newsfirstkannada.com

ಹೊಂಡದಲ್ಲಿ ಜೋಡಿ ಶವ ಪತ್ತೆ; ಈ ಇಬ್ಬರ ಸಾವಿಗೆ ಕಾರಣ ಕೇಳಿದ್ರೆ ಕರುಳು ಚುರುಕ್​​ ಅನ್ನುತ್ತೆ!

Share :

16-08-2023

    ಅಮಾವಾಸ್ಯೆಯ ದಿನದಂದು ನಡೆದಿತ್ತು ಘೋರ ದುರಂತ

    ಈ ಜೋಡಿ ಶವಗಳಿಗೆ ಕಾರಣವಾಯ್ತಾ ಮಾನಸಿಕ ಖಿನ್ನತೆ?

    ಸ್ವಂತದವರನ್ನ ಕಳೆದುಕೊಂಡ್ರೆ ಭೂಮಿ ಕುಸಿದಂಗೆ ಆಗುತ್ತೆ

ಸಂಬಂಧಗಳು ಅಂದ್ರೇನೆ ಹೀಗೆ ತೀರ ಪ್ರೀತಿಸುವುದು, ತೀರ ಹಚ್ಚಿಕೊಳ್ಳುವುದು! ನಾವು ಹಚ್ಚಿಕೊಂಡವರು ಅಕಾಲಿಕವಾಗಿ‌ ನಮ್ಮೊಂದಿಗೆ ಇಲ್ಲ ಎಂದಾಗ ಭೂಮಿ ಕುಸಿದ ಅನುಭವ ಆಗುತ್ತದೆ. ಹೆಂಡತಿಯ ನೆನಪಲ್ಲಿ ಗಂಡ ಮತ್ತು ತಾಯಿಯ ನೆನಪಲ್ಲಿ ಮಗಳು ಸಾವನ್ನಪ್ಪಿರುವ ಘೋರ ಘಟನೆ ಅಮಾವಾಸ್ಯೆಯ ದಿನ ನಡೆದಿದೆ.

ತಾಯಿ ಕಳೆದುಕೊಂಡು ಹೊಂಡಕ್ಕೆ ಹಾರಿದ ಮಗಳು

ಶ್ರಾವಣ ಸೋಮವಾರ ಅಮಾವಾಸ್ಯೆ ಎಂದು ಭಕ್ತರು ದೇವಸ್ಥಾನಗಳಿಗೆ ಬಂದು ಪೂಜೆ ಮಾಡುವುದು ಕಾಮನ್. ಆದರೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ಶಾಕ್​ಗೆ ಒಳಗಾಗಿದ್ದರು. ಕಪಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದಲ್ಲಿ 2 ಮೃತ ದೇಹಗಳು ತೇಲುತ್ತಿದ್ದವು. ಮೊದಲಿಗೆ ಇದು ಇಬ್ಬರು ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಆದರೆ ಬೇರೆ ಬೇರೆ ಕಾರಣಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಶಹಾಪುರದ ದಾನೆ ಗಲ್ಲಿಯ ಚಿತ್ರಲೇಖಾ ಸಫಾರ್, ತನ್ನ ತಾಯಿಯನ್ನು ಕಳೆದುಕೊಂಡಿದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೆಂಡತಿ ಸಾವಿನಿಂದ ಖಿನ್ನತೆ..!

ಇನ್ನು ಬೆಳಗಾವಿಯ ಕಾಂಗಲೇ ಗಲ್ಲಿಯ ನಿವಾಸಿ ವಿಜಯ್ ಪವಾರ್ ತನ್ನ ಹೆಂಡತಿ ಸಾವನ್ನಪ್ಪಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಮನೆ ಬಿಟ್ಟು ಹೋಗಿದ್ದ ಅವರು ಬೆಳಗ್ಗೆ ಕಪಿಲೇಶ್ವರ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತನಿಗೆ ಪುತ್ರ, ಪುತ್ರಿ ಇದ್ದಾರೆ. ಇನ್ನು ತನ್ನವರ ನೆನಪಿನಲ್ಲಿ ಎರಡು ಮುಗ್ದ ಜೀವಗಳು ಪ್ರಾಣ ಬಿಟ್ಟಿರುವುದು ನಿಜಕ್ಕೂ ದುರಂತವೇ ಸರಿ. ಹೊಂಡಕ್ಕೆ ಬಿದ್ದು ಮೃತಪಟ್ಟವರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಂಡದಲ್ಲಿ ಜೋಡಿ ಶವ ಪತ್ತೆ; ಈ ಇಬ್ಬರ ಸಾವಿಗೆ ಕಾರಣ ಕೇಳಿದ್ರೆ ಕರುಳು ಚುರುಕ್​​ ಅನ್ನುತ್ತೆ!

https://newsfirstlive.com/wp-content/uploads/2023/08/BGM_2_DIE.jpg

Load More