newsfirstkannada.com

ಬೆಳ್ಳಂ ಬೆಳಗ್ಗೆಯೇ ಹರಿಯಿತು ನೆತ್ತರು.. ಟಿಎಂಸಿ ನಾಯಕನನ್ನೇ ಗುಂಡಿಕ್ಕಿ ಕೊಂದು ಹಾಕಿದ್ರು!

Share :

13-11-2023

    ಪಶ್ಚಿಮ ಬಂಗಾಳದಲ್ಲಿ ಮತ್ತೆ ರಕ್ತ ರಾಜಕೀಯ

    ಇಂದು ಬೆಳ್ಳಂ ಬೆಳಗ್ಗೆಯೇ ಹರಿಯಿತು ನೆತ್ತರು

    ಟಿಎಂಸಿ ನಾಯಕನನ್ನೇ ಕೊಂದ ಹಂತಕರು!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಸೈಫುದ್ದೀನ್ ಲಷ್ಕರ್ ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಲಷ್ಕರ್​​ ಬೆಳಗಿನ ಜಾವ ಪ್ರಾರ್ಥನೆ ಮಾಡಲು ಹೋಗುವ ಸಂದರ್ಭದಲ್ಲಿ ಟಾರ್ಗೆಟ್​​ ಮಾಡಿ ಹಂತಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಇನ್ನು, ಪರಗಣ ಅನ್ನೋ ಜಿಲ್ಲೆಯಲ್ಲಿ ಜೋಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರೋ ಬಮಂಗಚಿ ಗ್ರಾಮದಲ್ಲಿ TMC ಲೀಡರ್​​ ಲಷ್ಕರ್ ಕೊಲೆ ಮಾಡಲಾಗಿದೆ. ಇವರನ್ನು ಹಿಂದಿನಿಂದ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಅಸಲಿಗೆ ಆಗಿದ್ದೇನು..?

ಲಷ್ಕರ್​​ನನ್ನು ಹಲವು ದಿನಗಳಿಂದ ನಾಲ್ವರು ಹಂತಕರು ಫಾಲೋ ಮಾಡುತ್ತಿದ್ದರು. ಲಷ್ಕರ್ ಪ್ರಾರ್ಥನೆ ಹೋಗುವಾಗಲೇ ನೋಡಿ ಅಟ್ಯಾಕ್​ ಮಾಡಿದ್ದಾರೆ. ಏಕಾಏಕಿ ದಾಳಿ ನಡೆಸಿ ಆತನ ದೇಹಕ್ಕೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಕೂಡಲೇ ಆತನನ್ನು ರಕ್ಷಿಸಲು ಸ್ಥಳೀಯರು ಓಡಿ ಬಂದಿದ್ದಾರೆ.

ಇನ್ನು, ಸ್ಥಳೀಯರು ಆರೋಪಿಗಳನ್ನು ಹಿಡಿದಿದ್ದಾರೆ. ಈ ಪೈಕಿ ಇಬ್ಬರು ಎಸ್ಕೇಪ್​ ಆಗಿದ್ದು, ಓರ್ವನನ್ನು ಸ್ಥಳೀಯರೇ ಕೊಂದು ಹಾಕಿದ್ದಾರೆ. ಜತೆಗೆ ಮತ್ತೋರ್ವನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.

ಬೆಳಿಗ್ಗೆ 5 ಗಂಟೆಗೆ ಬಂದಿದ್ದ ಗ್ಯಾಂಗ್​​

ಸೈಫುದ್ದೀನ್ ಲಷ್ಕರ್​​ನನ್ನು ಮಸೀದಿ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಗಿದೆ. ಬೆಳಿಗ್ಗೆ 5 ಗಂಟೆಗೆ ನಾಲ್ವರು ಹಂತಕರು ಎರಡು ಬೈಕ್‌ಗಳಲ್ಲಿ ಬಂದಿದ್ದರು. ಬಳಿಕ ಹಿಂದಿನಿಂದಲೇ ಲಷ್ಕರ್​​ಗೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಕೊಲೆಯನ್ನು ಬಿಜೆಪಿ, ಸಿಪಿಎಂ ಬೆಂಬಲಿತರೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲವು ಬಿಜೆಪಿ, ಸಿಪಿಎಂ ಕಾರ್ಯಕರ್ತರ ಮನೆಗಳಿಗೆ ಬೆಂಕಿ ಕೂಡ ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂ ಬೆಳಗ್ಗೆಯೇ ಹರಿಯಿತು ನೆತ್ತರು.. ಟಿಎಂಸಿ ನಾಯಕನನ್ನೇ ಗುಂಡಿಕ್ಕಿ ಕೊಂದು ಹಾಕಿದ್ರು!

https://newsfirstlive.com/wp-content/uploads/2023/11/Murder-TMC.jpg

Load More