ನೀನೇ ನನ್ನ ಪ್ರಾಣ ಎನ್ನುತ್ತಿದ್ದ ಜಾಸ್ಮೀನ್ ಕೌರ್ ಜೀವಂತ ಸಮಾಧಿ
ಕಣ್ಣಿಗೆ ಬಟ್ಟೆ ಕಟ್ಟಿ, ಕೇಬಲ್‌ಗಳಿಂದ ಕೈ ಕಾಲು ಕಟ್ಟಿ ಮಣ್ಣು ಮುಚ್ಚಿದ
ಪ್ರಿಯಕರನ ಸೇಡಿಗೆ ಜೀವಂತ ಸಮಾಧಿಯಾದ ದುರಂತ ಪ್ರೀತಿ ಇದು
ಕ್ಯಾನ್ಬೆರಾ: ಭಾರತೀಯ ಮೂಲದ ಯುವಕ ತನ್ನ ಮಾಜಿ ಗೆಳತಿಯ ಕಣ್ಣಿಗೆ ಬಟ್ಟೆ ಕಟ್ಟಿ, ಕೇಬಲ್‌ಗಳಿಂದ ಕೈ ಕಾಲು ಕಟ್ಟಿ ಜೀವಂತವಾಗಿ ಸಮಾಧಿ ಮಾಡಿರೋ ಘಟನೆ ಆಸ್ಟ್ರೇಲಿಯಾದಲ್ಲಿ ಬೆಳಕಿಗೆ ಬಂದಿದೆ. ತನಿಖೆ ನಡೆಸಿರುವ ಪೊಲೀಸರು ಸಮಾಧಿಯಾಗಿದ್ದ ಮೃತದೇಹವನ್ನು ಹೊರ ತೆಗೆದಿದ್ದಾರೆ. ಸಮಾಧಿಯಲ್ಲಿ ಜಾಸ್ಮೀನ್ ಕೌರ್ ಮೃತದೇಹ ಇಟ್ಟಿದ್ದ ಮಾದರಿ ನಿಜಕ್ಕೂ ಬೆಚ್ಚಿ ಬೀಳಿಸಿದೆ.
ಭಾರತೀಯ ಮೂಲದ 21 ವರ್ಷದ ಜಾಸ್ಮೀನ್ ಕೌರ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದರು. ಈಕೆಯ ಮೃತದೇಹ ಆಸ್ಟ್ರೇಲಿಯಾದ ಫ್ಲಿಂಡರ್ಸ್ ರೇಂಜೆಸ್‌ನಲ್ಲಿ ಪತ್ತೆಯಾಗಿದೆ. ಜಾಸ್ಮೀನ್ ಕೌರ್‌ಳನ್ನು ಈಕೆಯ ಮಾಜಿ ಪ್ರಿಯಕರ ತಾರಿಕ್‌ಜೋತ್ ಸಿಂಗ್ ಜೀವಂತವಾಗಿ ಸಮಾಧಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಜಾಸ್ಮೀನ್ ಕೌರ್ ಹಾಗೂ ತಾರಿಕ್‌ಜೋತ್ ಸಿಂಗ್ ಪರಸ್ಪರ ಪ್ರೇಮಿಸುತ್ತಿದ್ದರು. ಕಳೆದ ಮಾರ್ಚ್ 2021ರಲ್ಲಿ ಜಾಸ್ಮೀನ್ ಕೌರ್ ಅವರನ್ನು ಅಪಹರಣ ಮಾಡಲಾಗಿತ್ತು. ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ತಾರಿಕ್‌ಜೋತ್ ಸಿಂಗ್ ಅಪರಾಧಿಯಾಗಿದ್ದನು. ಆರೋಪಿಯನ್ನು ಬಂಧಿಸಿದ್ದ ಆಸ್ಟ್ರೇಲಿಯಾ ಪೊಲೀಸರು ಜೀವಂತ ಸಮಾಧಿಯಾದ ಸ್ಥಳವನ್ನು ಪತ್ತೆ ಮಾಡಿದ್ದಾರೆ. ಕೊಲೆ ಮಾಡಿದ ತಾರಿಕ್‌ಜೋತ್ ಸಿಂಗ್‌ರನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
ಮಾಜಿ ಪ್ರೇಯಸಿ ಜಾಸ್ಮೀನ್ ಕೌರ್ ಹಾಗೂ ತಾರಿಕ್‌ಜೋತ್ ಸಿಂಗ್ ಮಧ್ಯೆ ಭಿನ್ನಾಭಿಪ್ರಾಯ ಬಂದು ಸೇಡಿಗೆ ಜೀವಂತ ಸಮಾಧಿ ಮಾಡಿದ್ದಾನೆ ಎನ್ನಲಾಗಿದೆ. ಈತನ ವಿಚಾರಣೆ ನಡೆಸಿರುವ ಪೊಲೀಸರು ಜಾಸ್ಮೀನ್ ಕೌರ್ ಅನ್ನು ಸಮಾಧಿ ಮಾಡಿದ್ದ ಜಾಗವನ್ನು ಪತ್ತೆ ಮಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ, ಕೇಬಲ್‌ಗಳಿಂದ ಕೈ, ಕಾಲು ಬಂಧಿಸಿದ್ದ ಮೃತದೇಹವನ್ನು ಹೊರ ತೆಗೆದಿದ್ದಾರೆ. ನ್ಯಾಯಾಲಯದಲ್ಲಿ ತಾರಿಕ್‌ಜೋತ್ ಸಿಂಗ್ ಮಾಡಿರುವ ಕೃತ್ಯ ಸಾಬೀತಾಗಿತ್ತು. ಜಾಸ್ಮೀನ್ ಕೌರ್, ತಾರಿಕ್‌ಜೋತ್ ಸಿಂಗ್ ಮಧ್ಯೆ ಇದ್ದ ಸಂಬಂಧದಿಂದ ದೂರವಾಗಲು ಆಗದೇ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಜಾಸ್ಮಿನ್ ಕೌರ್ ತಾಯಿ ಕೂಡ ತಾರಿಕ್‌ಜೋತ್ ಸಿಂಗ್‌ನಿಂದ ನನ್ನ ಮಗಳು ನೂರಾರು ಬಾರಿ ಅವನಿಂದ ನಿರಾಕರಿಸಲ್ಪಟ್ಟಿದ್ದಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ