newsfirstkannada.com

ಸೆಪ್ಟೆಂಬರ್​​ 11ಕ್ಕೆ ಏನಾದ್ರೂ ಕೆಲಸ ಹಾಕಿಕೊಂಡಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು!

Share :

02-09-2023

    ಶಕ್ತಿ ಯೋಜನೆಯಿಂದ ಖಾಸಗಿ ವಾಹನ ಮಾಲೀಕರಿಗೆ ನಷ್ಟ

    ಸೆಪ್ಟೆಂಬರ್​​ 11ಕ್ಕೆ ಇಡೀ ಬೆಂಗಳೂರು ಬಂದ್​, ಕಾರಣವೇನು?

    ಬೆಂಗಳೂರು ಜನ ಅಂತೂ ಇದು ಓದಲೇಬೇಕಾದ ಸ್ಟೋರಿ!

ಸೆಪ್ಟೆಂಬರ್‌ 11 ನೇ ತಾರೀಖು ಸಿಲಿಕಾನ್‌ ಸಿಟಿಯಲ್ಲಿ ಸುತ್ತಾಡೋಕೆ ನೀವೇನಾದ್ರೂ ಪ್ಲಾನ್‌ ಮಾಡಿದ್ರೆ, ಸರ್ಕಾರಿ ಬಸ್‌ ಅಥವಾ ನಿಮ್ಮ ಸ್ವಂತ ವೆಹಿಕಲ್‌ ಅರೆಂಜ್‌ ಮಾಡಿಕೊಳ್ಳೋದು ಬೆಸ್ಟ್‌. ಅವತ್ತು ಏನಾದ್ರೂ ಆಟೋ, ಟ್ಯಾಕ್ಸಿ ಅಂತಾ ನಂಬಿಕೊಂಡು ರಸ್ತೆಗೆ ಎಂಟ್ರಿ ಕೊಟ್ಟರೇ ಖಂಡಿತಾ ನಿಮಗೆ ಆಟೋ, ಟ್ಯಾಕ್ಸಿ ಸಿಗೋದು ಡೌಟೇ. ಏರ್‌ಪೋರ್ಟ್ ನಿಂದಲೂ ನಿಮಗೆ ಟ್ಯಾಕ್ಸಿ ಸಿಗಲ್ಲ.

ಶಕ್ತಿಯೋಜನೆ ಜಾರಿ ಬಳಿಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಇದೀಗ ಮತ್ತೊಂದು ಸುತ್ತಿನ ಸಮರ ಸಾರಿದೆ. ಶಕ್ತಿಯೋಜನೆ ಬಳಿಕ ನಷ್ಟ ಉಂಟಾಗಿದೆ ಅಂತಾ ತಮ್ಮ ಸಮಸ್ಯೆಗಳನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರ ಮುಂದಿಟ್ಟಿದ್ದ ಒಕ್ಕೂಟ, ಸರ್ಕಾರ ತಮ್ಮ ಬೇಡಿಕೆಗಳನ್ನ ಈಡೇರಿಸುತ್ತೆ ಅಂತಾ ನಂಬಿತ್ತು, ಸಚಿವರು ಕೂಡ ಆಗಸ್ಟ್‌ 31ರೊಳಗೆ ಸಮಸ್ಯೆಗಳನ್ನ ಬಗೆಹರಿಸುವ ಭರವಸೆ ನೀಡಿದ್ರು. ಆದ್ರೆ, ಕೊಟ್ಟ ಭರವಸೆಯನ್ನ ಈಡೇರಿಸದ ಹಿನ್ನೆಲೆ ಸಿಡಿದೆದ್ದ ಒಕ್ಕೂಟ, ಇದೇ ತಿಂಗಳ 11ನೇ ತಾರೀಕು ಬೆಂಗಳೂರು ಬಂದ್‌ ಮಾಡೋಕೆ ಕರೆ ನೀಡಿದೆ.

ಸೆಪ್ಟೆಂಬರ್‌ 10ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್‌ 11ರ ಮಧ್ಯರಾತ್ರಿ 12 ಗಂಟೆವರೆಗೆ ಬಂದ್‌ ನಡೆಸಲು ನಿರ್ಧರಿಸಿದ್ದು, ಇದಕ್ಕೆ 32 ಖಾಸಗಿ ಸಾರಿಗೆ ಸಂಘಗಳು ಬೆಂಬಲ ಸೂಚಿಸಿದೆ. ಸೆಪ್ಟೆಂಬರ್‌ 11ರಂದು ಖಾಸಗಿ ಬಸ್ ಗಳು, ಆಟೋ, ಟ್ಯಾಕ್ಸಿ, ಮಿನಿ ಲಗೇಜ್ ವಾಹನಗಳು, ಸ್ಕೂಲ್ ಬಸ್ ಗಳು ಸಂಪೂರ್ಣ ಬಂದ್‌ ಆಗಲಿದ್ದು, ಏರ್‌ಪೋರ್ಟ್ ಟ್ಯಾಕ್ಸಿ, ಓಲಾ, ಊಬರ್‌ ಸೇರಿ ಎಲ್ಲಾ ಖಾಸಗಿ ವಾಹನಗಳು ರಸ್ತೆಗೆ ಇಳಿಯೋದು ಡೌಟ್‌. ಇನ್ನು ಈ ಬಾರಿ ದೃಢ ನಿರ್ಧಾರ ತೆಗೆದುಕೊಂಡಿರೋ ಒಕ್ಕೂಟ, ಸರ್ಕಾರ ನಮ್ಮ ಬೇಡಿಕೆ ಈಡೇರಿಸ್ತೀವಿ ಅಂತಾ ಸ್ಪಷ್ಟನೆ ನೀಡೋ ತನಕ ಪ್ರತಿಭಟನೆ ನಿಲ್ಲಲ್ಲ ಅಂತಾ ಪಟ್ಟುಹಿಡಿದಿದೆ.

ಖಾಸಗಿ ಸಾರಿಗೆ ಒಕ್ಕೂಟ ಇಟ್ಟಿರೋ ಬೇಡಿಕೆಗಳೇನು?

  • ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ
  • ಬೈಕ್, ಱಪಿಡೋ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ
  • ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ
  • ಆಟೋ,ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು
  • ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡೋದಕ್ಕೆ ಬ್ರೇಕ್
  • ಖಾಸಗಿ ಬಸ್​ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ

ಒಟ್ಟಿನಲ್ಲಿ ಶಕ್ತಿಯೋಜನೆ ಜಾರಿಯಾದ ಬಳಿಕ ಶುರುವಾಗಿದ್ದ ಸರ್ಕಾರ ಹಾಗೂ ಖಾಸಗಿ ಸಾರಿಗೆ ಸಂಘಗಳ ಶೀತಲಸಮರ ಮತ್ತೊಂದು ಹಂತ ತಲುಪಿದ್ದು, ಸಂಘಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಸದ್ಯ ಸೆಪ್ಟೆಂಬರ್‌ 11ಕ್ಕೆ ಸುಮಾರು 8 ಲಕ್ಷ ವಾಹನಗಳ ಸಂಚಾರ ನಿಲ್ಲಿಸಲು ಒಕ್ಕೂಟ ಸಜ್ಜಾಗಿದ್ದು, ಬಂದ್‌ಗೆ ಯಾವ ರೀತಿ ರೆಸ್ಪಾನ್ಸ್‌ ಸಿಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಪ್ಟೆಂಬರ್​​ 11ಕ್ಕೆ ಏನಾದ್ರೂ ಕೆಲಸ ಹಾಕಿಕೊಂಡಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು!

https://newsfirstlive.com/wp-content/uploads/2023/07/Auto-Taxi-Bundh.jpg

Load More