಲಿ ಮುಂದಾಗಿದ್ದಾರೆ. ಸ್ವತಃ ಶೋನ ನಿರೂಪಕ ಬೇರ್​ಗ್ರಿಲ್ಸ್​ ಈ ಬಗ್ಗೆ ಸುಳಿಹು ನೀಡಿದ್ದಾರೆ.

ಎಂಟೆದೆ ಗುಂಡಿಗೆ ಇದ್ದವರಿಗಷ್ಟೇ ಈ ಶೋ..!
‘ಮ್ಯಾನ್​​​​ ವರ್ಸಸ್ ವೈಲ್ಡ್‌’..! ಈ ಹೆಸರೇ ಈ ಶೋನ ರೋಚಕತೆಯನ್ನು ವಿವರಿಸುತ್ತೆ. ಈ ಶೋ ನಡೆಸಿಕೊಡೋ ಬೇರ್​ ಗ್ರಿಲ್ಸ್​ ಬಗ್ಗೆ ಹೇಳೋದೇಬೇಡ.. ಈತನೊಬ್ಬ ಅಪ್ರತಿಮ ಸಾಹಸಿ. ಬಿಸಿಲು, ಮಳೆ, ಬೆಟ್ಟ, ಗುಡ್ಡ, ದಟ್ಟ ಕಾಡು. ಇವ್ಯಾವಕ್ಕೂ ಡೋಂಟ್​ ಕೇರ್​.. ಇವರು ಎಂತಹ ಸಾಹಸಿ ಅಂದರೆ ಈತನಿಗೆ ಆಕಾಶ, ಭೂಮಿ, ಕಾಡು-ಗುಡ್ಡ, ಮರುಭೂಮಿ ಎಲ್ಲವೂ ಒಂದೇ. ಈತನ ಜೊತೆ ಜರ್ನಿ ಮಾಡ್ಬೇಕಂದ್ರೆ ಎಂಟೆದೆ ಗುಂಡಿಗೆ ಇರಲೇಬೇಕು.

ಹಾವು ಅಂದ್ರೆ ಹಾರಿ ಬೀಳ್ತಾರೆ.. ಚೇಳು ಮಾರು ದೂರ ಓಡಿ ಹೋಗ್ತಾರೆ. ಆದ್ರೆ ಗ್ರಿಲ್ಸ್​​ ಹಾಗೆ ಹಿಡಿದು ಹೀಗೆ ತಿಂದು ಬಿಡ್ತಾರೆ. ಇತನ ಜೀವನವೇ ರೋಚಕ.. ಭಯಾನಕ ಪ್ರಾಣಿಗಳೊಂದಿಗೂ ಕಾಲವನ್ನ ಕಳೆದಿದ್ದಾನೆ. ಅದೆಷ್ಟೋ ಬಾರಿ ಸಾವಿನ ದವಡೆಯಿಂದ ಪಾರಾದ ಉದಾಹರಣೆಯೂ ಇದೆ. ಮೊದಲು ಒಬ್ಬನೇ ಅಡ್ವೆಂಚರ್​​​​ ಮಾಡ್ತಿದ್ದ ಈ ಛಲಗಾರ,​​​​​ ಈಗ ಸೆಲೆಬ್ರಿಟಿಗಳನ್ನ ಶೋಗೆ ಎಳೆ ತಂದಿದ್ದಾರೆ. ಈತನ ಧೈರ್ಯ, ಹುಚ್ಚಾಟ, ಪ್ರಚಂಡ ಸಾಹಸಕ್ಕೆ ಬಂದ ಗೆಸ್ಟ್​ಗಳೆಲ್ಲಾ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾನಂಥ ಮಹಾರಥಿಯಯನ್ನೇ ಕಾಡುಮೇಡು ಅಲೆಸಿದ ಈ ಹಠವಾದಿ, ಪ್ರಧಾನಿ ನರೇಂದ್ರ ಮೋದಿಯನ್ನೂ ಕಾಡಲ್ಲಿ ಸುತ್ತಿಸಿದ್ರು. ನಟರಾದ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ರಜನಿಕಾಂತ್​​ ಕೂಡ ಈತನ ಶೋನಲ್ಲಿ ಭಾಗಿಯಾಗಿದ್ದವರೆ, ಮೋದಿ ಕತ್ತಿ ಹಿಡಿದು ಬೇಟೆಗೆ ಇಳಿದಿದ್ದು, ರಣವೀರ್​ ಸಿಂಗ್​​ ಓಡಿಸಿಕೊಂಡು ಬಂದ ಕರಡಿಯಿಂದ ಬಚಾವ್​ ಆಗಿದ್ದು, ಅಕ್ಷಯ್​ ಕುಮಾರ್​ ನದಿ ದಾಟುವಾಗ ಮೊಸಳೆ ಕಾಣಿಸಿಕೊಂಡಿದ್ದು.. ಹೀಗೆ ಈ ಸೆಲೆಬ್ರೆಟಿ ಶೋಗಳಲ್ಲಿ ಹಲ ರೋಮಾಂಚನಕಾರಿ ಘಟನೆ ನಡೆದಿವೆ.

ಇದೀಗ ರಣವೀರ್​​​​​​​​​​ ಸಿಂಗ್​​​ ನಂತರ ಭೀಕರ ಬಿರುಗಾಳಿಗೂ ಜಗ್ಗದ ಬೇರ್​​ ಗ್ರಿಲ್ಸ್​​ ಜೊತೆ ಕಾಡು ಸುತ್ತಾಡುವ ಸೆಲೆಬ್ರಿಟಿ ಯಾರೆಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಆ ಕುತೂಹಲದ ಪ್ರಶ್ನೆ ಕೊಹ್ಲಿ ಅನ್ನೋ ಉತ್ತರ ಸಿಕ್ಕಿದೆ. ಯಾವಾಗ ಶೂಟಿಂಗ್​, ಯಾವಾಗ ಪ್ರಸಾರ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಹೊಸ ಸಾಹಸಕ್ಕೆ ಕೈ ಹಾಕಿದ ಕೊಹ್ಲಿ; ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮುಗಿಸಿ ಎಲ್ಲಿಗೆ ಹೋಗ್ತಾರೆ ಗೊತ್ತಾ..?

https://newsfirstlive.com/wp-content/uploads/2023/06/KING_KOHLI.jpg

Load More