Advertisment

ಬಳ್ಳಾರಿ, ಚೀನಾ ಮತ್ತು ಒಲಿಂಪಿಕ್ಸ್​.. ಡ್ರ್ಯಾಗನ್​ ರಾಷ್ಟ್ರಕ್ಕೂ ಗಡಿನಾಡ ಜಿಲ್ಲೆಗೂ ಹೀಗೊಂದು ಸಂಬಂಧ

author-image
AS Harshith
Updated On
ಬಳ್ಳಾರಿ, ಚೀನಾ ಮತ್ತು ಒಲಿಂಪಿಕ್ಸ್​.. ಡ್ರ್ಯಾಗನ್​ ರಾಷ್ಟ್ರಕ್ಕೂ ಗಡಿನಾಡ ಜಿಲ್ಲೆಗೂ ಹೀಗೊಂದು ಸಂಬಂಧ
Advertisment
  • ಶೇ.90ರಷ್ಟು ಕಬ್ಬಿಣದ ಅದಿರು ಕರ್ನಾಟಕದ​​ ಬಳ್ಳಾರಿಯಿಂದ ರಫ್ತಾಗುತ್ತಿದೆ
  • 2011ರಲ್ಲಿ ಬಳ್ಳಾರಿಯ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್​ ನಿಷೇಧಿಸಿತು
  • ಕರ್ನಾಟಕದ ಬಳ್ಳಾರಿಯೊಂದರಲ್ಲಿ 10,598 ಹೆಕ್ಟೇರ್​​ ಪ್ರದೇಶಗಳಲ್ಲಿ 148 ಗಣಿಗಳಿವೆ

ಕರ್ನಾಟಕದ ಬಳ್ಳಾರಿ ಗಣಿ-ದನಿಗಳ ನಾಡು ಎಂದೇ ಪ್ರಸಿದ್ಧಿ. ಜೀನ್ಸ್​ ಉತ್ಪಾದನೆ ವಿಚಾರದಲ್ಲಿ ಬಳ್ಳಾರಿ ಹೆಸರುವಾಸಿಯಾಗಿರೋದು ಒಂದೆಡೆಯಾದರೆ, ಮತ್ತೊಂದೆಡೆ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಬಳ್ಳಾರಿ ಭಾರೀ ಫೇಮಸ್ಸು. ಆದ್ರೆ ಬಳ್ಳಾರಿಯ ನಂಟು ಚೀನಾದವರೆಗೂ ಹಬ್ಬಿದ ಕತೆ ನಿಮಗೆ ಗೊತ್ತಾ? ಹಾಗಿದ್ರೆ ಈ ಸ್ಟೋರಿ ಓದಿ.

Advertisment

ಚೀನಾ ಬೀಜಿಂಗ್​ ಒಲಿಂಪಿಕ್ಸ್​ ಸಮಯದಲ್ಲಿ ಕಬ್ಬಿಣ ಅವಶ್ಯಕತೆ ಹೆಚ್ಚಾಯ್ತು. ಹೀಗಾಗಿ ಅದಿರಿಗೆ ಬೇಡಿಕೆ ಜಾಸ್ತಿಯಾಗಿತ್ತು. ಬಳ್ಳಾರಿಯಲ್ಲಿ ಸಿಗುವ ಕಬ್ಬಿಣದ ಅದಿರಿಗೆ ಬೇಡಿಕೆ ಹೆಚ್ಚಾಯ್ತು. 2005-06ರಲ್ಲಿ ಬಳ್ಳಾರಿಯಲ್ಲಿ ಕಬ್ಬಿಣದ ಗಣಿಗಾರಿಕೆಗೆ ಮಹತ್ವ ಜಾಸ್ತಿಯಾಯ್ತು. ಮಾತ್ರವಲ್ಲದೇ ಖಾಸಗಿ ಕಂಪನಿಗಳೂ ಗಣಿಗಾರಿಕೆ ಉದ್ಯಮದ ಭಾಗವಾದವು.

publive-image

ಅಚ್ಚರಿಯ ವಿಚಾರವೆಂದರೆ, ಶೇ.90ರಷ್ಟು ಕಬ್ಬಿಣದ ಅದಿರು ಕರ್ನಾಟಕದ​​ ಬಳ್ಳಾರಿಯಿಂದ ರಫ್ತಾಗುತ್ತಿದೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ಮತ್ತೊಂದೆಡೆ ಗಣಿಗಾರಿಕೆಯ ನಡುವೆ ಅಕ್ರಮ ಗಣಿಗಾರಿಕೆಯ ಸಂಖ್ಯೆ ಹೆಚ್ಚಾಗತೊಡಗಿತು. ಇದು ರಾಜ್ಯಕ್ಕೆ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿತು.

ಇದನ್ನೂ ಓದಿ: ವಾಟ್ಸ್​ಆ್ಯಪ್ ಪರಿಚಯಿಸಲು ಮುಂದಾಗಿದೆ ಹೊಸ ಫೀಚರ್​​! ಸಖತ್ತಾಗಿದೆ, ಇನ್ಮುಂದೆ ರಿಪ್ಲೈ ಮತ್ತಷ್ಟು ಸುಲಭ

Advertisment

2011ರಲ್ಲಿ ಬಳ್ಳಾರಿಯ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್​ ಗಣನೀಯವಾಗಿ ಪರಿಶೀಲಿಸಿ ನಿಷೇಧವನ್ನು ಹೇರಿತು. ಆದರೆ ಇತ್ತೀಚೆಗೆ ಈ ನಿಷೇಧವನ್ನು ಸಡಿಲಗೊಳಿಸಿದೆ. ಗಣಿಗಾರಿಕೆಯ ಪರಿಣಾಮವಾಗಿ ಹಚ್ಚಹಸುರಾಗಿದ್ದ ಬಳ್ಳಾರಿ ಕೆಂಪು-ಧೂಳಿನಿಂದ ಆವೃತವಾಯಿತು. ವನ್ಯಜೀವಿಗಳಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಸಂಕಷ್ಟ ಎದುರಾಯಿತು. ಬರಡು ಭೂಮಿಯಗಿ ರೂಪುಗೊಂಡಿತು.

publive-image

ಇದನ್ನೂ ಓದಿ: ಹೊಸ ಅಡ್ವೆಂಚರ್ ಮಾದರಿಯನ್ನು ಪರಿಚಯಿಸಿದ ಜಾವ ಯೆಜ್ಡಿ! ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

2011ರಲ್ಲಿ ಲೋಕಾಯುಕ್ತ ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಸಿದ್ಧಪಡಿಸಿ ಪ್ರಕಟಿಸಿತು. ಅವನತಿಯನ್ನು ತಡೆಯುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿತು. ಕೊನೆಗೆ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶಿಸಿ ಬಳ್ಳಾರಿಯ ಗಣಿಗಾರಿಕೆ ಮತ್ತು ಅದಿರು ರಫ್ತನ್ನು ನಿಷೇಧಿಸಿತು. ಬಳ್ಳಾರಿ ಗಣಿಗಾರಿಕೆಯಿಂದ ಚೀನಾದವರೆಗೆ ತಲುಪಿದ್ದು ಎಷ್ಟು ಸತ್ಯವೋ ಜಿಲ್ಲೆಗೆ ಇದರಿಂದ ಆಗಿರುವ ಆಳವಾದ ಗಾಯ ಮಾಸಲು ಕಷ್ಟಪಡುತ್ತಿರೋದು ಅಷ್ಟೇ ಸತ್ಯ.

Advertisment

ಇದನ್ನೂ ಓದಿ: ವಯನಾಡು ಭೂಕುಸಿತ ಪ್ರದೇಶದಲ್ಲಿ ಕಳ್ಳರ ಕಾಟ! ನೊಂದ ಜೀವಗಳಿಗೆ ಶುರುವಾಗಿದೆ ಮತ್ತೊಂದು ಟೆನ್ಶನ್​

ಮತ್ತೊಂದು ಸಂಗತಿ ಎಂದರೆ ಕರ್ನಾಟಕ ರಾಜ್ಯ ಖನಿಜಗಳು ಮತ್ತು ಅದಿರಿನಿಂದ ಸಮೃದ್ಧವಾಗಿದೆ. ರಾಜ್ಯದಲ್ಲಿ 266 ಗಣಿಗಳಿದ್ದು, ಅದರಲ್ಲಿ 134 ಅರಣ್ಯ ಪ್ರದೇಶದಲ್ಲಿವೆ. ಇನ್ನು ಕರ್ನಾಟಕದ ಬಳ್ಳಾರಿಯೊಂದರಲ್ಲಿ 10,598 ಹೆಕ್ಟೇರ್​​ ಪ್ರದೇಶಗಳಲ್ಲಿ 148 ಗಣಿಗಳಿವೆ.

publive-image

ಬಳ್ಳಾರಿಯಲ್ಲಿ 1999ರಲ್ಲಿ ಗಣಿಗಾರಿಕೆ ಪ್ರಾರಂಭವಾದವು. 2000ರಲ್ಲಿ ‘ರಫ್ತು ಆಧಾರಿತ ಅಭಿವೃದ್ಧಿ’ಯಿಂದಾಗಿ ಗಣಿಗಾರಿಕೆ ಹೆಚ್ಚಾಗತೊಡಗಿತು. 2003ರಲ್ಲಿ 11,620 ಚದರ ಕಿ.ಮೀ ಗಣಿಗಾರಿಕೆ ಪ್ರದೇಶವನ್ನು ಖಾಸಗಿ ಕಂಪನಿಗಳಿಗೆ ನೀಡಲಾಯಿತು.

Advertisment

ಇದನ್ನೂ ಓದಿ: VIDEO: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಪ್ರಪಾತಕ್ಕೆ ಬಿದ್ದ ಯುವತಿ! ಆಕೆ ಬದುಕಿ ಬಂದಿದ್ದೇ ರೋಚಕ

2005ರಲ್ಲಿ ಚೀನಾದ ಬೀಜಿಂಗ್​ಗಾಗಿ ಕಬ್ಬಿಣದ ಬೇಡಿಕೆ ಹೆಚ್ಚಾಯ್ತು. ಹೀಗಾಗಿ ಬಳ್ಳಾರಿಯಲ್ಲಿ ಗಣಿಗಾರಿಕೆ ಮತ್ತಷ್ಟು ಹೆಚ್ಚಾಯ್ತು. ಇದು ಕಬ್ಬಿಣದ ಬೇಡಿಕೆಯನ್ನು ಇನ್ನಷ್ಟು ಹೆಚ್ಚುಮಾಡಿತು. ಇದರ ನಡುವೆ ಅಕ್ರಮ ಗಣಿಗಾರಿಕೆ ಹೆಚ್ಚಾಯ್ತು.

2007ರಲ್ಲಿ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆಯವರನ್ನು ಅಂದಿನ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನಿಖೆ ಮಾಡಲು ಹೇಳಿತು. ಈ ವೇಳೆ ಅವರು 2008ರಲ್ಲಿ ವರದಿಯೊಂದನ್ನು ಸಿದ್ಧಪಡಿಸಿ ಸಲ್ಲಿಸುತ್ತಾರೆ. ವರದಿಯಲ್ಲಿ 20 ವರ್ಷಗಳಲ್ಲಿ ಕಬ್ಬಿಣದ ಅದಿರು ನಿಕ್ಷೇಪ ಖಾಲಿಯಾಗಿವೆ ಎಂದು ತಿಳಿಸಿತ್ತು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment