ಅಬ್ಬಬ್ಬಾ.. ದೇಶಾದ್ಯಂತ ತೀವ್ರ ಚರ್ಚೆಗೀಡಾದ ವಿಚಿತ್ರ ಲವ್ ಸ್ಟೋರಿ ಇದು
ವರಸೆಯಲ್ಲಿ ಚಿಕ್ಕಪ್ಪ, ಮಗಳು ಆದರೂ ಕೂಡ ಇಬ್ಬರ ನಡುವೆ ಪ್ರೇಮಾಂಕುರ
ಪ್ರೇಮಕ್ಕೆ ನೈತಿಕತೆಯ ಮುದ್ರೆ ಒತ್ತಿದ ಹುಡುಗಿ, ಪ್ರಶ್ನಿಸುವ ಹಕ್ಕಿಲ್ಲ ಎಂದು ಸವಾಲು
ಪಾಟ್ನಾ: ಬಿಹಾರದ ನಗರ ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತನ ಲವ್ ಸ್ಟೋರಿಯೊಂದು ದೇಶದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. 31 ವರ್ಷದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್ 24 ವರ್ಷದ ಸಜಲ್ ಸಿಂಧು ಅವರನ್ನು ಮದುವೆಯಾಗಿದ್ದ ಈಗ ದೊಡ್ಡ ಕೋಲಾಹಲವನ್ನೇ ಅವರ ಕುಟುಂಬದಲ್ಲಿ ಸೃಷ್ಟಿಸಿದೆ. ಇಬ್ಬರ ನಡುವೆ ಸ್ನೇಹ ಬೆಳೆದು ಸ್ನೇಹ ಪ್ರೀತಿಯಾಗಿ ಈಗ ಮದುವೆ ಮಟ್ಟಕ್ಕೆ ಹೋಗಿದೆ. ಪ್ರೇಮಿಗಳು ಮದುವೆಯಾಗುವುದರಲ್ಲಿ ತಪ್ಪೇನು ಅಂತ ನೀವು ಕೇಳಬಹುದು. ಅವರು ಜಗತ್ತಿಗೆ ಪ್ರೇಮಿಗಳೇ ಆದರೂ ಕೂಡ ಸಂಬಂಧದಲ್ಲಿ ಚಿಕ್ಕಪ್ಪ ಮಗಳು ಆಗಬೇಕು.
ಇದನ್ನೂ ಓದಿ: ಬರೋಬ್ಬರಿ 65 ಲಕ್ಷ ವಿದ್ಯಾರ್ಥಿಗಳು ಫೇಲ್.. ಶಿಕ್ಷಣ ಇಲಾಖೆಯಿಂದ ಶಾಕಿಂಗ್ ಮಾಹಿತಿ ಬಯಲು; ಏನದು?
ಬೇಗುಸಾರೈದಲ್ಲಿ ನಡೆದಿರುವ ಈ ಒಂದು ಘಟನೆ ದೊಡ್ಡ ಸಂಚಲನ ಸೃಷ್ಟಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಶಿವಶಕ್ತಿ ಕುಮಾರ್ ದೀರ್ಘ ರಜೆಯಲ್ಲಿದ್ದರು. ಕಚೇರಿಯ ಕಡೆ ಮುಖ ಕೂಡ ಹಾಕಿ ನೋಡಿರಲಿಲ್ಲ. ಕೊನೆಗೆ ಒಮ್ಮೆ ಪ್ರತ್ಯಕ್ಷವಾಗಿದ್ದು ತಮ್ಮ ಪ್ರೇಮಿಕೆ ಸಜಲ್ ಸಿಂಧು ಜೊತೆ ಒಂದು ವಿಡಿಯೋದಲ್ಲಿ. ವಿಡಿಯೋದಲ್ಲಿ ಸಿಂಧು ಹೇಳವ ಪ್ರಕಾರ ನಾವಿಬ್ಬರೂ ಪ್ರೀತಿಸಿದ್ದೇವೆ, ಪ್ರೀತಿಸಿ ಮದುವೆಯಾಗಿದ್ದೇವೆ ಇದಕ್ಕೆ ನಮ್ಮ ಕುಟುಂಬದ ವಿರೋಧವಿದೆ. ನಾವು ಪ್ರೀತಿಸಿದ್ದೇವೆ ಹೊರತು ಯಾವುದೇ ಕ್ರೈಂ ಮಾಡಿಲ್ಲ ಎಂದು ತಮ್ಮ ಸಂಬಂಧಕ್ಕೆ ನೈತಿಕತೆಯ ಮುದ್ರೆ ಒತ್ತಿದ್ದಾಳೆ.
ಇದನ್ನೂ ಓದಿ: ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವೇದ ಮಂತ್ರ ಘೋಷ; ರಾಕೇಶ್ ಭಟ್ ಯಾರು? ಹಿನ್ನೆಲೆ ಏನು? VIDEO
ತಮ್ಮ ಸಂಬಂಧವನ್ನು ಸಮರ್ಥಿಸಿಕೊಂಡ ಜೋಡಿಗಳು
ವಿಡಿಯೋವೊಂದರಲ್ಲಿ ಮಾತನಾಡಿದ ಸಜಲ್ ಸಿಂಧು, ಪ್ರೀತಿಯಲ್ಲಿ ಬೀಳುವುದು ನಮ್ಮ ವೈಯಕ್ತಿಕ ಆಯ್ಕೆ. ಇದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಂಬಂಧವನ್ನು ಅಂತ್ಯಗೊಳಿಸಲು ನಮ್ಮ ಕುಟುಂಬದವರು ಕಾನೂನಿನ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆದ್ರೆ ನಮಗೆ ಸಂವಿಧಾನದಲ್ಲಿ ಈ ರೀತಿಯ ಒಂದು ಮದುವೆಯಾಗಲಿಕ್ಕೆ ಅವಕಾಶವಿದೆ ಎಂದೆಲ್ಲಾ ಹೇಳಿದ್ದಾಳೆ
ಇದನ್ನೂ ಓದಿ: ದಳಪತಿ ವಿಜಯ್ ಪಕ್ಷದ ಫ್ಲ್ಯಾಗ್ನಲ್ಲಿರೋ ಹೂವು ಯಾವುದು.. ಇದರ ಮಹತ್ವ, ಇತಿಹಾಸ ಏನ್ ಹೇಳುತ್ತೆ?
बेगूसराय -डिप्टी कमिश्नर ने भतीजी संग रचाई शादी,केस हुआ तो बोली लड़की प्यार किया, कोई गुनाह नहीं#Bihar #Biharnews pic.twitter.com/Bb1WF0Vi9Z
— FirstBiharJharkhand (@firstbiharnews) August 22, 2024
ಚಿಕ್ಕಪ್ಪ- ಮಗಳದು 10 ವರ್ಷದ ಲವ್ ಸ್ಟೋರಿ
ಸಜಲ್ ಸಿಂಧು ವಿಡಿಯೋದಲ್ಲಿ ಹೇಳಿರುವ ಪ್ರಕಾರ ಅವರದು ಹತ್ತು ವರ್ಷದಿಂದ ನಡೆದು ಬಂದಿರುವ ಲವ್ ಸ್ಟೋರಿ. 2015ರಲ್ಲಿ ಅವಳು ಬನಾರಸ್ ಹಿಂದೂ ಕಾಲೇಜಿನಲ್ಲಿ ಓದುತ್ತಿರುವಾಗ ಅಲ್ಲಿ ಸ್ನಾತಕೋತ್ತರ ಪದವಿ ಓದಲು ಶಿವಶಕ್ತಿ ಬರುತ್ತಾನೆ. ಇಬ್ಬರ ನಡುವೆ ಬೆಳೆದ ಸಲುಗೆ ಸಂಬಂಧಕ್ಕೆ ಬೇರೆಯದ್ದೇ ತಿರುವನ್ನು ನೀಡುತ್ತದೆ. ಸಲುಗೆಯಲ್ಲಿ ಪ್ರೇಮಾಂಕುರವಾಗಿ ಅದು ಮದುವೆಯಾಗುವ ಮಟ್ಟಕ್ಕೂ ಬಂದು ನಿಲ್ಲುತ್ತದೆ. ಆದ್ರೆ ಎರಡು ಕುಟುಂಬಗಳು ಇದನ್ನು ಒಪ್ಪುವುದಿಲ್ಲ.
ವರಸೆಯಲ್ಲಿ ಚಿಕ್ಕಪ್ಪ ಮಗಳು ಆಗಬೇಕಾದವರು ಹೇಗೆ ಗಂಡ ಹೆಂಡತಿಯಾಗುತ್ತಾರೆ ಎಂದು ವಿರೋಧ ವ್ಯಕ್ತಪಡಿಸುತ್ತಾರೆ. ಇದೆಲ್ಲದರ ಆಚೆಗೂ ಸಜಲ್ ಸಿಂಧು ನಮ್ಮದು ಪವಿತ್ರ ಪ್ರೇಮ, ಇದು ಯಾರೂ ಪ್ರಶ್ನಿಸುವಂತಿಲ್ಲ, ಸಂವಿಧಾನ ನಮಗೆ ಒಟ್ಟಿಗೆ ಬದುಕುವ ಹಕ್ಕು ಕೊಟ್ಟಿದೆ ಎಂದು ಸಮರ್ಥನೆ ನೀಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ