newsfirstkannada.com

200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆ ಮಾಡಿದ್ರೆ ಚಾರ್ಜ್ ಕೊಡಲೇಬೇಕು -ಕೆ.ಜೆ.ಜಾರ್ಜ್

Share :

27-06-2023

    200 ಯೂನಿಟ್​ಗಿಂತ ಹೆಚ್ಚು ವಿದ್ಯುತ್​ ಬಳಸಿದ್ರೆ ಬಿಲ್ ಕಟ್ಟಲೇಬೇಕು

    ಬಿಲ್​ ನಾವು ಜಾಸ್ತಿ ಮಾಡಿಲ್ಲ, ಹಿಂದಿನ ಬಿಜೆಪಿ ಸರ್ಕಾರ ಹೆಚ್ಚಿಸಿತ್ತು-ಜಾರ್ಜ್​

    ರಾಜ್ಯದಲ್ಲಿ ಮುಂಗಾರು ಮಳೆ ತಡವಾಗಿದೆ ಅಷ್ಟೇ.. ಬಂದೇ ಬರುತ್ತದೆ

ಬಳ್ಳಾರಿ: ಗೃಹಜ್ಯೋತಿ ಯೋಜನೆಯನ್ನು ಜುಲೈಯಿಂದ ಅನುಷ್ಠಾನ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ನಾವು ನೀಡಿದ ಆಶ್ವಾಸನೆಯಂತೆ ಜನರಿಗೆ ಉಚಿತ ವಿದ್ಯುತ್ ನೀಡುತ್ತೇವೆ. 200 ಯೂನಿಟ್​ಗಿಂತ ಹೆಚ್ಚು ವಿದ್ಯುತ್​ ಬಳಸಿದ್ರೆ ಅದಕ್ಕೆ ಬಿಲ್​ ಪಾವತಿಸಬೇಕಾಗುತ್ತೆ ಎಂದಿದ್ದಾರೆ.

ಬಳ್ಳಾರಿಯ ಕುಡತಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆಜೆ.ಜಾರ್ಜ್, ರಾಜ್ಯದಲ್ಲಿ 2 ಕೋಟಿ 14 ಲಕ್ಷ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ  ಸಿಗಲಿದೆ. ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಈ ಹಿಂದೆ ಇದ್ದ ಬಿಜೆಪಿ ಸರ್ಕಾರ. ಆದ್ರೆ ಅದನ್ನು ನಮ್ಮ ಮೇಲೆ ಹಾಕಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಬಿಲ್ ಜಾಸ್ತಿ ಮಾಡಲಿಲ್ಲ. ಅದನ್ನ ಈಗ ಹೆಚ್ಚಿಸಿದ್ದಾರೆ. ಕೈಗಾರಿಕೆಗಳಿಗೆ ವಿಧಿಸಲಾಗಿರುವ ಬಿಲ್​ ಅನ್ನು ರಾಜ್ಯ ಸರ್ಕಾರ ಮರು ಪರಿಶೀಲನೆ ಮಾಡಲು ಬರಲ್ಲ. ಸಿಎಂ ಪರಿಶೀಲನೆ ಮಾಡುತ್ತಾರೆ. ಕಮರ್ಷಿಯಲ್ ಬಿಲ್ ಹೆಚ್ಚಿಸುವುದು ನಮ್ಮ ಬಳಿ ಇಲ್ಲ ಎಂದಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಜ್​, ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟಿಲ್ಲ. ಮಳೆ ಸ್ವಲ್ಪ ತಡವಾಗಿದೆ ನಿಜ ಆದರೆ ಮಳೆನೇ ಬರುವುದಿಲ್ಲ ಎನ್ನಲ್ಲ. ಶೀಘ್ರವಾಗಿ ಮಳೆಯಾಗಲಿದೆ‌. ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆ ಮಾಡಿದ್ರೆ ಚಾರ್ಜ್ ಕೊಡಲೇಬೇಕು -ಕೆ.ಜೆ.ಜಾರ್ಜ್

https://newsfirstlive.com/wp-content/uploads/2023/06/BLY_KJ_GEORJ.jpg

Load More