ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಬಳ್ಳಾರಿಯ ಸಂಸದ ದೇವೇಂದ್ರಪ್ಪ
ಹಣಕ್ಕಾಗಿ ಬಂದಿದ್ದರೇ ನಾನು ಇದನ್ನೆಲ್ಲ ಮಾಡುತ್ತಿದ್ದೇನಾ?-ಯುವತಿ
‘ಮಗ, ಮಗಳು ಯಾರೇ ಆಗಲಿ ಇವರಿಬ್ಬರಿಗೂ ಜವಾಬ್ದಾರಿ ಇರಬೇಕಲ್ವಾ?’
ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಮಗ ಪ್ರೊಫೆಸರ್ ರಂಗನಾಥ್ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ನ್ಯೂಸ್ಫಸ್ಟ್ ಜೊತೆ ಸಂಸದ ದೇವೇಂದ್ರಪ್ಪ ಮಾತನಾಡಿ, ಮಗ, ಮಗಳು ಯಾರೇ ಆಗಲಿ ಇವರಿಬ್ಬರಿಗೂ ಜವಾಬ್ದಾರಿ ಇಲ್ವಾ. ನಾನು ಕಾನೂನಿಗೆ ಗೌರವ ಕೊಡುತ್ತೇನೆ ಎಂದಿದ್ದಾರೆ.
ಆ ಯುವತಿಯ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮದವರು ಬಂದು ಹೇಳಿದ ಮೇಲೆ ಎಲ್ಲಾ ಗೊತ್ತಾಗಿರೋದು. ನಾನೇನು ಹೇಳಬೇಕು ಎಂಬುವುದು ಗೊತ್ತಿಲ್ಲ. ಹೆಣ್ಣಾಗಲಿ, ಗಂಡಾಗಲಿ ನಾನು ನ್ಯಾಯದ ಪರ ಇರುತ್ತೇನೆ. ಬೆಂಗಳೂರಲ್ಲಿ ಇದೊಂದು ಗ್ಯಾಂಗ್ ಇದೆ. ಯಾರೋ ಬೇಕೆಂದು ಪ್ಲಾನ್ ಮಾಡಿ ಟ್ರ್ಯಾಪ್ ಮಾಡಿದ್ದಾರೆ. 6-7 ತಿಂಗಳಿಂದ ನನ್ನ ಮಗ ಹಣ ಕಳೆದುಕೊಳ್ಳುತ್ತಿದ್ದಾನೆ. ಅದೇ ಯುವತಿಯೇ ಮಗನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಇದರ ಹಿಂದೆ ಯಾರದ್ದೋ ಕೈವಾಡವಿದೆ. ಕಲ್ಲೇಶ್ ಆ್ಯಂಡ್ ಟೀಮ್ನವರು ಇಂತಹದ್ದು ಮಾಡಿರಬಹುದು ಎಂದು ಅನುಮಾನವಿದೆ ಎಂದರು.
ದೇವೇಂದ್ರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಸಂತ್ರಸ್ಥೆ.. ಜೀವನ ಕೊಡ್ಲಿ ಅಂತ ಹೋಗಿದ್ದೆ, ದುಡ್ಡಿಗಾಗಿ ಅಲ್ಲ. ನಾನೇನು ಬ್ಲ್ಯಾಕ್ ಮೇಲ್ ಮಾಡಿಲ್ಲ. ನಿಮ್ಮ ಮಗ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ನಿಮ್ಮ ಮಗ ದಡ್ಡ ಅಲ್ಲ. ಇಷ್ಟಪಟ್ಟು ಬಂದಿದ್ದರು. ಪ್ರೀತಿ ಯಾವತ್ತೂ ಪ್ರೀತಿ ಆಗುತ್ತೆ. ಈ ಬಗ್ಗೆ ಎಲ್ಲರಿಗೂ ಕಳುಹಿಸಿ ಸಾಬೀತು ಮಾಡುತ್ತೇನೆ. ನಿಮ್ಮ ಮಗ ಸರಿಯಿಲ್ಲ. ನಾನು ಕಾನೂನು ಹೋರಾಟ ಮಾಡುತ್ತೇನೆ. ನಾನು ಕೇಸ್ ದಾಖಲು ಮಾಡುತ್ತಿದ್ದಂತೆ ಅವರು ಫೋನ್ ಪಿಕ್ ಮಾಡುತ್ತಿಲ್ಲ. ದಸರಾ ಮುಗಿದ ಮೇಲೆ ಇಬ್ಬರು ಮದುವೆ ಆಗೋಣ. ನನ್ನನ್ನು ಮದುವೆ ಮಾಡಿಕೊಳ್ಳಿ, ನನಗೂ ಒಂದು ಜೀವನ ಕೊಡಿ ಎಂದಿದ್ದೆ. ಆಗ ಇಬ್ಬರ ನಡುವೆ ದೊಡ್ಡ ಜಗಳ ನಡೆದಿತ್ತು. ನಾನು ನನ್ನ ಪತ್ನಿ ಜೊತೆ ಚೆನ್ನಾಗಿದ್ದೇನೆ. ನನ್ನ ತಂಟೆಗೆ ಬರಬೇಡಿ ಎಂದಿದ್ದರು ಅಂತಾ ಕಣ್ಣೀರು ಇಟ್ಟರು.
ನಿನಗೆ 5 ಲಕ್ಷ ರೂಪಾಯಿ ಕೊಡುತ್ತಿನಿ. ಬಿಟ್ಟುಬಿಡು, ನನಗೆ ಕುಟುಂಬವಿದೆ. ಸಮಾಜದಲ್ಲಿ ನನ್ನದೇ ಆದ ಒಂದು ಸ್ಥಾನಮಾನ ಇದೆ. ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ತಂದೆ-ಮಗ ಕಾನೂನು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಹಣಕ್ಕಾಗಿ ಬಂದಿದ್ದರೆ ನಾನು ಈ ಹಂತದವರೆಗೆ ಬರುತ್ತಿರಲಿಲ್ಲ. ಅವರು ನನ್ನನ್ನು ಮದುವೆ ಆದರೆ ಒಳ್ಳೆಯದು ಇಲ್ಲದಿದ್ದರೆ ನಾನು ಕೂಡ ಕಾನೂನು ಹೋರಾಟ ಮಾಡಿ ಎಲ್ಲವನ್ನೂ ನಿರೂಪಿಸುತ್ತೇನೆ ಎಂದು ನ್ಯೂಸ್ಫಸ್ಟ್ ಮೂಲಕ ಸಂತ್ರಸ್ತ ಯುವತಿ ಸಂಸದರಿಗೆ ಸವಾಲ್ ಹಾಕಿದ್ದಾರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ