newsfirstkannada.com

ಕಿಂಗ್ ಫಿಷರ್ ಬಿಯರ್ ಕುಡಿಯುವ ಮುನ್ನ ಎಚ್ಚರ.. ಮೈಸೂರಲ್ಲಿ ಯೋಗ್ಯವಲ್ಲದ 25 ಕೋಟಿ ಮೌಲ್ಯದ ಬಿಯರ್ ಸೀಜ್..!

Share :

17-08-2023

    ಮದ್ಯಪ್ರಿಯರಿಗೆ ಇದು ಭಾರೀ ಆಘಾತಕಾರಿ ನ್ಯೂಸ್​..!

    ವೈಜ್ಞಾನಿಕ ಪರೀಕ್ಷೆಯಲ್ಲಿ ಭಯಾನಕ ಮಾಹಿತಿ ಬಹಿರಂಗ

    ಬಿಯರ್ ತಯಾರಿಕ ಕಂಪನಿ ವಿರುದ್ಧ ಬಿತ್ತು ಎಫ್​ಐಆರ್​

ಮೈಸೂರು ಜಿಲ್ಲೆಯಿಂದ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಂದಿದೆ. ಕಿಂಗ್ ಫಿಷರ್ ಬಿಯರ್ ಕುಡಿಯುವ ಮುನ್ನ ಜಾಗೃತರಾಗಿ ಯಾಕಂದರೆ ಅದರಲ್ಲಿ ಅಪಾಯಕಾರಿ ಕೆಮಿಕಲ್ ಅಂಶ (unfit for human consumption) ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಸುಮಾರು ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗುತ್ತಿದ್ದ 25 ಕೋಟಿ ರೂಪಾಯಿ ಮೌಲ್ಯದ ಕಿಂಗ್ ಫಿಶರ್ ಬಿಯರ್​​ಗಳನ್ನು ರಾಜ್ಯ ಅಬಕಾರಿ ಇಲಾಖೆ ಸೀಜ್​ ಮಾಡಿದೆ. ಕಿಂಗ್​ಫಿಶರ್​ ಸ್ಟಾಂಗ್ ಬಿಯರ್ (Kingfisher Strong Beer) ಮತ್ತು ಕಿಂಗ್ ಫಿಶರ್​ ಅಲ್ಟ್ರಾ ಲ್ಯಾಗರ್ ಬಿಯರ್ (Ultra Lager Beer)ನಲ್ಲಿ ಕುಡಿಯಲು ಯೋಗ್ಯವಲ್ಲದ ಅಪಾಯಕಾರಿ ಕೆಮಿಕಲ್ ಪತ್ತೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿ ರವಿಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯುನೈಟೆಡ್ ಬ್ರಿವರಿಸಿಸ್ ಕಂಪನಿ (United Breweries Limited) ತಯಾರಿಸಿದ್ದ ಬಿಯರ್ ಇದಾಗಿದೆ. 15-07-23 ರಂದು ತಯಾರಾಗಿದ್ದ ಬಿಯರ್​​ಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಸೆಡಿಮೆಂಟ್ (sediments) ಅಂಶ ಪತ್ತೆಯಾಗಿದೆ. ಒಟ್ಟು‌ 78678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಸದ್ಯ ಈ ಎಲ್ಲಾ ಬಾಕ್ಸ್​ಗಳನ್ನು ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಂಗ್ ಫಿಷರ್ ಬಿಯರ್ ಕುಡಿಯುವ ಮುನ್ನ ಎಚ್ಚರ.. ಮೈಸೂರಲ್ಲಿ ಯೋಗ್ಯವಲ್ಲದ 25 ಕೋಟಿ ಮೌಲ್ಯದ ಬಿಯರ್ ಸೀಜ್..!

https://newsfirstlive.com/wp-content/uploads/2023/08/BEER.jpg

Load More