newsfirstkannada.com

×

ಕೊಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ‘ಸುಣ್ಣದ ಡಬ್ಬಿ’; ಮಗನ ಕೊಲೆಗೆ ಅಪ್ಪನೇ ಕೊಟ್ಟಿದ್ದ ‘ಸುಪಾರಿ ಗುಟ್ಟು’ ರಟ್ಟು ಮಾಡಿದ ಬೆಳಗಾವಿ ಪೊಲೀಸ್..!

Share :

Published August 26, 2023 at 3:13pm

    ಬೈಲಹೊಂಗಲ ವ್ಯಕ್ತಿ ಕೊಲೆಗೆ ಸ್ಫೋಟಕ ಟ್ವಿಸ್ಟ್

    ತನಿಖೆ ವೇಳೆ ವ್ಯಕ್ತಿಯ ಜೇಬಲ್ಲಿ ಸಿಕ್ಕಿತ್ತು ಸುಳಿವು

    ಅಪ್ಪ ಮಗನ ಕೊಲೆಗೆ ಸುಪಾರಿ ಕೊಟ್ಟಿದ್ದೇಕೆ ಗೊತ್ತಾ?

ಕೊಲೆಗಾರ ಎಷ್ಟೇ ಚಾಣಾಕ್ಷತನದಿಂದ ಕೊಲೆ ಮಾಡಿ ಸಾಕ್ಷಿ ಸಿಗದಂತೆ ನಾಶ ಮಾಡಿದ್ದರೂ ಒಂದಲ್ಲ ಒಂದು ಸುಳಿವು ಬಿಟ್ಟಿರುತ್ತಾನೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕುಟರನಟ್ಟಿಯಲ್ಲಿ ನಡೆದಿದ್ದ ವ್ಯಕ್ತಿಯೋರ್ವನ ಕೊಲೆ ರಹಸ್ಯವನ್ನು ಒಂದು ಸಣ್ಣ ‘ಸುಣ್ಣದ ಡಬ್ಬಿ’ ಬಿಚ್ಚಿಟ್ಟಿದೆ!

ಅಪ್ಪನಿಂದಲೇ ಮಗನ ಕೊಲೆಗೆ ಸುಪಾರಿ

ಹೌದು, ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನಿವಾಸಿ ಸಂಗಮೇಶ್ ತಿಗಡಿ ಅನ್ನೋರನ್ನು ಆಗಸ್ಟ್ 20 ರಂದು ರಾತ್ರಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಮರುದಿನ ಬೆಳಗ್ಗೆ ಗ್ರಾಮಸ್ಥರು ಶವ ನೋಡಿ ಮುರಗೋಡ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಖಾಕಿ ಪಡೆ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದರು.

ಎಸ್ಪಿ ಸಂಜೀವ್ ಕುಮಾರ್ ಹೇಳಿದ್ದೇನು..?

ಕೊಲೆಯಾದ ವ್ಯಕ್ತಿ, ಅಂದು ಬೆಳಗ್ಗೆ ಮನೆಯಲ್ಲಿ ಕುಡಿದು ಗಲಾಟೆ ಮಾಡಿದ್ದ. ನಿತ್ಯವೂ ಮನೆಯಲ್ಲಿ ಇದೇ ರೀತಿ ಘಟನೆಗಳು ನಡೆಯುತ್ತಿರೋದ್ರಿಂದ ಆತನ ತಂದೆ, ಮನೆಯ ಕೆಲಸದವನಿಗೆ ಫೋನ್ ಮಾಡಿ ಸುಪಾರಿ ನೀಡಿದ್ದ. ಕೊಲೆ ಮಾಡುವುದಕ್ಕೂ ಮೊದಲು ಆತನನ್ನು ಮನೆಯಿಂದ ಬೈಕ್​ ಮೇಲೆ ಕೂರಿಸಿಕೊಂಡು ಹೋಗಿದ್ದ. ಅಲ್ಲಿ ಮತ್ತೊಬ್ಬ ಸ್ನೇಹಿತನ ಜೊತೆ ಸೇರಿ ಬಾರ್​ಗೆ ಹೋಗಿ ಕುಡಿದಿದ್ದಾರೆ.

ಬೆಳಗಾವಿ ಎಸ್​ಪಿ
ಬೆಳಗಾವಿ ಎಸ್​ಪಿ

ಅದಾದ ಬಳಿಕ ಊರೆಲ್ಲ ಸುತ್ತಿ ಆತನನ್ನು ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಮ್ಮ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದರು. ಈ ವೇಳೆ ಕೊಲೆಯಾದ ಸಂಗಮೇಶ್ ತಿಗಡಿ ಜೇಬಿನಲ್ಲಿ ಒಂದು ಸುಣ್ಣದ ಡಬ್ಬಿ ಇತ್ತು. ಅದರಲ್ಲಿ ಒಂದು ಫೋನ್ ನಂಬರ್ ಇತ್ತು. ಈ ಫೋನ್ ನಂಬರ್ ಆಧರಿಸಿ ವಿಚಾರಣೆ ನಡೆಸಿದಾಗ ಕೊಲೆಗೆ ಅಪ್ಪನೇ ಸುಪಾರಿ ಕೊಟ್ಟಿರೋದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಮಾಡಿದ ಆರೋಪಿ ಇಬ್ಬರು ಒಟ್ಟಿಗೆ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಕೊಲೆಯಾದವನಿಗೆ ಫೋನ್ ನಂಬರ್ ನೆನಪಿರುತ್ತಿರಲಿಲ್ಲ. ಹೀಗಾಗಿ ಕೊಲೆ ಮಾಡಿದ ವ್ಯಕ್ತಿಯ ನಂಬರ್ ಸುಣ್ಣದ ಡಬ್ಬಿಯಲ್ಲಿ ಇಟ್ಕೊಂಡಿರುತ್ತಿದ್ದ ಎಂದು ಗೊತ್ತಾಗಿದೆ.  ಆರೋಪಿಗಳಾದ ಮಂಜುನಾಥ್, ಆತನ ಸ್ನೇಹಿತ ಅಡಿವೆಪ್ಪ ಬೋಳೆತ್ತಿನ್​​ನನ್ನು ಬಂಧಿಸಿದ್ದೇವೆ ಎಂದು ಎಸ್​ಪಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳು
ಆರೋಪಿಗಳು

ವಿಚಾರಣೆ ವೇಳೆ ಇಬ್ಬರು ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಕೊಲೆಯಾದ ಸಂಗಮೇಶ್ ತಿಗಡಿ ತಂದೆ ಮಾರುತ್ತೆಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕೊಲೆ ಮಾಡಲು ಅಪ್ಪನೇ ಸುಪಾರಿ ಕೊಟ್ಟಿರೋದನ್ನು ಕೆಲಯಾದ ವ್ಯಕ್ತಿಯ ಸಹೋದರ ಮಹೇಶ್ ನಿರಾಕರಿಸಿದ್ದಾರೆ. ಮಂಜುನಾಥ್ ನನ್ನ ಸಹೋದರನಿಗೆ ಚೆನ್ನಾಗಿ ಕುಡಿಸಿ, ಗಲಾಟೆ ಮಾಡಿ ಸ್ನೇಹಿತನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ತಮ್ಮ ತಂದೆಗೆ ಈ ಘಟನೆ ನಡೆದ ಬಳಿಕ ದೇಹದಲ್ಲಿ ಶುಗರ್ ಲೇವಲ್ ಕಮ್ಮಿಯಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ‘ಸುಣ್ಣದ ಡಬ್ಬಿ’; ಮಗನ ಕೊಲೆಗೆ ಅಪ್ಪನೇ ಕೊಟ್ಟಿದ್ದ ‘ಸುಪಾರಿ ಗುಟ್ಟು’ ರಟ್ಟು ಮಾಡಿದ ಬೆಳಗಾವಿ ಪೊಲೀಸ್..!

https://newsfirstlive.com/wp-content/uploads/2023/08/BGM_MURDER.jpg

Load More