ಸ್ಕೂಟರ್ ಮೇಲಿತ್ತು ಲಕ್ಷ ಲಕ್ಷ ನೋಡಿನ ಕಂತೆ
ಹಣ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ ವರುಣ್
ಸಿಸಿಟಿವಿ ನೀಡಿತು ಸುಳಿವು.. ಹೀರೋ ಆಗುಬೇಕಿದ್ದವನು ಝೀರೋ ಆದ
ಹತ್ತೇ ಹತ್ತು ಸೆಕೆಂಡ್ನಲ್ಲಿ ಲಕ್ಷಾಧಿಪತಿಯಾಗಿಬಿಟ್ಟಿದ್ದ ಯುವಕನ ಕತೆ ಇದು. ಬರಿಗೈನಲ್ಲಿ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ಹಣ ಸಿಕ್ಕಿದೆ ತಡ ಏನು ಮಾಡ್ಬೇಕು ಅನ್ನೋ ಗೊಂದಲದಲ್ಲೇ ಆರು ದಿನ ಕಳೆದಿದ್ದಾನೆ. ಆದರೆ ಕೊನೆಗೂ ಯುವಕ ಪೊಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಸೆರೆ ಹಿಡಿಯಲು ಪೊಲೀಸರು ಪಟ್ಟ ಸಾಹಸವೇ ವಿಚಿತ್ರ.
ಚಂದ್ರಲೇಔಟ್ ನಿವಾಸಿ ಪ್ರಮೋದ್ ಎಂಬಾತ ಸೈಟ್ ಖರೀದಿಸಲು 94 ಲಕ್ಷ ಕೂಡಿಸಿಟ್ಟಿದ್ದ. ಅದನ್ನ ಎಣಿಸಲು ಸ್ನೇಹಿತನ ಅಂಗಡಿಗೆ ಹಣ ತೆಗೆದುಕೊಂಡು ಹೋಗಲು ಮುಂದಾಗಿದ್ದ. ಅಲ್ಲದೇ, ವಕೀಲರ ಕಚೇರಿಗೆ ತೆರಳಲು ರೆಡಿಯಾಗಿದ್ದ. ಹೀಗಾಗಿ ಮನೆಯಿಂದ ಬ್ಯಾಗ್ ಹಾಗೂ ಬಾಕ್ಸ್ ನಲ್ಲಿ ಹಣ ಹಾಕಿಕೊಂಡು ಹೊರಟಿದ್ದ. ಮನೆಯ ಕೆಳಗೆ ಬರುತ್ತಿದ್ದಂತೆ ಕಾರಿನ ಡೋರ್ ಓಪನ್ ಮಾಡಬೇಕಿತ್ತು. ಹಾಗಾಗಿ ಕೈನಲ್ಲಿದ್ದ ಹಣವನ್ನು ಅಪರಿಚಿತ ಆ್ಯಕ್ಟಿವಾ ಸ್ಕೂಟರ್ ಮೇಲಿಟ್ಟು ಮರೆತು ಹೊರಟಿದ್ದ. ಆದರೆ ದಾಖಲಾತಿ ಇದ್ದ ಬ್ಯಾಗನ್ನು ಮಾತ್ರ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದ.
ಸ್ಕೂಟರ್ ಬಳಿಗೆ ಬಂದ ವರುಣ್ ಗೌಡಗೆ ಬಾಕ್ಸ್ವೊಂದು ಕಾಣಿಸಿದೆ. ಬಾಕ್ಸ್ ಓಪನ್ ಮಾಡಿದವನಿಗೆ ಕಂತೆ ಕಂತೆ ಹಣ ಕಂಡಿದೆ. ಸಿಕ್ಕಿದೆ ಅದೃಷ್ಟವೆಂದು ವರುಣ್ ಹಣ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ವರುಣ್ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು, 94 ಲಕ್ಷ ಹಣ ಸಿಕ್ಕಿದಂತೆ ಶ್ರೀನಗರ ಮನೆಯಲ್ಲಿ ಹಣವನ್ನ ಹಾಗೆ ಇಟ್ಟುಕೊಂಡಿದ್ದ. ಮಾತ್ರವಲ್ಲದೆ, 94 ಲಕ್ಷ ಹಣ ಏನು ಮಾಡಬೇಕು ಅನ್ನೋ ಗೊಂದಲದಲ್ಲೇ ಐದು ದಿನ ಕಳೆದಿದ್ದ. ಕೊನೆಗೆ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಸಲು ಪ್ಲಾನ್ ಮಾಡ್ಕೊಂಡಿದ್ದ. ಆದರೆ ಎಲ್ಲಿಯೂ ಹಣ ಕೊಡದೇ ಮನೆಯಲ್ಲಿ ಇಟ್ಟುಕೊಂಡಿದ್ದ.
ಅತ್ತ ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್ ಶಾಕ್ಗೆ ಒಳಗಾಗಿದ್ದಾನೆ. ಪ್ರಮೋದ್ ವಾಪಸ್ಸು ಬಂದು ನೋಡಿದಾಗ ಬೈಕ್,ಹಣ ಎರಡೂ ಇರಲಿಲ್ಲ ಎಂಬುದನ್ನು ಗಮನಿಸಿದ್ದಾನೆ. ಬಳಿಕ ಚಂದ್ರಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಹೊರಟ ಮಾರ್ಗವನ್ನು ಸಿಸಿಟಿವಿ ಮೂಲಕ ಪರಿಶೀಲಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ವರುಣ್ ಈ ಹಣವನ್ನು ಹಿಡಿದುಕೊಂಡು ಎಸ್ಕೇಪ್ ಆಗಿರೋದು ಬೆಳಕಿಗೆ ಬರುತ್ತದೆ. ಕೊನೆಗೂ ಆರೋಪಿಯನ್ನು ಹಿಡಿದ ಪೊಲೀಸರು 94 ಲಕ್ಷ ಹಣವನ್ನ ಆತನಿಂದ ರಿಕವರಿ ಮಾಡಿದ್ದಾರೆ.
ವರುಣ್ ಅದೇ ಹಣ ತಂದು ಪೊಲೀಸರಿಗೆ ಕೊಟ್ಟಿದ್ದಿದ್ರೆ ಹೀರೊ ಆಗುತ್ತಿದ್ದ. ಆದರೆ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಕಾರಣ ಈಗ ಆರೋಪಿ ಆಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ