ಶುರುವಾಗುವ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದ ಬಿಗ್ಬಾಸ್
ಬಿಗ್ಬಾಸ್ ಸೀಸನ್ 11ಗಾಗಿ ತುತ್ತ ತುದಿಯಲ್ಲಿ ಕಾಯುತ್ತಿದ್ದಾರೆ ವೀಕ್ಷಕರು
ಆದಷ್ಟು ಬೇಗನೇ ಮುಕ್ತಾಯಗೊಳ್ಳುತ್ತಾ ಈ 3 ಟಾಪ್ ಸೀರಿಯಲ್ಗಳು?
ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಗಳಿಗೆ ಬಂದು ಬಿಟ್ಟಿದೆ. ಇನ್ನೇನಿದ್ದರೂ ಶೀರ್ಘದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಬರುತ್ತಿದೆ. ಕನ್ನಡ ಬಿಗ್ಬಾಸ್ ವೀಕ್ಷಕರು ಈಗ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಬಿಗ್ಬಾಸ್ ಶೋ ಮೇಲೆ ನೆಟ್ಟಿದೆ. ಸದ್ಯ ಬಿಗ್ಬಾಸ್ ಸೀಸನ್ ಸೀಸನ್ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ: ಸೀರಿಯಲ್ನಲ್ಲಿ ತಾಯಿ.. ರಿಯಲ್ ಲೈಫ್ನಲ್ಲಿ ಸಖತ್ ಹಾಟ್ ಗರ್ಲ್; ನಟಿ ಫೋಟೋಸ್ಗೆ ಫ್ಯಾನ್ಸ್ ಶಾಕ್
ಬಿಗ್ಬಾಸ್ ಬರ್ತಿದೆ ಅಂದ್ಮೇಲೆ ಒಂದೂವರೆ ಗಂಟೆಯ ಟೈಮ್ ಸ್ಲಾಟ್ ಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ಮೂರು ಧಾರಾವಾಹಿಗಳು ಮುಕ್ತಾಯ ಹಂತದಲ್ಲಿವೆ ಅಂತ ಈ ಹಿಂದೆ ನಾವು ನಿಮಗೆ ಹೇಳಿದ್ವಿ. ಚುಕ್ಕಿತಾರೆ, ಕೆಂಡಸಂಪಿಗೆ ಹಾಗೂ ನನ್ನ ದೇವರು ಈ ಮೂರು ಸೀರಿಯಲ್ಗಳು ಮುಕ್ತಾಯ ಹಂತದಲ್ಲಿವೆ. ಇದರ ಮಧ್ಯೆ ಸೆಪ್ಟೆಂಬರ್ ಬರುತ್ತಿದ್ದಂತೆ ಬಿಗ್ಬಾಸ್ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಂಡ ವೀಕ್ಷಕರಿಗೆ ಕೊನೆಗೂ ಗುಡ್‌ನ್ಯೂಸ್ ಕೊಟ್ಟಿದೆ.
ಅದಕ್ಕೆ ಕಾರಣ ಪ್ರತಿ ಸೀಸನ್ ಶುರುವಾಗೋದು ಸೆಪ್ಟಂಬರ್ ಮೊದಲ ವಾರ ಅಥವಾ ಅಕ್ಟೋಬರ್ ಮೊದಲ ವಾರ. ಹೀಗಾಗಿ ಮೂರು ಸೀರಿಯಲ್ಗಳು ಮುಕ್ತಾಯದ ಹಂತದಲ್ಲಿ ಇವೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಸೀಸನ್ನಂತೆ ಬಿಗ್ಬಾಸ್ 9:30 ಗಂಟೆಗೆ ಶುರುವಾಗಿ 11:00ಕ್ಕೆ ಮುಕ್ತಾಯ ಆಗುತ್ತೆ. ಹೀಗಾಗಿ ಅದೇ ಸ್ಲಾಟ್ನಲ್ಲಿರೋ ರಾಮಾಚಾರಿ ಸೀರಿಯಲ್ ಸಮಯ ಬದಲಾವಣೆ ಆಗಬಹುದು. ಜೊತೆಗೆ ರಾತ್ರಿ 9:30ಕ್ಕೆಯಿದ್ದ ಕರಿಮಣಿ ಧಾರಾವಾಹಿಯ ಸ್ಲಾಟ್ ಕೂಡ ಚೇಂಚ್ ಆಗಬಹುದು. ಸದ್ಯ ಬಿಗ್ಬಾಸ್ ಶುರುವಾಗುವ ಕೆಲವು ದಿನಗಳ ಮುಂಚೆ ಈ ಬಗ್ಗೆ ಅಧಿಕೃತವಾಗಿ ಕಲರ್ಸ್ ಕನ್ನಡ ತಿಳಿಸಲಿದೆ.
ಸೀರಿಯಲ್ಗಳು ಅಷ್ಟು ಬೇಗ ಮುಕ್ತಾಯಗೊಳ್ಳಲು ಕಾರಣವೇನು?
ಸೀರಿಯಲ್ಗಳು ಮುಕ್ತಾಯ ಅಂತ ಬಂದಾಗ ಮೊದಲಿಗೆ ಕೌಂಟ್ ಆಗೋದೆ ರೇಟಿಂಗ್. ಧಾರಾವಾಹಿಯನ್ನ ಎಷ್ಟು ಜನ ವೀಕ್ಷಿಸುತ್ತಿದ್ದಾರೆ. ಟಿಆರ್ಪಿ ರೇಟಿಂಗ್ ಲಿಸ್ಟ್ನಲ್ಲಿ ಯಾವ ಸ್ಥಾನದಲ್ಲಿ ಅನ್ನೋದರ ಆಧಾರದ ಮೇಲೆ ಧಾರಾವಾಹಿಯನ್ನ ವೈಂಡಪ್ ಮಾಡಲಾಗುತ್ತೆ. ಈ ಪ್ರಕಾರ ಕೆಂಡಸಂಪಿಗೆ, ಚುಕ್ಕಿತಾರೆ, ನನ್ನ ದೇವರು ಧಾರಾವಾಹಿಗಳು ಮುಕ್ತಾಯದ ಸೂಚನೆಯಿದೆ.
ಹೌದು, ಮೊದಲು ಒಳ್ಳೆಯ ರೇಟಿಂಗ್ ಪಡೆಯುತ್ತಿದ್ದ ಕೆಂಡಸಂಪಿಗೆ ನಾಯಕಿಯ ಬದಲಾವಣೆ ನಂತರ ಟಿಆರ್ಪಿ ಕುಸಿದಿದೆ. ನಾಯಕ ಕೂಡ ಒಂದಷ್ಟು ದಿನ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ರೇಟಿಂಗ್ಗೆ ಹೊಡೆತ ಬಳಲು ಕಾರಣವಾಗಿದೆ. ಅದೇ ರೀತಿ ಇತ್ತೀಚಿಗಷ್ಟೇ ಲಾಂಚ್ ಆದ ಧಾರಾವಾಹಿ ಚುಕ್ಕಿತಾರೆ. ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿಗಿಲಿಗಿಲಿ ಖ್ಯಾತಿಯ ಬಾಲ ನಟಿ ಮಹಿತಾ ಸುತ್ತಸುತ್ತುವ ಕತೆ. ಗಾಯಕ ನವೀನ್ ಸಜ್ಜು ಅಪ್ಪನ ಪಾತ್ರ ಮಾಡಿದ್ರು. ಅವರ ಪಾತ್ರ ಸತ್ತೋದ ನಂತರ ನೋಡುಗರ ಸಂಖ್ಯೆ ಕೂಡ ಕಡಿಮೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ