newsfirstkannada.com

ರೇಣುಕಾಸ್ವಾಮಿ ಕೊಲೆಗೂ ಮುನ್ನ ಹೊಟ್ಟೆ ತುಂಬಾ ಊಟ ತಿನ್ನಿಸಿದ್ರು.. ಆಮೇಲೆ ನಡೆದಿದ್ದೇ ಡೆವಿಲ್‌ ಗ್ಯಾಂಗ್‌ ಚಿತ್ರಹಿಂಸೆ!

Share :

Published July 5, 2024 at 6:47pm

Update July 5, 2024 at 7:17pm

    ಪವಿತ್ರಾ ಗೌಡಗೇ ಅಶ್ಲೀಲವಾಗಿ ಕಾಮೆಂಟ್ ಹಾಕಿದ್ದನಂತೆ ರೇಣುಕಾಸ್ವಾಮಿ

    ಸಾಕ್ಷಿಗಳ ಹೇಳಿಕೆ ಜತೆ ಪೊಲೀಸ್​ ಅಧಿಕಾರಿಗಳ ಕೈಯಲ್ಲಿ ಸ್ಟ್ರಾಂಗ್​ ಎವಿಡೆನ್ಸ್

    ರೇಣುಕಾಸ್ವಾಮಿ ಸಾವಿನ ಸರಿಯಾದ ಸಮಯ ಪತ್ತೆಗೆ ಪೊಲೀಸರ ಪ್ರಯತ್ನ

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಸುದ್ದಿ ಕೇಳಿ ಇಡೀ ದೇಶದ ಜನತೆ ಬೆಚ್ಚಿ ಬಿದ್ದಿದ್ದರು. ಅದರಲ್ಲೂ ಈ ಕೊಲೆ ಕೇಸ್​ ಹಿಂದೆ ನಟ ದರ್ಶನ್​ ಹಾಗೂ ಪವಿತ್ರಾ ಗೌಡರ ಹೆಸರು ಕೇಳಿ ಇಡೀ ಸ್ಯಾಂಡಲ್​ವುಡ್​ ಮಂದಿ ದಂಗಾಗಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್​ ಹಿಂದೆ ಒಂದಲ್ಲಾ ಎರಡಲ್ಲಾ ಒಟ್ಟು 17 ಆರೋಪಿಗಳು ಈ ಕೇಸ್​ನಲ್ಲಿ ಭಾಗಿಯಾಗಿದ್ದಾರೆ. ಸದ್ಯ 17ರಲ್ಲಿ 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 4 ಆರೋಪಿಗಳನ್ನ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ಇನ್ನು, ರೇಣುಕಾಸ್ವಾಮಿ ಪವಿತ್ರಾ ಗೌಡಗೇ ಅಶ್ಲೀಲವಾಗಿ ಕಾಮೆಂಟ್​ ಮಾಡಿದ್ದನಂತೆ. ಇದೇ ಕಾರಣಕ್ಕೆ ದರ್ಶನ್ ಅಂಡ್ ಪ್ಲಾನ್​ ಮಾಡಿ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಕ್ರೂರವಾಗಿ ಕೊಲೆ ಮಾಡಿ ಶವವನ್ನು ಎಸೆದಿದ್ದರು. ಆದರೆ ಕೊಲೆಗೂ ಮುನ್ನ ರೇಣುಕಾಸ್ವಾಮಿಗೆ ಆರೋಪಿಗಳು ಊಟ ಕೊಡಿಸಿದ್ದರಂತೆ. ಆತನ ಹೊಟ್ಟೆ ತುಂಬುವಷ್ಟು ತಿನ್ನಿಸಿ ಬಳಿಕ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದಿದ್ದಾರೆ. ರೇಣುಕಾಸ್ವಾಮಿಯನ್ನು ಯಾವೆಲ್ಲಾ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ ಎಂಬ ವಿಚಾರ ಪೋಸ್ಟ್​ ಮಾರ್ಟಂ ವರದಿಯಲ್ಲಿ ತಿಳಿದು ಬಂದಿದೆ.

ಹೌದು, ಕೊಲೆಯಾದ ರೇಣುಕಾಸ್ವಾಮಿ ಜಠರದಲ್ಲಿತ್ತು ಜೀರ್ಣವಾಗದ ಆಹಾರ ಇತ್ತಂತೆ. ಸಂಜೆ 04.30 ರಿಂದ 5ರ ಅವಧಿಯಲ್ಲಿ ಆಹಾರ ನೀಡಲಾಗಿತ್ತಂತೆ. ಆಹಾರ ಕೊಟ್ಟ ಬಳಿಕ ಹಿಗ್ಗಾಮುಗ್ಗಾ ಥಳಿಸಿ, ಹಿಂಸಿಸಿ ಕೊಲೆ ಮಾಡಿರುವುದರಾಗಿ ತಿಳಿದು ಬಂದಿದೆ. ಹೀಗಾಗಿ ಈ ಸಂಬಂಧ ನಟ ದರ್ಶನ್​ ವಿರುದ್ಧ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಪೊಲೀಸ್ ಅಧಿಕಾರಿಗಳ ತನಿಖೆಯಲ್ಲಿ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ. ಸಾಕ್ಷಿಗಳ ಹೇಳಿಕೆಗಳ ಜೊತೆಗೆ ಪೊಲೀಸರ ಕೈಗೆ ಸ್ಟ್ರಾಂಗ್​ ಎವಿಡೆನ್ಸ್ ಸಿಕ್ಕಿದೆ. ಸಿಕ್ಕಿರುವ ಸಾಕ್ಷ್ಯಗಳು ಅಪರಾಧ ಸಾಬೀತಿಗೆ ಪೂರಕವಾಗಿದೆ. ಯಾವುದೇ ಕಾರಣಕ್ಕೂ ದರ್ಶನ್​​ ತಪ್ಪಿಸಿಕೊಳ್ಳದಂತೆ ಪೊಲೀಸರು ಬಲೆ ಹೆಣೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆಗೂ ಮುನ್ನ ಹೊಟ್ಟೆ ತುಂಬಾ ಊಟ ತಿನ್ನಿಸಿದ್ರು.. ಆಮೇಲೆ ನಡೆದಿದ್ದೇ ಡೆವಿಲ್‌ ಗ್ಯಾಂಗ್‌ ಚಿತ್ರಹಿಂಸೆ!

https://newsfirstlive.com/wp-content/uploads/2024/06/DARSHAN_GANG-1.jpg

Load More