newsfirstkannada.com

ಬಾಲಕನಿಂದ ಸ್ಮಾರ್ಟ್​ ಐಡಿಯಾ! ಇನ್ಮೇಲೆ ಶೂನಿಂದಲೇ ಚಾರ್ಜ್​ ಮಾಡೋ ಕಾಲ ಬಂದರೂ ಅಚ್ಚರಿ ಇಲ್ಲ

Share :

Published May 18, 2023 at 11:07am

Update September 25, 2023 at 9:15pm

    ನೀವು ನಡೆದರೆ ಸಾಕು ಮೊಬೈಲ್ ಚಾರ್ಜಿಂಗ್!

    ಕೈಯಲ್ಲಿ ಮೊಬೈಲ್​ ಹೋಗುತ್ತಿದ್ದರೆ ಸಾಕು ಚಾರ್ಜ್

    9ನೇ ಕ್ಲಾಸ್ ದೇಸಿ ಹುಡುಗನ ಚಮತ್ಕಾರ ಸೂಪರ್

ಮೊಬೈಲ್​.. ಮೊಬೈಲ್​ ಇದೊಂದರ ಅನ್ವೇಷಣೆಯಿಂದ ಇವತ್ತು ಇಡೀ ಜಗತ್ತು ಜನರ ಅಂಗೈಯಲ್ಲಿದ್ದಂತಾಗಿದೆ. ಎಲ್ಲಿಗೆ ಹೋದರೂ ನಾವು ಮೊಬೈಲ್​ ತೆಗೆದುಕೊಂಡು ಹೋಗಲೇಬೇಕು. ಆದರೆ ಕೆಲವೊಮ್ಮೆ ಕರೆಂಟ್​ ಇಲ್ಲದಿದ್ದರೆ ಚಾರ್ಜಿಂಗ್​ ಸಮಸ್ಯೆ ಕಾಡುತ್ತಿರುತ್ತದೆ. ಅದಕ್ಕೆ ಪೋರನೊಬ್ಬ ಹೊಸ ಉಪಾಯ ಕಂಡು ಹಿಡಿದಿದ್ದಾನೆ. ಮುಂದೊಂದು ದಿನ ಇದು ಭಾರೀ ಜನಪ್ರಿಯತೆ ಪಡೆದರೆ ಯಾವುದೇ ಅಚ್ಚರಿ ಇಲ್ಲ!

ನಡೆದರೆ ಸಾಕು ಚಾರ್ಜಿಂಗ್..!
ಹೌದು.. ಈಗಾಗಲೇ ಮೊಬೈಲ್ ಚಾರ್ಜಿಂಗ್​ಗೆ ಪವರ್​ ಬ್ಯಾಂಕ್​ ಏನೋ ಬಂದಿದೆ. ಆದ್ರೆ ಪವರ್ ಬ್ಯಾಂಕ್​ನಲ್ಲಿ ನಾವು ಮೊದಲೇ ಚಾರ್ಜಿಂಗ್​ನ್ನು​ ಸ್ಟೋರ್​ ಮಾಡಿ ಬಳಿಕ ಮೊಬೈಲ್​ಗೆ ಚಾರ್ಜ್​ ಮಾಡಬೇಕು. ಇಲ್ಲೊಬ್ಬ ಬಾಲಕ ಮೊಬೈಲ್​ ಚಾರ್ಜಿಂಗ್​ಗೆ ಸಖತ್ ಆಗಿರೋ ಐಡಿಯೋ ಮಾಡಿದ್ದಾನೆ. ಬರೀ ನೀವು ನಡೆದರೆ ಸಾಕು ಮೊಬೈಲ್​ ತನ್ನ ಪಾಡಿಗೆ ತಾನು ಚಾರ್ಜ್​ ಆಗುತ್ತದೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್‌ನಗರದ ಸೌವಿಕ್ ಸೇಥ್ ಎನ್ನುವ ಬಾಲಕ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಯಸ್ಸು ಸಣ್ಣದಾದ್ರೂ ವಿದ್ಯಾರ್ಥಿ ಕಂಡುಹಿಡಿದಿರೋದು ಮೊಬೈಲ್​ ಬಳಕೆದಾರರಿಗೆ ಭಾರೀ ಉಪಯೋಗವಾಗಲಿದೆ. ಶೂಗೆ ಬ್ಯಾಟರಿಯನ್ನು ಜೋಡಿಸಿದ್ದು ಇದಕ್ಕೆ ಚಾರ್ಜಿಂಗ್​ ಪ್ಲಗ್ ಮಾಡಿ ಕೈಯಲ್ಲಿ ಮೊಬೈಲ್​ ಹಿಡಿದು ನಡೆದುಕೊಂಡು ಹೋಗುತ್ತಿದ್ದರೆ ಸಾಕು ಮೊಬೈಲ್​ ಚಾರ್ಜ್​ ಆಗುತ್ತದೆ.

ಇದನ್ನೂ ಓದಿ: !ಈ ಹಸುಗಳು ಸಾವಿರಾರು ಲೀಟರ್ ಹಾಲು ಕೊಡಲಿವೆ

ಇಲ್ಲಿ ಯಾವುದೇ ಚಾರ್ಜಿಂಗ್ ಮೊದಲೇ ಮಾಡೋದು ಬೇಕಾಗಿಲ್ಲ. ಶೂ ಹಾಕಿಕೊಂಡು ನಡೆದರೆ ಸಾಕು ತನ್ನಿಂದ ತಾನೇ ಕರೆಂಟ್​ ಉತ್ಪಾದಿಸಿಕೊಂಡು ಮೊಬೈಲ್​ಗೆ ಚಾರ್ಜ್​ ಮಾಡುತ್ತದೆ. ನಡೆದಾಗ ಸ್ಟೋರ್ ಆದಂತಹ ವಿದ್ಯುತ್​ನಿಂದ ಶೂ ಬಿಚ್ಚಿದಾಗಲೂ ಮೊಬೈಲ್​ ಚಾರ್ಜ್​ ಮಾಡಬಹುದು. ಶೂಗಳು ಕಳೆಯದಂತೆ ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಕ್ಯಾಮೆರಾವನ್ನು ಶೂಗಳಿಗೆ ಅಳವಡಿಸಲಾಗಿದೆ.

ಸೌವಿಕ್ ಸೇಥ್​ನ ಐಡಿಯಾದಿಂದ ಆತನ ತಂದೆ-ತಾಯಿ ಖುಸಿಯಾಗಿದ್ದು, ಇನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆಯಿದೆ. ಮಗನ ಸ್ಕಿಲ್​ ನೋಡಿದರೆ ಆಶ್ಚರ್ಯವಾಯಿತು. ಅವನು ಮಾಡಿದ್ದು ಎಲ್ಲರಿಗೂ ಉಪಯೋಗ ಆಗಲಿದೆ. ಆದಷ್ಟು ಬೇಗ ಮಾರ್ಕೆಟ್​ಗೆ ತರಲು ಯೋಚಿಸಲಾಗುವುದು ಎಂದು ಹೇಳ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕನಿಂದ ಸ್ಮಾರ್ಟ್​ ಐಡಿಯಾ! ಇನ್ಮೇಲೆ ಶೂನಿಂದಲೇ ಚಾರ್ಜ್​ ಮಾಡೋ ಕಾಲ ಬಂದರೂ ಅಚ್ಚರಿ ಇಲ್ಲ

https://newsfirstlive.com/wp-content/uploads/2023/05/Bengal-Boy.jpg

Load More