Advertisment

ನಗುನಗುತ್ತಾ ಸಾಯುವ ದುಸ್ಸಾಹಸ.. ಕಂಟೋನ್ಮೆಂಟ್​ ಸಿಇಓ ಆನಂದ ಸಾವಿನ ಕಾರಣವೇ ವಿಚಿತ್ರ; ಏನದು?

author-image
Veena Gangani
Updated On
ನಗುನಗುತ್ತಾ ಸಾಯುವ ದುಸ್ಸಾಹಸ.. ಕಂಟೋನ್ಮೆಂಟ್​ ಸಿಇಓ ಆನಂದ ಸಾವಿನ ಕಾರಣವೇ ವಿಚಿತ್ರ; ಏನದು?
Advertisment
  • ಸಾಯೋ ಮುಂಚೆ ಆ ಅಧಿಕಾರಿ ಮೊಬೈಲ್​ನಲ್ಲಿ ಹುಡುಕಿದ್ದೇನು?
  • ಸರ್ಕಾರಿ ಅಧಿಕಾರಿ ಇದ್ದಕ್ಕಿದ್ದಂತೆ ಸೂಸೈಡ್​ ಮಾಡಿಕೊಂಡಿದ್ದೇಕೆ?
  • ಮೊಬೈಲ್, ಲ್ಯಾಪ್​ಟ್ಯಾಪ್ ಎಲ್ಲವನ್ನು ವಶಪಡಿಸಿಕೊಂಡ ಪೊಲೀಸ್​

ಬದುಕಿನಲ್ಲಿ ಸಂತೋಷವಾಗಿರಬೇಕು ಅಂತ ಎಲ್ಲರೂ ಬಯಸ್ತಾರೆ. ಆದ್ರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ಸಂತೋಷವಾಗಿ ಸಾಯೋದು ಹೇಗೆ ಅಂತ ಪ್ರಯತ್ನ ಪಟ್ಟಿದ್ದಾರೆ. ಪ್ರಯತ್ನ ಅಲ್ಲ ಸಂತೋಷವಾಗಿ ಸಾಯೋದೇಗೆ ಅಂತ ತಿಳಿದುಕೊಂಡು ತನ್ನ ಜೀವಾನೇ ಬಿಟ್ಬಿಟ್ಟಿದ್ದಾರೆ.

Advertisment

ಕೆಲವೊಂದು ಬಾರಿ ಈ ಕಾರಣಗಳನ್ನ ಕೇಳಿದ್ರೆ ನಿಜಕ್ಕೂ ಏನಂಥಾ ಹೇಳಬೇಕೋ ಗೊತ್ತೇ ಆಗಲ್ಲ. ಯಾರಿಗೇ ಆಗಲಿ ಜೀವನದಲ್ಲಿ ಸಂತೋಷವಾಗಿರಬೇಕು ಅನ್ನೋದು ಆಸೆಯಾಗಿರುತ್ತೆ. ಆದ್ರೆ ಬೆಳಗಾವಿ ಕಂಟೋನ್ಮೆಂಟ್‌ ಸಿಇಓ ಆನಂದಗೆ ಸಂತೋಷವಾಗಿ ಸಾಯಬೇಕು ಅನ್ನೋ ವಿಚಿತ್ರ ಕೋರಿಕೆ ಇದ್ದಂತೆ ಕಾಣುತ್ತೆ. ಯಾಕಂದ್ರೆ ಸಾಯುವ ಮುಂಚೆಯೂ ಅವರು ಅಂಥದ್ದೇ ಯೋಚನೆ ಮಾಡಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ವಿಷ ಸೇವಿಸಿ ಸಾವಿಗೆ ಶರಣಾದ್ರಾ ಸರ್ಕಾರಿ ಆಫೀಸರ್?

ಬೆಳಗಾವಿ ಕಂಟೋನ್ಮೆಂಟ್​​ ಸಿಇಓ ಕೆ ಆನಂದ ತಮ್ಮ ಸರ್ಕಾರಿ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​ನೋಟ್​ ಸಿಕ್ಕಿದೆ ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನಿಸಿದರೂ ಈಗಾಗಲೇ ಇದನ್ನ ಆತ್ಮಹತ್ಯೆ ಎಂದು ಘೋಷಿಸಲು ಸಾಧ್ಯವಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಹಾಗಾದ್ರೆ ಆನಂದ್ ಸಾವಿಗೆ ಕಾರಣ ಏನು? ಕಂಟೋನ್ಮೆಂಟ್​ ಸಿಇಓ ಆಗಿದ್ದ ಆನಂದ ಇದ್ದಕ್ಕಿದ್ದಂತೆ ಸತ್ತಿದ್ದೇಕೆ ಅಂತ ನೋಡಿದ್ರೆ ಅಚ್ಚರಿ ವಿಷಯಗಳು ಚರ್ಚೆಗೆ ಬರ್ತಿದೆ. ಆನಂದ್ ತಮಿಳುನಾಡು 2015ನೇ ಬ್ಯಾಚಿನ ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವೀಸ್​ನ ಅಧಿಕಾರಿ.‌ ವಯಸ್ಸು 42, ಆದರೆ ಇನ್ನೂ ಮದುವೆಯಾಗಿರಲಿಲ್ಲ. ಕಳೆದ ಒಂದುವರೆ ವರ್ಷದಿಂದ ಬೆಳಗಾವಿ ದಂಡು ಮಂಡಲದ ಸಿಇಓ ಆಗಿ ಕೆಲಸ ಪ್ರಾರಂಭಿಸಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಈ ನಡುವೆ ಅದೇನು ಆಯ್ತೋ ಗೊತ್ತಿಲ್ಲ. ತಮ್ಮದೇ ಸರ್ಕಾರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂದ ಶವದ ಪಕ್ಕದಲ್ಲಿ ವಿಷದ ಬಾಟಲ್ ಸಿಕ್ಕಿದೆ ಎನ್ನಲಾಗಿದೆ. ಮೊಬೈಲ್, ಲ್ಯಾಪ್​ಟ್ಯಾಪ್ ಎಲ್ಲವನ್ನ ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಲಾಗಿದೆ.

publive-image

ಆನಂದ್ ಲ್ಯಾಪ್​ಟ್ಯಾಪ್​ ನೋಡಿದ ಪೊಲೀಸರಿಗೆ ಶಾಕ್!

ಸದ್ಯಕ್ಕೆ ಆತ್ಮಹತ್ಯೆ ಅಂತ ಹೇಳಲಾಗ್ತಿದೆ. ಮೊಬೈಲ್, ಲ್ಯಾಪ್​ಟ್ಯಾಪ್ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಮೊಬೈಲ್ ಹಾಗೂ ಲ್ಯಾಪ್​ಟ್ಯಾಪ್ ಚೆಕ್ ಮಾಡಿದಾಗ ಪೊಲೀಸರೇ ಬೆಚ್ಚಿಬೀಳುವಂತಹ ಅಂಶವೊಂದು ಬಹಿರಂಗವಾಗಿದೆಯಂತೆ. ಹೌದು, ಸಿಇಓ ಆನಂದ್ ಸಾಯುವ ಮುನ್ನ ತಮ್ಮ ಮೊಬೈಲ್​ನಲ್ಲಿ ನಗುನಗುತಾ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಅಂತ ಸರ್ಚ್ ಮಾಡಿದ್ದಾರಂತೆ. ಸಾಯುವ ಮುನ್ನ ಆನಂದ ತಮ್ಮ ಕೋಣೆಯಲ್ಲಿ ಬಹಳ ಹೊತ್ತಿನವರೆಗೂ ವಿಡಿಯೋಗಳ ಸರ್ಚ್ ಮಾಡಿದ್ದಾರೆ. ಸರ್ಚ್ ಮಾಡಿದ ವಿಡಿಯೋಗಳು ಯಾವುವು ಅಂತ ಪೋಲಿಸರು ನೋಡಿದಾಗ ಪೋಲಿಸರು ಸಹ ಶಾಕ್ ಆಗಿದ್ದಾರೆ. ಒಬ್ಬ ವ್ಯಕ್ತಿ ನಗುನಗುತಾ ಡ್ಯಾನ್ಸ್ ಮಾಡುತ್ತಾ, ವಿಷ ಸೇವಿಸಿ ಪ್ರಾಣ ಬಿಡುವ ವಿಡಿಯೋ ಸಹ ಅದರಲ್ಲಿದೆ. ಹೇಗೆ ಆನಂದದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವುದನ್ನ ಸರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಬೆಡ್ ರೂಂನಲ್ಲಿ ಇನ್ನೂ ಪ್ರಾರಂಭವಿದ್ದ ಮ್ಯೂಸಿಕ್ ಗಮನಿಸಿದ್ರೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಆತ್ಮಹತ್ಯೆಗೆ ಶರಣಾದ್ರಾ? ಎನ್ನುವ ಅನುಮಾನ ಮೂಡಿದೆ.

Advertisment

ಆನ್ ಲೈನ್ ಜೂಜಾಟದಲ್ಲಿ ಸಾಲ ಮಾಡಿಕೊಂಡಿದ್ದ ಅಧಿಕಾರಿ!

publive-image

ಉತ್ತಮವಾಗಿ ಕೆಲಸ ಮಾಡುತ್ತಿದ್ದ ಆನಂದ್ ಮೇಲೆ, 2021ರಲ್ಲಿ ದಂಡು ಮಂಡಲದಲ್ಲಿ ನಡೆದ ಕ್ಲಾರ್ಕ್, ಸ್ಟೇನೋಗ್ರಾಫರ್ ಸೇರಿ 19 ಜನರ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಆರೋಪ ಕೇಳಿ ಬಂದಿತ್ತು. ಅದೇ ಕಾರಣಕ್ಕಾಗಿ ನವೆಂಬರ್ 18ನೇ ತಾರೀಕಿನಂದು ದಂಡು ಮಂಡಲದ ಮೇಲೆ ಬೆಂಗಳೂರು, ದೆಹಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಸುದೀರ್ಘ ವಿಚಾರಣೆ ಮಾಡಿದ್ದರು. ಇದರಿಂದಲ್ಲೂ ಆನಂದ ಅವರು ತುಂಬಾ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.‌ ಈ ನಡುವೆ ಅದೇನಾಯಿತೋ ಗೊತ್ತಿಲ್ಲ. ಬೆಳಗಾವಿ ಕ್ಯಾಂಪ​ ಪ್ರದೇಶದಲ್ಲಿನ ನಿವಾಸದಿಂದ ಕಳೆದ ಎರಡು ದಿನಗಳಿಂದ ಆನಂದ ಹೊರಗೆ ಬಂದಿಲ್ಲ. ಹಾಗಾಗಿ ಮಾಹಿತಿ ಸಿಕ್ಕ ಕ್ಯಾಂಪ್ ಪೋಲಿಸರು ಬಾಗಿಲು ಒಡೆದು ಒಳ ನೋಡಿದ್ದಾಗ ಆನಂದ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇನ್ನೂ ಸಿಇಓ ಆನಂದ ಸಾವಿಗೆ ಆನ್ ಲೈನ್ ಜೂಜಾಟವೇ ಕಾರಣ ಎನ್ನುವುದು ಗೊತ್ತಾಗಿದೆ. ಸಾವಿಗೂ ಮುನ್ನ ಅಧಿಕಾರಿ ಆನಂದ ಡೆತ್ ನೋಟ್ ಬರೆದಿಟ್ಟಿದ್ದು, ಆನ್​ಲೈನ್ ಜೂಜಾಟದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಮತ್ತೊಂದು ಕಡೆ ಸಿಬಿಐ ಅಧಿಕಾರಿಗಳು ಬೆನ್ನುಬಿದ್ದಿದ್ದರು. ಇದರಿಂದಾಗಿಯೇ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಎಲ್ಲದಕ್ಕೂ ಸಾವು ಪರಿಹಾರವಲ್ಲ. ಅದರಲ್ಲೂ ಯ್ಯೂಟ್ಯೂಬ್​ ವಿಡಿಯೋಗಳು ಸಾವಿಗೆ ಪ್ರೇರಣೆಯಾಯ್ತಾ ಅನ್ನೋದನ್ನ ಊಹಿಸಿಕೊಂಡ್ರೆ ನಿಜಕ್ಕೂ ಯೋಚಿಸಬೇಕಾದ ಸಂಗತಿಯೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment