ಲಿಂಗ ಬದಲಾವಣೆಗೆ ಮುಂದಾದ ಮಾಜಿ ಮುಖ್ಯಮಂತ್ರಿಯ ಮಗಳು
ಎಲ್ಲರು ಸುಚೇತನಾಳನ್ನು ಪುರುಷ ಎಂದೇ ಗುರುತಿಸ್ತಿದ್ದಕ್ಕೆ ಈ ನಿರ್ಧಾರ
ಸುಚೇತನಾ ಅಲ್ಲ ‘ಸುಚೇತನ್’ ಆಗಲು ಹೊರಟಿದ್ದಾರೆ ಮಾಜಿ ಸಿಎಂ ಪುತ್ರಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಕಾನೂನು ಸಲಹೆಗಳನ್ನು ಪಡೆದಿದ್ದು ಲಿಂಗ ಬದಲಾವಣೆಗೆ ಬೇಕಾಗುವ ಪ್ರಮಾಣ ಪತ್ರಗಳನ್ನು ಹೇಗೆ ಪಡೆಯುವುದು ಎಂದು ಮನೋವೈದ್ಯರನ್ನು ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಎಂದು ಇದ್ದಾರೆ. ಇವರು ಸದ್ಯ ‘ಸುಚೇತನ್’ ಅಂದರೆ ಪುರುಷರಾಗಲು ಬಯಸಿದ್ದಾರೆ. ಇತ್ತೀಚೆಗೆ LGBTQ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಚೇತನಾ ಪುರುಷನಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ದೈಹಿಕವಾಗಿ ನಾನೊಬ್ಬ ಮಹಿಳೆ ಎಂದು ಹೇಳಿದ್ದಾಳೆ.
ಈ ಬಗ್ಗೆ ಮಾತನಾಡಿದ ಸುಚೇತನಾ, ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಲು ನಾನು ರೆಡಿಯಾಗಿದ್ದೇನೆ. ನನಗೆ 41 ವರ್ಷ ಆಗಿದ್ದರಿಂದ ಜೀವನಕ್ಕೆ ನನ್ನದೇ ಆದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ. ಇದರಲ್ಲಿ ನನ್ನ ಫ್ಯಾಮಿಲಿಯನ್ನು ಎಳೆದು ತರಬೇಡಿ. ಯಾವಾಗಲೂ ತಂದೆ ನನ್ನ ಪರವಾಗಿಯೆ ಇದ್ದಾರೆ. ಸದ್ಯ ನಿರ್ಧಾರ ತೆಗೆದುಕೊಂಡಿದ್ದರಿಂದ ಈ ಬಗ್ಗೆ ನನ್ನ ಹೋರಾಟ ಮುಂದುವರೆಯಲಿದೆ. ಮಾನಸಿಕವಾಗಿ ಟ್ರಾನ್ಸ್ಮ್ಯಾನ್ ಆಗಿದ್ದೇನೆ. ಅದರಂತೆ ದೈಹಿಕವಾಗಿ ಅದೇ ಆಗಲು ಬಯಸುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ