newsfirstkannada.com

ಪ್ರೀತಿ-ಪ್ರೇಮ ಅಂತ ಲೈಂಗಿಕ ದೌರ್ಜನ್ಯ? ಯುವತಿ ಆರೋಪಕ್ಕೆ ಟ್ವಿಸ್ಟ್‌ ಕೊಟ್ಟ ಸಂಸದ ದೇವೇಂದ್ರಪ್ಪ ಪುತ್ರ; ಏನದು?

Share :

17-11-2023

    ಕೈ ಹಿಡಿಯುವುದಾಗಿ ನಂಬಿಸಿ ಕೈ ಕೊಟ್ರಾ ಸಂಸದನ ಪುತ್ರ?

    ಯುವತಿ ಅ್ಯಂಡ್​ ಗ್ಯಾಂಗ್​ 15 ಲಕ್ಷಕ್ಕೆ ಬೇಡಿಕೆ ಇಟ್ಟಿದೆ ಅಂತ ದೂರು

    ಬಳ್ಳಾರಿ ಸಂಸದ ದೇವೇಂದ್ರಪ್ಪರನ್ನ ಇಕ್ಕಟ್ಟಿಗೆ ಸಿಲುಕಿಸಿದ ಪುತ್ರ

ಬಳ್ಳಾರಿ ಸಂಸದರ ರಾಜಕೀಯ ಬದುಕಿಗೆ ಪುತ್ರನ ಮೇಲಿನ ಆರೋಪವೊಂದು ಕಂಕಟವಾಗಿ ಪರಿಣಮಿಸಿದೆ. ಸಂಸದ ವೈ.ದೇವೇಂದ್ರಪ್ಪ ಪುತ್ರನ ಮೇಲೆ ಯುವತಿಯೊಬ್ಬಳು ನೀಡಿರೋ ದೂರು, ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಇತ್ತ ಯುವತಿ ಸಂಸದರ ಪುತ್ರನಿಂದ ಮೋಸ ಆಗಿದೆ ಅಂತ್ರಿದ್ರೆ, ಅತ್ತ ಸಂಸದರ ಪುತ್ರ ಹನಿಟ್ರಾಪ್‌​ ಆರೋಪ ಮಾಡಿದ್ದಾರೆ.

ಸಂಸದನ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಕೈಹಿಡಿಯುವುದಾಗಿ ನಂಬಿಸಿ ಕೈ ಕೊಟ್ರಾ ಸಂಸದನ ಪುತ್ರ?

ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲಿ ಸಿಲುಕೋದು ಸರ್ವೆ ಸಮಾನ್ಯ. ಹೀಗೆ ಪುತ್ರನ ಮೇಲಿನ ಆರೋಪವೊಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿದೆ. ಪುತ್ರ ರಂಗನಾಥ್​ ಮೇಲೆ ಕೇಳಿ ಬಂದಿರೋ ಲೈಗಿಂಕ ದೌರ್ಜನ್ಯ ಆರೋಪ ಸದ್ಯ ಸಂಸದ ದೇವೇಂದ್ರಪ್ಪ ರಾಜಕೀಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ರಂಗನಾಥ್ ದೋಖಾ ಮಾಡಿದ್ದಾರೆ ಅನ್ನೋ ಆರೋಪ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಮದುವೆ ಹೆಸರಲ್ಲಿ ಯುವತಿ ಜೊತೆ ರಂಗನಾಥ್​ ಲವ್ವಿ-ಡವ್ವಿ?
ಪ್ರೀತಿ-ಪ್ರೇಮ ಅಂತ ಯುವತಿ ಮೇಲೆ ಲೈಗಿಂಕ ದೌರ್ಜನ್ಯ?

ಮೈಸೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿರೋ ಸಂಸದ ವೈ.ದೇವೇಂದ್ರಪ್ಪ ಪುತ್ರ ರಂಗನಾಥ್ ಮೇಲೆ ಯುವತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ರಂಗನಾಥ್​ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಅಂತ ಯುವತಿ ಬೆಂಗಳೂರಿನ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ. ಉಪನ್ಯಾಸಕನಾಗಿ ಕೆಲಸ ಮಾಡ್ತಿದ್ದೀನಿ, ಒಳ್ಳೆಯ ಸಂಬಳ ಬರ್ತಿದೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡ್ಕೋತೀನಿ ಅಂತ ರಂಗನಾಥ್​ ನನ್ನ ನಂಬಿಸಿದ್ರು. 2023ರ ಜನವರಿ 24ರಂದು ಬೆಂಗಳೂರಿನಿಂದ ಮೈಸೂರಿನ ಲಲಿತ ಮಹಲ್​ ಪ್ಯಾಲೇಸ್​ ಎಂಬ ಹೋಟೆಲ್​ಗೆ ಕರೆದೊಯ್ದು, ಮದ್ಯ ಸೇವಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಮರುದಿನ ನಾನು ಬೆಂಗಳೂರಿಗೆ ವಾಪಸ್ಸಾದ ಬಳಿಕ ರಂಗನಾಥ್​ ನನ್ನ ಜೊತೆ ಸರಿಯಾಗಿ ಮಾತನಾಡದೇ, ಮದುವೆಯಾಗದೇ ಮೋಸ ಮಾಡಿರುತ್ತಾರೆ. ಮದುವೆಯಾಗು ಎಂದು ಕೇಳಿದ್ದಕ್ಕೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಅಂತ ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿ ವಿರುದ್ಧ ರಂಗನಾಥ್​ರಿಂದ ಪ್ರತಿದೂರು ದಾಖಲು

ಇತ್ತ ಬೆಂಗಳೂರಿನಲ್ಲಿ ರಂಗನಾಥ್ ವಿರುದ್ಧ ದೂರು ದಾಖಲಾಗ್ತಾ ಇದ್ದಂತೆಯೇ ಅತ್ತ ರಂಗನಾಥ್ ಸಹ ಮೈಸೂರಿನಲ್ಲಿ ಯುವತಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಮದುವೆಯಾಗು ಅಂತ ಕಿರುಕುಳ ನೀಡಿ ಯುವತಿ ಮತ್ತಾಕೆಯ ಗ್ಯಾಂಗ್‌ ತನ್ನನ್ನ ಹನಿಟ್ರಾಪ್‌​ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಸ್ನೇಹಿತ ಕಲ್ಲೇಶ್​ ಎಂಬುವರಿಂದ ಯುವತಿಯ ಪರಿಚಯ ಆಯ್ತು. 2-3 ಬಾರಿ ಭೇಟಿಯಾಗಿ, ಬಳಿಕ ತನ್ನನ್ನ ಮದುವೆಯಾಗುವಂತೆ ಆಕೆ ಕಿರುಕುಳ ನೀಡಿದ್ರು. 2023ರ ಅಕ್ಟೋಬರ್​ನಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್​ ಲೈಟ್​ ಬಸ್​ ನಿಲ್ದಾಣದ ಬಳಿ ನನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬಳಿಕ ತನ್ನ ಜೊತೆ ಇರುವ ಫೋಟೋಗಳನ್ನ ನನ್ನ ಮಡದಿಗೆ ಕಳುಹಿಸುವುದಾಗಿ ಬೆದರಿಸಿ 32,500 ರೂಪಾಯಿ ಹಣವನ್ನ ವಸೂಲಿ ಮಾಡಿದ್ದಾರೆ. ಬಳಿಕ ಶ್ರೀನಿವಾಸ್​ ಎಂಬ ವ್ಯಕ್ತಿಯನ್ನ ಕಳುಹಿಸಿ 15 ಲಕ್ಷ ಹಣ ನೀಡಲು ಬೆದರಿಕೆ ಹಾಕಿದ್ದಾರೆ. ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟದಲ್ಲಿ ಸಂಸದರ ಪುತ್ರನ ಮೇಲಿನ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಯುವತಿ ಮೋಸ ಅಂತಿದ್ರೆ ಇತ್ತ ರಂಗನಾಥ್​ ಹನಿಟ್ರಾಪ್‌​ ಅಂತಿದ್ದಾರೆ. ಯಾವುದು ಸತ್ಯ ಯುವುದು ಸುಳ್ಳೋ ಅನ್ನೋ ಮಾಹಿತಿ ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿ-ಪ್ರೇಮ ಅಂತ ಲೈಂಗಿಕ ದೌರ್ಜನ್ಯ? ಯುವತಿ ಆರೋಪಕ್ಕೆ ಟ್ವಿಸ್ಟ್‌ ಕೊಟ್ಟ ಸಂಸದ ದೇವೇಂದ್ರಪ್ಪ ಪುತ್ರ; ಏನದು?

https://newsfirstlive.com/wp-content/uploads/2023/11/MP_DEVENDRAPPA.jpg

Load More