newsfirstkannada.com

ನೆಚ್ಚಿನ ಗುರುಗಳ ವರ್ಗಾವಣೆ.. ಶಿಕ್ಷಕನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

Share :

31-07-2023

    ಒಂದೇ ಶಾಲೆಯಲ್ಲಿ 18 ವರ್ಷ ಸೇವೆ ಸಲ್ಲಿಸಿದ್ದ ಶಿಕ್ಷಕ

    ಮಕ್ಕಳನ್ನ ತುಂಬಾ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ರು

    ಸದ್ಯ ಬೇರೆ ಶಾಲೆಗೆ ವರ್ಗಾವಣೆ ಮಾಡಿರುವ ಸರ್ಕಾರ..!

ಬೆಳಗಾವಿ: 18 ವರ್ಷಗಳ ಕಾಲ ಒಂದೇ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕನಿಗಾಗಿ ಮಕ್ಕಳು ಕಣ್ಣೀರು ಹಾಕಿ, ಹೂವಿನ ಸುರಿ ಮಳೆಗೈದು ಬೀಳ್ಕೊಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಅಳು ನೋಡಲಾಗದೇ ಶಿಕ್ಷಕ ಕೂಡ ಕಣ್ಣೀರು ಹಾಕಿದ್ದಾರೆ.

ಮಕ್ಕಳೊಂದಿಗೆ ಶಿಕ್ಷಕ ಮಹೇಶ್​

ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಬರುವ ಜಂಬಗಿ ಗ್ರಾಮದ ಪ್ರೌಢ ಶಾಲೆಯಲ್ಲಿ ಸತತ 18 ವರ್ಷಗಳಿಂದ ಶಿಕ್ಷಕ ಮಹೇಶ್​ ಜಾದವ್ ಸೇವೆ ಸಲ್ಲಿಸಿದ್ದರು. ಸದ್ಯ ಸರ್ಕಾರ ಶಿಕ್ಷಕ ಮಹೇಶ್ ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು.

ಈ ವೇಳೆ ಸಮಾರಂಭದಲ್ಲಿ ತಮ್ಮ ನೆಚ್ಚಿನ ಶಿಕ್ಷಕನನ್ನು ಬೀಳ್ಕೊಡುಬೇಕಾದ್ರೆ, ಶಾಲೆಯ ವಿದ್ಯಾರ್ಥಿಗಳೆಲ್ಲ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಕ್ಕಳನ್ನು ನೋಡಿ ದುಃಖ ತಡೆಯಲಾರದೇ ಶಿಕ್ಷಕ ಮಹೇಶ್ ಕೂಡ ಕಣ್ಣೀರು ಹಾಕಿದರು. ಕಾರ್ಯಕ್ರಮದಲ್ಲಿ ಶಿವಾಜಿಯ ಫೋಟೋವನ್ನು ಉಡುಗೊರೆಯಾಗಿ ನೀಡಲಾಯಿತು. ಶಿಕ್ಷಕ ತೆರಳಬೇಕಾದರೆ ಮಕ್ಕಳು ಹೂ ಮಳೆಗೈದು, ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಚ್ಚಿನ ಗುರುಗಳ ವರ್ಗಾವಣೆ.. ಶಿಕ್ಷಕನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

https://newsfirstlive.com/wp-content/uploads/2023/07/BGM_SCHOOL_TEACHER.jpg

Load More