newsfirstkannada.com

ಬರಿದಾಗುತ್ತಿದೆ ಕೃಷ್ಣಾ ನದಿ.. ಜೀವ ಕಳೆದುಕೊಳ್ಳುತ್ತಿವೆ ಜಲಚರಗಳು; ರಾಶಿ ರಾಶಿ ಮೀನುಗಳ ದಾರುಣ ಸಾವು

Share :

24-06-2023

    ಮೀನುಗಳು ಸಾವು ಹಿನ್ನೆಲೆಯಲ್ಲಿ ಜನರಿಗೆ ಆತಂಕ, ಭಯ

    ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ನದಿ ತೀರದ ಜನ

    ನೀರಿಲ್ಲದೇ ಕೃಷ್ಣಾ ನದಿಯಲ್ಲಿ ಸಾವನ್ನಪ್ಪಿರುವ ಮೀನುಗಳು

ಬೆಳಗಾವಿ: ರಾಜ್ಯದಲ್ಲಿ ಮಳೆಯ ಅಭಾವದಿಂದ ಕೃಷ್ಣಾ ನದಿ ಬರಿದಾಗುತ್ತಿರುವ ಕಾರಣ ರಾಶಿರಾಶಿ ಮೀನುಗಳು ನೀರಿಲ್ಲದೇ ಸತ್ತು ಹೋಗಿವೆ. ಮಳೆಯಿಲ್ಲದ ಕಾರಣ ನೀರಿನ ಸಮಸ್ಯೆ ತಲೆದೂರಿದ್ದು ಜಿಲ್ಲೆಯ ಕಾಗವಾಡ-ಅಥಣಿ ತಾಲೂಕಿನ ಜನರಿಗೂ ಸಂಕಷ್ಟ ಬಂದೊದಗಿದೆ.

ಮಹಾರಾಷ್ಟ್ರದಲ್ಲೂ ಮಳೆಯ ಅಭಾವ ಹೆಚ್ಚಾಗಿದ್ದರಿಂದ ಕೃಷ್ಣಾ ನದಿ ಸಂಪೂರ್ಣ ಬರಿದಾಗುತ್ತಿದೆ. ಹೀಗಾಗಿ ಕುಡಿಯುವ ನೀರಿಗೂ ಸಮಸ್ಯೆ ಬಂದಿದೆ. ಇಷ್ಟೇ ಅಲ್ಲದೇ ನದಿಯಲ್ಲಿ ನೀರು ಖಾಲಿ ಆಗುತ್ತಿರುವುದರಿಂದ ರಾಶಿರಾಶಿ ಮೀನುಗಳು ಸಾವನ್ನಪ್ಪಿ, ಕೊಳೆತ ಸ್ಥಿತಿಯಲ್ಲಿ ಬಿದ್ದಿವೆ.

ಇದರಿಂದ ಸುತ್ತಲಿನ ಪ್ರದೇಶದಲ್ಲಿ ಕೆಟ್ಟ ವಾಸನೆ ಹರಡುತ್ತಿದ್ದು ನದಿ ತೀರದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರಿದಾಗುತ್ತಿದೆ ಕೃಷ್ಣಾ ನದಿ.. ಜೀವ ಕಳೆದುಕೊಳ್ಳುತ್ತಿವೆ ಜಲಚರಗಳು; ರಾಶಿ ರಾಶಿ ಮೀನುಗಳ ದಾರುಣ ಸಾವು

https://newsfirstlive.com/wp-content/uploads/2023/06/BGM_FISH_DEAD.jpg

Load More