ಮೌಲ್ಯದ ಡೈಮಂಡ್ ಗಣಪತಿಯನ್ನು ಪ್ರತಿಷ್ಠಾಪನೆ ಮಾಡೋದೆಲ್ಲಿ?
ಹುಬ್ಬಳ್ಳಿಯಲ್ಲಿ ರೆಡಿಯಾಗಿ ಬೆಂಗಳೂರಿನ ಈ ಏರಿಯಾಕ್ಕೆ ರವಾನೆ
ಎಷ್ಟು ಸಾವಿರ ಅಮೆರಿಕನ್ ಡೈಮಂಡ್- ನವರತ್ನದ ಹರಳು ಬಳಸಿದ್ದಾರೆ
ಬೆಳಗಾವಿ: ಬೆಂಗಳೂರು ಮೂಲದ ಸ್ವಸ್ತಿಕ ಯುವಕರ ಸಂಘದ 12 ಲಕ್ಷ ರೂಪಾಯಿ ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ವಿನಾಯಕ ಮೂರ್ತಿಯನ್ನು ಹುಬ್ಬಳ್ಳಿ ನಗರದಲ್ಲಿ ತಯಾರಿಸಲಾಗಿದೆ. ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್ ಹಾಗೂ ನವರತ್ನದ ಹರಳುಗಳನ್ನು ಬಳಸಿ ಗಣಪತಿಯನ್ನು ಸುಂದರವಾಗಿ ರೆಡಿ ಮಾಡಲಾಗಿದೆ.
ಬೆಂಗಳೂರಿನ ರಾಜಾಜಿನಗರದ 2ನೇ ಹಂತದ ಮಿಲ್ಕ್ ಕಾಲೋನಿಯ 5ನೇ ಮುಖ್ಯ ರಸ್ತೆಯಲ್ಲಿ ನಾಳೆ ಸ್ವಸ್ತಿಕ ಯುವಕರ ಸಂಘವು ಈ ಡೈಮಂಡ್ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಿದೆ. ಈ ಸಂಘವು ಹಲವು ವರ್ಷಗಳಿಂದ ನಗರದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತ ಬರುತ್ತಿದೆ. 60 ಸಾವಿರ ಡೈಮಂಡ್, ನವರತ್ನದ ಹರಳುಗಳಿಂದ ತಯಾರಾಗಿರುವ ಈ ಗಣಪತಿ 5.7 ಅಡಿ ಎತ್ತರ ವಿದ್ದು, ಸುಮಾರು 150 ಕೆ.ಜಿ ತೂಕವಿದೆ. ಮುಖ ಮಾತ್ರ ಬಿಟ್ಟು ಗಣೇಶನ ಉಳಿದ ಭಾಗವನ್ನು ಡೈಮಂಡ್ ಹರಳು, ನವರತ್ನ ಹರಳುಗಳಿಂದ ಸೌಂದರ್ಯಯುತವಾಗಿ ಸಿದ್ಧ ಪಡಿಸಲಾಗಿದೆ.
ಹುಬ್ಬಳ್ಳಿ ನಗರದ ಬಮ್ಮಾಪುರದ ನಿವಾಸಿ ಕಲಾವಿದ ಮಹೇಶ ಮುರಗೋಡ ತಂಡದವರು ಈ ಗಣಪತಿಯನ್ನು ಅತ್ಯದ್ಭುತವಾಗಿ ಸಿದ್ಧ ಪಡಿಸಿದ್ದಾರೆ. ಈಗಾಗಲೇ ರೆಡಿಯಾಗಿರುವ ಗಣಪತಿ ಮೂರ್ತಿಯನ್ನು ಸಂಘದ ಯುವಕರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲ್ವೆ ಮೂಲಕ ತರುತ್ತಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ