ಬೆಳಗಾವಿ ಹಸ್ತಕ್ಷೇಪದ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ್ರಾ?
ಜಾರಕಿಹೊಳಿ ಕುಟುಂಬದ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಪೈಪೋಟಿ..!
ಸತೀಶ್ ಜಾರಕಿಹೊಳಿ ಜೊತೆ ಸಿಎಂ ಸಿದ್ದರಾಮಯ್ಯ ರಹಸ್ಯ ಚರ್ಚೆ
ಬೆಳಗಾವಿ ಬೆಂಕಿ ನಂದಿ ಹೋಗುವ ಲಕ್ಷಣಗಳು ಕಾಣಿಸ್ತಿಲ್ಲ. ಬೆಳಗಾವಿ ಲೋಕಸಭಾ ಟಿಕೆಟ್ ಪಾಲಿಟಿಕ್ಸ್ ಮತ್ತಷ್ಟು ಕಗ್ಗಂಟಾಗಿದೆ. ಇದೇ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊಂದಿದ್ದಾರೆ. ಮೊನ್ನೆಯಷ್ಟೇ ಸತೀಶ್ ನಿವಾಸಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದರು. ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ಸತೀಶ್ ಜೊತೆ ರಹಸ್ಯ ಸಭೆ ನಡೆಸಿದ್ದಾರೆ.
ವಿಧಾನಸಭಾ ಕದನದಲ್ಲಿ 135 ಸ್ಥಾನ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್ನಲ್ಲಿ ಅಸಮಾಧಾನದ ಕಿಚ್ಚು ಹೆಚ್ಚುತ್ತಲೇ ಇದೆ. ಸತೀಶ್ ಮುನಿಸಿನಿಂದ ಬೆಳಗಾವಿ ಕಿಡಿ ಹಾರುತ್ತಿದ್ದು, ಸರ್ಕಾರಕ್ಕೂ ಗಂಡಾಂತರ ಬಂದಿದೆ. ಈ ಗಂಡಾಂತರ ಸರಿಪಡಿಸಲು ಇನ್ನಿಲ್ಲದ ಹರಸಾಹಸ ಆರಂಭ ಆಗಿದೆ. ಬೆಳಗಾವಿಯ ಸಾಹುಕಾರ ಮನೆಗೆ ತೆರಳಿದ ಸಾಲು ಸಾಲು ನಾಯಕರು ಸಮಾಧಾನ ಪಡಿಸಲು ಯತ್ನಿಸ್ತಿದ್ದಾರೆ. ಈ ಬೆನ್ನಲ್ಲೆ ಸಿಎಂ ಸಹ ತಮ್ಮ ನಿವಾಸಕ್ಕೆ ಕರೆದು ಚರ್ಚಿಸಿರೋದು ಕುತೂಹಲ ಕೆರಳಿಸಿದೆ.
ಹೌದು ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ತೆರಳಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಸಿದ್ದರಾಮಯ್ಯ ಜೊತೆ ರಹಸ್ಯ ಸಭೆ ನಡೆಸಿದ್ದಾರೆ. ಕೆಲ ವಿಚಾರಗಳು ಸಿಎಂ ಗಮನಕ್ಕೆ ತಂದಿರುವ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯಲ್ಲಿನ ಹಸ್ತಕ್ಷೇಪದ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಸಾಹುಕಾರ್ ಜೊತೆ ಸಿಎಂ ಸಭೆ!
ಡಿಕೆಶಿ ಪರ ಸಂಧಾನಕ್ಕೆ ಬಂದ್ರಾ ಸಂಸದ ಸುರೇಶ್?
ಸಿಎಂ ಭೇಟಿ ಬೆನ್ನಲ್ಲೆ ಸಚಿವ ಸತೀಶ್ ನಿವಾಸಕ್ಕೆ ಡಿಸಿಎಂ ಡಿಕೆಶಿ ಸಹೋದರ ಸಂಸದ ಸುರೇಶ್ ಭೇಟಿ ನೀಡಿದ್ದಾರೆ. ಶಿವಾನಂದ ವೃತ್ತದ ಸರ್ಕಾರಿ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣ ಆಗಿದೆ. ಇದೇ ವೇಳೆ ಮಾತ್ನಾಡಿದ ಸಂಸದ ಡಿ.ಕೆ ಸುರೇಶ್, ಅವರು ನಮ್ಮ ಕಾರ್ಯಾಧ್ಯಕ್ಷರು. ಮಹತ್ತರ ಖಾತೆ ಹೊಂದಿದ್ದಾರೆ. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೇಳಲು ಬಂದಿದ್ದೆ ಅಂತ ಕಾರಣ ಕೊಟ್ಟಿದ್ದಾರೆ. ಇನ್ನು, ಸಿಎಂ ಸ್ಥಾನದ ಮೇಲೆ ಸತೀಶ್ ಪಟ್ಟ ಆಸೆಯಲ್ಲಿ ತಪ್ಪೇನಿಲ್ಲ ಅಂತ ಹೇಳಿದ್ದಾರೆ.
ಒಂದೆಡೆ ಆಪರೇಷನ್ ಕಮಲ ಚಾಲ್ತಿಯಲ್ಲಿದೆ. ಮತ್ತೊಂದೆಡೆ ಬೆಳಗಾವಿ ಸಮಸ್ಯೆ ಉಲ್ಬಣಿಸ್ತಿದೆ. ಜಾರಕಿಹೊಳಿ ಕುಟುಂಬದ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಪೈಪೋಟಿ ನಡೆಸ್ತಿದ್ದಾರೆ. ಇದರಲ್ಲಿ ಡಿಸಿಎಂ ಹಸ್ತಕ್ಷೇಪದಿಂದ ಬೆಂಕಿಗೆ ತುಪ್ಪ ಸುರಿದಂತಾಗ್ತಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಏರಿಳಿತಕ್ಕೆ ಕಾರಣವಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ